ಕುಶಾಲನಗರ, ನ. ೧೦: ಹೆದ್ದಾರಿ ರಸ್ತೆ ಬದಿಯಲ್ಲಿ ದೊರೆತ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಒಳಗೊಂಡ ಸೂಟ್ ಕೇಸನ್ನು ಮಾಲೀಕರಿಗೆ ತಲುಪಿಸುವಲ್ಲಿ ಪ್ರಾಮಾಣಿಕತೆ ಮೆರೆದ ಕುಶಾಲನಗರದ ಯುವಕ ಸೋಮಶೇಖರ ಅವರನ್ನು ಸ್ಥಳೀಯ ಅಳಿಲು ಸೇವಾ ಟ್ರಸ್ಟ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಸ್ಥೆಯ ಅಧ್ಯಕ್ಷ ಹೆಚ್.ಡಿ. ಶಿವಾಜಿ, ಉಪಾಧ್ಯಕ್ಷ ನಿಡ್ಯಮಲೆ ದಿನೇಶ್ ಅವರ ನೇತೃತ್ವದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸೋಮಶೇಖರ್ ಅವರನ್ನು ಸನ್ಮಾನಿಸಿದರು.
ಈ ಸಂದರ್ಭ ಕಾರ್ಯದರ್ಶಿ ರಜನಿಕಾಂತ್, ಖಜಾಂಚಿ ಸಂಗೀತಾ ದಿನೇಶ್, ಪ್ರಮುಖರಾದ ಕೆ.ಜಿ. ಮನು, ಎಂ.ಡಿ. ಕೃಷ್ಣಪ್ಪ, ಮಂಜುನಾಥ್ ಅನಿತಾ, ಮಮತಾ ಮತ್ತು ಸದಸ್ಯರುಗಳು ಇದ್ದರು.