ಸೋಮವಾರಪೇಟೆ, ನ. ೮: ಗರ್ವಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಟೆಬೆಟ್ಟ ಸಂಪರ್ಕ ರಸ್ತೆಯು, ಸಾರ್ವಜನಿಕ ರಸ್ತೆಯಾಗಿದ್ದು, ಇಲ್ಲಿ ಯಾವುದೇ ರೀತಿಯ ವಾಹನ ಪ್ರವೇಶ ಸುಂಕವನ್ನು ವಸೂಲಾತಿ ಮಾಡಲು ಪಂಚಾಯಿತಿಯಿAದ ಅನುಮತಿ ನೀಡಿಲ್ಲ. ಇದರೊಂದಿಗೆ ಪಂಚಾಯಿತಿ ಹಾಗೂ ಯಾವುದೇ ಇಲಾಖೆಯಿಂದ ಸಿಬ್ಬಂದಿಗಳನ್ನೂ ನಿಯೋಜಿಸಿಲ್ಲ ಎಂದು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ಪರವಾಗಿ ಅಧ್ಯಕ್ಷ ನಂಜುAಡ ಅವರು ತಿಳಿಸಿದ್ದಾರೆ.
(ಮೊದಲ ಪುಟದಿಂದ) ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ಪ್ರವಾಸಿ ತಾಣವಾಗಿರುವ ಕೋಟೆಬೆಟ್ಟಕ್ಕೆ ಪ್ರವಾಸಿಗರು ಆಗಮಿಸುತ್ತಿದ್ದು, ಇಲ್ಲಿಗೆ ಸಂಪರ್ಕ ಕಲ್ಪಿಸಲು ಸಾರ್ವಜನಿಕ ರಸ್ತೆ ನಿರ್ಮಾಣವಾಗಿದೆ. ಈ ಹಿನ್ನೆಲೆ ಸಾರ್ವಜನಿಕರು ಯಾವುದೇ ಪ್ರವೇಶ ಶುಲ್ಕವನ್ನು ಯಾರಿಗೂ ಪಾವತಿಸಬಾರದು ಎಂದು ನಂಜುAಡ ಅವರು ಮಾಹಿತಿ ನೀಡಿದ್ದಾರೆ.
ಫಲಕ ತೆರವು-ಪೊಲೀಸ್ ದೂರು: ಕೋಟೆಬೆಟ್ಟಕ್ಕೆ ಪ್ರವೇಶಿಸುವ ಪ್ರವಾಸಿಗರಿಂದ ಸುಂಕ ವಸೂಲಾತಿ ಮಾಡಲಾಗುತ್ತಿದ್ದು, ಈಗಾಗಲೇ ಪರ ವಿರೋಧ ಚರ್ಚೆಗಳು ಆರಂಭವಾಗಿವೆ. ಈ ನಡುವೆ ಗ್ರಾಮ ಪಂಚಾಯಿತಿಯಿAದ ಕೋಟೆಬೆಟ್ಟದ ರಸ್ತೆ ಬದಿಯಲ್ಲಿ ತಾ. ೨ರಂದು ಫಲಕ ಅಳವಡಿಸಿದ್ದು, ಇದರಲ್ಲಿ ಸಾರ್ವಜನಿಕರು ಯಾವುದೇ ಸುಂಕ ಪಾವತಿಸಬಾರದು. ಇಲ್ಲಿ ಸುಂಕ ವಸೂಲಾತಿ ಮಾಡುವುದು ಶಿಕ್ಷಾರ್ಹ ಎಂದು ಬರೆಯಲಾಗಿತ್ತು. ಈ ಫಲಕವನ್ನು ತಾ. ೪ರಂದು ಯಾರೋ ಕಿತ್ತೆಸೆದಿದ್ದು, ಇದೀಗ ಸ್ಥಳದಲ್ಲಿ ಫಲಕ ಇಲ್ಲವಾಗಿದೆ. ಪಂಚಾಯಿತಿಯಿAದ ಅಳವಡಿಸಿದ್ದ ಫಲಕವನ್ನು ಕಿತ್ತಿರುವ ಬಗ್ಗೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ರಜನಿ ಅವರು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ಸ್ವೀಕರಿಸಿರುವ ಠಾಣಾಧಿಕಾರಿಗಳು ಮುಂದಿನ ಕ್ರಮ ಕೈಗೊಂಡಿದ್ದಾರೆ.