ಪೊನ್ನಂಪೇಟೆ, ನ.೧೦: ವರ್ಷಂಪ್ರತಿ ಆಚರಿಸಲಾಗುವ, ವೀರಾಜಪೇಟೆ ಸಮೀಪದ ಇತಿಹಾಸ ಪ್ರಸಿದ್ಧ ಅಂಬಟ್ಟಿ ಮೊಕಾಂ ಉರೂಸ್ (ನೇರ್ಚೆ) ಅನ್ನು ಜನವರಿ ೨೮ ರಿಂದ ಫೆಬ್ರವರಿ ೧ ರವರೆಗೆ ನಡೆಸಲು ಅಂಬಟ್ಟಿ ಮುಸ್ಲಿಂ ಜಮಾಅತ್ ಆಡಳಿತ ಮಂಡಳಿ ತೀರ್ಮಾನಿಸಿದೆ.

೫ ದಿನಗಳ ಕಾಲ ನಡೆಯುವ ಅಂಬಟ್ಟಿ ಮೊಕಾಂ ಉರೂಸ್‌ನಲ್ಲಿ ಪ್ರತಿದಿನ ಧಾರ್ಮಿಕ ಪ್ರಭಾಷಣ ಸೇರಿದಂತೆ ಜನವರಿ ೩೧ರಂದು ಸಾರ್ವಜನಿಕ ಸಮ್ಮೇಳನ ಹಾಗೂ ಸಾಮೂಹಿಕ ಅನ್ನಸಂತರ್ಪಣೆ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ. ಕೋವಿಡ್-೧೯ ನಿರ್ಬಂಧದ ಎಲ್ಲಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ಉರೂಸ್ ಅನ್ನು ಆಯೋಜಿಸಲಾಗುವುದು ಎಂದು ಆಡಳಿತ ಮಂಡಳಿ ಅಧ್ಯಕ್ಷ ಕೆ.ಎ. ಯೂಸುಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.