ಮಡಿಕೇರಿ, ನ.೧೦; ಕೊಡಗು ಗೌಡ ಯುವ ವೇದಿಕೆ ವತಿಯಿಂದ ಹತ್ತು ಕುಟುಂಬ ಹದಿನೆಂಟು ಗೋತ್ರದ ಗೌಡ ಜನಾಂಗದ ನಡುವೆ ಇಲ್ಲಿನ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಟುಂಬ-೨೦೨೧ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೇಚಪ್ಪನ, ಕುಟ್ಟನ, ಕೆದಂಬಾಡಿ, ಹಾಗೂ ತೆಕ್ಕಡೆ ಕುಟುಂಬ ತಂಡಗಳು ಪ್ರಿ ಕ್ವಾರ್ಟರ್ ಹಂತಕ್ಕೆ ಪ್ರವೇಶಿಸಿವೆ.

ಇಂದು ನಡೆದ ಪಂದ್ಯಾವಳಿಯಲ್ಲಿ ಪುದಿನೆರವನ ತಂಡ ೩ ವಿಕೆಟ್‌ಗೆ ೫೦ ರನ್ ಗಳಿಸಿದರೆ, ಬೊಳ್ಳುಮಾನಿ ತಂಡ ಒಂದು ವಿಕೆಟ್ ನಷ್ಟದಲ್ಲಿ ಗುರಿ ತಲಪಿತು. ಕೊಂಪುಳಿ ತಂಡ ೨ ವಿಕೆಟ್‌ಗೆ ೫೪ ರನ್ ಗಳಿಸಿದರೆ, ಕುಕ್ಕೇರ ತಂಡ ೩ ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಕುಟ್ಟನ ತಂಡ ೩ ವಿಕೆಟ್‌ಗೆ ೬೩ ರನ್ ಗಳಿಸಿದರೆ, ಕೋಳುಮುಡಿಯನ ತಂಡ ೪ ವಿಕೆಟ್‌ಗೆ ೩೨ ರನ್ ಮಾತ್ರ ಗಳಿಸಿ ಸೋಲನುಭವಿಸಿತು. ಕೋಡಿ ತಂಡ ೪ವಿಕೆಟ್‌ಗೆ ೬೧ರನ್ ಗಳಿಸಿದರೆ, ಹೊಸಮನೆ ತಂಡ ೪ವಿಕೆಟ್‌ಗೆ ೫೬ ರನ್ ಗಳಿಸಿ ಸೋಲನುಭವಿಸಿತು. ಕುದುಕುಳಿ ತಂಡ ೫ವಿಕೆಟ್‌ಗೆ ೨೯ರನ್ ಗಳಿಸಿದರೆ, ಕೆದಂಬಾಡಿ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಗುರಿ ಸಾಧಿಸಿತು. ಕುಟ್ಟನ ತಂಡ ೫ವಿಕೆಟ್‌ಗೆ ೪೭ ರನ್ ಗಳಿಸಿದರೆ, ಎಡಿಕೇರಿ ತಂಡ ೪ ವಿಕೆಟ್ ಕಳೆದು ಕೊಂಡು ೩೮ ರನ್ ಗಳಿಸಿ ಸೋಲನುಭವಿಸಿತು.

ಮತ್ತೊಂದು ಪಂದ್ಯದಲ್ಲಿ ಕೋಳಿಬೈಲು ತಂಡ ೨ ವಿಕೆಟ್‌ಗೆ ೩೫ ರನ್ ಗಳಿಸಿದರೆ, ಬೊಳ್ಳುಮಾನಿ ತಂಡ ೧ವಿಕೆಟ್ ನಷ್ಟದಲ್ಲಿ ಗೆಲುವು ಸಾಧಿಸಿತು. ಬಾಳಾಡಿ ತಂಡ ೩ ವಿಕೆಟ್‌ಗೆ ೫೦ ರನ್ ಗಳಿಸಿದರೆ, ತೇನನ ತಂಡ ಯಾವದೇ ವಿಕೆಟ್ ನಷ್ಟವಿಲ್ಲದೆ ಜಯಗಳಿಸಿತು.ಕುಕ್ಕೇರ ತಂಡ ೪ವಿಕೆಟ್‌ಗೆ ೨೬ ರನ್ ಗಳಿಸಿದರೆ, ತೆಕ್ಕಡೆ ತಂಡ ೨ವಿ ನಷ್ಟದಲ್ಲಿ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಪ್ರವೇಶಿಸಿತು.

ಕುಲ್ಲಚೆಟ್ಟಿ ತಂಡ ೩ ವಿಕೆಟ್‌ಗೆ ೩೮ ರನ್ ಗಳಿಸಿದರೆ, ಕೋಡಿ ತಂಡ ೧ವಿಕೆಟ್ ಕಳೆದುಕೊಂಡು ೯ ವಿಕೆಟ್‌ಗಳ ಜಯ ಸಂಪಾದಿಸಿತು. ಕೇಚಪ್ಪನ ತಂಡ ೨ ವಿಕೆಟ್‌ಗೆ ೭೯ ರನ್ ಗಳಿಸಿದರೆ, ತೇನನ ತಂಡ ೨ ವಿಕೆಟ್ ಕಳೆದುಕೊಂಡು ೬೩ರನ್ ಗಳಿಸಿ ಸೋಲನುಭವಿಸಿತು. ತೆಕ್ಕಡೆ ತಂಡ ೧ವಿಕೆಟ್‌ಗೆ ೬೭ರನ್ ಗಳಿಸಿದರೆ, ಬೊಳ್ಳುಮಾನಿ ತಂಡ ೨ವಿಕೆಟ್‌ಗೆ ೫೩ ರನ್ ಗಳಿಸಿ ಸೋಲನುಭವಿಸಿತು. ಕುಟ್ಟನ ತಂಡ ೪ ವಿಕೆಟ್‌ಗೆ ೫೬ ರನ್ ಗಳಿಸಿದರೆ, ಕೋಡಿ ತಂಡ ೪ ವಿಕೆಟ್ ಕಳೆದುಕೊಂಡು ೪೪ ರನ್ ಗಳಿಸಿ ಸೋಲನುಭವಿಸಿತು.