ಮಡಿಕೇರಿ, ನ. ೮: ಕೋವಿಡ್ ಬಿಗಿನಿಯಮಗಳ ಸಡಿಲಿಕೆ ಹಿನ್ನೆಲೆ ಪೂರ್ವ ಪ್ರಾಥಮಿಕ ಶಾಲೆ ಹಾಗೂ ಅಂಗನಾಡಿ ಪುನಾರಾರಂಭಗೊAಡಿದ್ದು, ಶಾಲೆಯ ಅಂಗಳದಲ್ಲಿ ಚಿಣ್ಣರ ಕಲರವ ಕೇಳಿ ಬಂತು. ಉತ್ಸಾಹದಿಂದ ಆಗಮಿಸಿದ ಚಿಣ್ಣರು ಕೋವಿಡ್ ನಿಯಮ ಪಾಲನೆಯೊಂದಿಗೆ ಭೌತಿಕ ತರಗತಿಗೆ ಹಾಜರಾದರು. ಸೂಕ್ತ ಮುಂಜಾಗ್ರತೆ ಕೈಗೊಂಡು ತರಗತಿಗಳನ್ನು ನಡೆಸಲಾಯಿತು. ಜಿಲ್ಲೆಯ ೭೪ ಎಲ್.ಕೆ.ಜಿ. ಹಾಗೂ ಯು.ಕೆ.ಜಿ ತರಗತಿಗಳು ಹಾಗೂ ೮೬೯ ಅಂಗನವಾಡಿ ಕೇಂದ್ರಗಳು ಇಂದಿನಿAದ ಪುನಾರಾರಂಭಗೊAಡವು ದೈಹಿಕ ಅಂತರ, ಮಾಸ್ಕ್ ಧರಿಸುವಿಕೆ, ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿತ್ತು. ಅಧಿಕಾರಿಗಳು ಹಾಗೂ ಶಿಕ್ಷಕರು, ಶಾಲಾ ಸಿಬ್ಬಂದಿಗಳು ಸೂಕ್ತ ಮುಂಜಾಗ್ರತೆ ಕೈಗೊಂಡಿದ್ದರು.
ಬರೋಬ್ಬರಿ ೨೧ ತಿಂಗಳ ಬಳಿಕ ಶಾಲೆಗೆ ಬಂದ ವಿದ್ಯಾರ್ಥಿಗಳನ್ನು ಶಿಕ್ಷಕರು ಆತ್ಮೀಯವಾಗಿ ಬರಮಾಡಿಕೊಂಡು ಸ್ಥೆöÊರ್ಯ ತುಂಬಿದರು. ತಳಿರು-ತೋರಣದಿಂದ ವಿದ್ಯಾಲಯ ಸಿಂಗಾರಗೊAಡಿತ್ತು. ಒಂದು ಮೇಜಿನಲ್ಲಿ ೨ ಅಥವಾ ೩ ವಿದ್ಯಾರ್ಥಿಗಳು ಕೂರಲು ವ್ಯವಸ್ಥೆ ಹಾಗೂ ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಲಾಗಿತ್ತು. ಅಂಗನವಾಡಿ ಕೇಂದ್ರಗಳಲ್ಲಿ ದಿನಕ್ಕೆ ಗರಿಷ್ಠ ೧೦ ವಿದ್ಯಾರ್ಥಿಗಳು ಮಾತ್ರ ಆಗಮಿಸಲು ಅವಕಾಶ ಕಲ್ಪಿಸಲಾಗಿತ್ತು. ದಿನ ಬಿಟ್ಟು ದಿನ ಇತರ ವಿದ್ಯಾರ್ಥಿಗಳ ಹಾಜರಾಗಬೇಕಾಗಿದ್ದು, ಈ ನಿಟ್ಟಿನಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕ್ರಮಕೈಗೊಂಡಿದೆ. ಎಲ್.ಕೆ.ಜಿ. ಹಾಗೂ ಯು.ಕೆ.ಜಿ. ತರಗತಿಗಳು ಅರ್ಧ ದಿನ ನಡೆದವು. ಅಂಗನವಾಡಿ ಬೆಳಿಗ್ಗೆ ೧೦ ರಿಂದ ೧೨ರ ತನಕ ಮಾತ್ರ ನಡೆಯಿತು. ಮಕ್ಕಳು ಪೋಷಕರ ಒಪ್ಪಿಗೆ ಪತ್ರ ದಾಖಲುಪಡಿಸಿದ್ದಲ್ಲಿ ಮಾತ್ರ ಶಾಲೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿತ್ತು. ೨ ಡೋಸ್ ಲಸಿಕೆ ಆದ ಸಿಬ್ಬಂದಿಗಳು ಮಾತ್ರ
(ಮೊದಲ ಪುಟದಿಂದ) ಕರ್ತವ್ಯಕ್ಕೆ ಹಾಜರಾಗಿದ್ದು, ಶಾಲೆಗೆ ಬರುವ ಚಿಣ್ಣರನ್ನು ತಪಾಸಣೆ ನಡೆಸಲಾಯಿತು.
ಶೇ. ೩೮.೭೩ ಹಾಜರಾತಿ : ಜಿಲ್ಲೆಯಲ್ಲಿ ಒಟ್ಟು ೭೪ ಶಾಲೆಯಲ್ಲಿ ೩೫೬೮ ವಿದ್ಯಾರ್ಥಿಗಳ ಪೈಕಿ ಎಲ್.ಕೆ.ಜಿ.ಯಲ್ಲಿ ೧೪೭೮ ಹಾಗೂ ಯು.ಕೆ.ಜಿಯಲ್ಲಿ ೨೦೯೦ ವಿದ್ಯಾರ್ಥಿಗಳಿದ್ದು, ಪ್ರಥಮ ದಿನದಂದು ೧೩೮೨ ವಿದ್ಯಾರ್ಥಿಗಳು ಹಾಜರಾದರು. ಮಡಿಕೇರಿ ತಾಲೂಕಿನಲ್ಲಿ ಒಟ್ಟು ೭೫೨ ವಿದ್ಯಾರ್ಥಿಗಳ ಪೈಕಿ ೩೨೩, ಸೋಮವಾರಪೇಟೆ ತಾಲೂಕಿನಲ್ಲಿ ೧೮೬೫ ಪೈಕಿ ೬೪೫, ವೀರಾಜಪೇಟೆ ತಾಲೂಕಿನಲ್ಲಿ ೯೫೧ ವಿದ್ಯಾರ್ಥಿಗಳ ಪೈಕಿ ೪೧೪ ವಿದ್ಯಾರ್ಥಿಗಳ ಹಾಜರಾತಿ ಇತ್ತು. ಜಿಲ್ಲೆಯಲ್ಲಿ ಶೇ. ೩೮.೭೩ ಹಾಜರಾತಿ ದಾಖಲಾಗಿದೆ. ೮೬೯ ಅಂಗನವಾಡಿ ಕೇಂದ್ರದಲ್ಲಿ ಅಂದಾಜು ೧೫ ಸಾವಿರ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಪುಟಾಣಿಗಳನ್ನು ಸ್ವಾಗತಿಸಿದ ರಂಜನ್
ಸೋಮವಾರಪೇಟೆ : ಕೊರೊನಾ ಲಾಕ್‌ಡೌನ್‌ನಿಂದಾಗಿ ಕಳೆದ ೨೧ ತಿಂಗಳಿನಿAದ ಬಂದ್ ಆಗಿದ್ದ ಅಂಗನವಾಡಿಗಳು, ಸರ್ಕಾರದ ಆದೇಶದಂತೆ ಇಂದಿನಿAದ ಆರಂಭಗೊಳ್ಳುತ್ತಿದ್ದು, ತಾಲೂಕಿನ ಎಲ್ಲಾ ಅಂಗನವಾಡಿಗಳಿಗೆ ತೆರಳಿ ಸೌಲಭ್ಯಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಸೂಚಿಸಿದರು. ಇಲ್ಲಿನ ವೆಂಕಟೇಶ್ವರ ಬ್ಲಾಕ್‌ನಲ್ಲಿರುವ ಅಂಗನವಾಡಿಗೆ ಆಗಮಿಸಿದ ಪುಟಾಣಿಗಳಿಗೆ ಗುಲಾಬಿ ಹೂಗಳನ್ನು ನೀಡಿ ಸ್ವಾಗತಿಸಿದ ಶಾಸಕರು, ನಂತರ ನಡೆದ ಸಭೆಯಲ್ಲಿ ಮಾತನಾಡಿದರು.
ಮಕ್ಕಳಿಗೆ ಶಿಕ್ಷಣ ನೀಡುವ ಉದ್ದೇಶದಿಂದ ಮುಚ್ಚಲ್ಪಟ್ಟಿದ್ದ ಅಂಗನವಾಡಿಗಳನ್ನು ಇದೀಗ ತೆರೆದು ಪುನರ್‌ಪ್ರಾರಂಭ ಮಾಡಲಾಗುತ್ತಿದೆ. ಅಂಗನವಾಡಿಗಳಲ್ಲಿ ಸ್ವಚ್ಛತೆ, ಮಕ್ಕಳ ರಕ್ಷಣೆ, ಆರೋಗ್ಯದ ಕಾಳಜಿ, ಪೌಷ್ಠಿಕಾಂಶಯುಕ್ತ ಆಹಾರಗಳ ಬಗ್ಗೆ ಖುದ್ದು ಪರಿಶೀಲನೆ ನಡೆಸಬೇಕು ಎಂದು ಸಿಡಿಪಿಓ ಅಣ್ಣಯ್ಯ ಅವರಿಗೆ ಸೂಚಿಸಿದರು. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಂಗನವಾಡಿಗಳ ಮೂಲಕ ಸರ್ಕಾರವು ಪೌಷ್ಠಿಕಾಂಶಯುಕ್ತ ಆಹಾರ ನೀಡುತ್ತಿದ್ದು, ಒಂದು ವೇಳೆ ಕಳಪೆ ಗುಣಮಟ್ಟದ ಆಹಾರ ಸರಬರಾಜು ಆಗುತ್ತಿದ್ದರೆ ತಕ್ಷಣ ಗಮನಕ್ಕೆ ತರಬೇಕು. ಮಕ್ಕಳ ಶೈಕ್ಷಣಿಕ ಬೆಳವಣಿಗೆಯೊಂದಿಗೆ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕು ಎಂದು ರಂಜನ್ ತಿಳಿಸಿದರು.
ಈ ಸಂದರ್ಭ ಪಟ್ಟಣ ಪಂಚಾಯಿತಿ ಅಧ್ಯಕ್ಷ ಪಿ.ಕೆ. ಚಂದ್ರು, ಸದಸ್ಯರುಗಳಾದ ಮೃತ್ಯುಂಜಯ, ಬಿ.ಆರ್. ಮಹೇಶ್, ಮೋಹಿನಿ, ಅಂಗನವಾಡಿ ಕಾರ್ಯಕರ್ತೆ ತಾರಾ ಲೋಬೋ ಸೇರಿದಂತೆ ಮಕ್ಕಳ ಪೋಷಕರು ಉಪಸ್ಥಿತರಿದ್ದರು.
ಸಿದ್ದಾಪುರ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಂಗನವಾಡಿ ಕೇಂದ್ರಗಳು ಇಂದಿನಿAದ ಆರಂಭಗೊAಡಿತ್ತು. ನೆಲ್ಯಹುದಿಕೇರಿ ಗ್ರಾಮದ ಹೊಳೆಕೆರೆ ಅಂಗನವಾಡಿ ಕೇಂದ್ರದಲ್ಲಿ ಅಂಗನವಾಡಿ ಶಿಕ್ಷಕಿ ಹಾಗೂ ಸಹಾಯಕರು ಮಕ್ಕಳನ್ನು ಬರಮಾಡಿಕೊಂಡು ಸಿಹಿ ಹಂಚಿದರು. ಮಕ್ಕಳು ಕೂಡ ಸಂತಸದಲ್ಲಿ ಕೇಂದ್ರಕ್ಕೆ ಆಗಮಿಸಿದರು. ನಾಪೆೆÇÃಕ್ಲು : ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಇಂದಿನಿAದ ಎಲ್.ಕೆ.ಜಿ. ಮತ್ತು ಯು.ಕೆ.ಜಿ. ತರಗತಿಗಳು ಪ್ರಾರಂಭಗೊAಡಿದ್ದು, ಮಕ್ಕಳು ಶಾಲೆಗೆ ಪೋಷಕರೊಂದಿಗೆ ಖುಷಿಯಿಂದ ಬಂದರು.
ಈ ಸಂದರ್ಭ ಮಾತನಾಡಿದ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲೆ ಸೌಭಾಗ್ಯ, ತರಗತಿಗಳಿಗೆ ಸ್ಯಾನಿಟೈಸ್ ಮಾಡಲಾಗಿದೆ ಮತ್ತು ಮಕ್ಕಳಿಗೆ ಕುಡಿಯಲು ಬಿಸಿ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು. *ಗೋಣಿಕೊಪ್ಪ: ಪೊನ್ನಂಪೇಟೆ ಮತ್ತು ವೀರಾಜಪೇಟೆ ತಾಲೂಕಿನಲ್ಲಿ ಪೂರ್ವ ಪ್ರಾಥಮಿಕ ತರಗತಿಗಳಿಗೆ ಚಿಣ್ಣರನ್ನು ಆದರದಿಂದ ಸ್ವಾಗತಿಸಲಾಯಿತು.
ತಾಲೂಕಿನ ಅಧಿಕಾರಿಗಳು, ಗ್ರಾ.ಪಂ. ಅಧ್ಯಕ್ಷರು, ಸದಸ್ಯರುಗಳು, ಅಂಗನವಾಡಿ ಶಿಕ್ಷಕಿಯರು ಮಕ್ಕಳಿಗೆ ಹೂಗುಚ್ಚ ನೀಡಿ ತರಗತಿಗೆ ಆಹ್ವಾನಿಸಲಾಯಿತು. ತಾಲೂಕಿನ ೩೩೦ ಅಂಗನವಾಡಿ ಕೇಂದ್ರಗಳು ಚಿಣ್ಣರ ಆಗಮನದಿಂದ ಪುಳಕಿತಗೊಂಡವು. ಕಳೆದ ಎರಡು ವರ್ಷಗಳಿಂದ ಚಿಣ್ಣರ ಕಲರವದಿಂದ ಮರೆಯಾಗಿದ್ದ ಅಂಗನವಾಡಿ ಕೇಂದ್ರಗಳು ಮಕ್ಕಳ ಆಗಮನದಿಂದ ಹೊಸ ಚೈತನ್ಯ ತುಂಬಿಕೊಳ್ಳಲು ಕಾರಣವಾಯಿತು.
ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಅಧಿಕಾರಿ ಕೆ.ಆರ್. ರಾಜೇಶ್ ಮತ್ತು ತಾಲೂಕು ಕಾರ್ಯನಿರ್ವಹಣಾಧಿಕರಿ ಕೊಣಿಯಂಡ ಅಪ್ಪಣ್ಣ ಅವರು ಪೊನ್ನಂಪೇಟೆಯ ೩ನೇ ಮತ್ತು ೫ನೇ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ಸ್ವಾಗತಿಸಿದರು.
ಗೋಣಿಕೊಪ್ಪ ಹರಿಶ್ಚಂದ್ರಪುರದ ಕಾವೇರಿ ಮಹಿಳಾ ಸಮಾಜದ ಅಂಗನವಾಡಿ ಕಟ್ಟಡವನ್ನು ತಳಿರು ತೋರಣಗಳಿಂದ ಸಿಂಗರಿಸಿ ಚಿಣ್ಣರ ಸ್ವಾಗತ ನಡೆಯಿತು. ಗ್ರಾ.ಪಂ. ಸದಸ್ಯರುಗಳಾದ ಪ್ರಮೋದ್‌ಗಣಪತಿ, ಮಂಜುಳಾ, ಶಾಹಿನ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ತಿಮ್ಮಯ್ಯ, ಅಂಗನವಾಡಿ ಕೇಂದ್ರದ ಶಿಕ್ಷಕಿ ಲತಾ ಸೇರಿದಂತೆ ಪೋಷಕರು, ಮಕ್ಕಳು ಇದ್ದರು. ಸುಂಟಿಕೊಪ್ಪ : ಹಲವು ಸಮಯದ ಬಳಿಕ ಅಂಗನವಾಡಿ ಹಾಗೂ ಎಲ್‌ಕೆಜಿ, ಯುಕೆಜಿ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ಉತ್ಸಾಹದಿಂದ ಆಗಮಿಸಿದರು. ಗ್ರಾಮ ಪಂಚಾಯಿತಿಯಿAದ ಅಂಗನವಾಡಿ ಕೇಂದ್ರಕ್ಕೆ ಶಾಲಾ ಕೊಠಡಿ ಪೀಠೋಪಕರಣಗಳನ್ನು ಪಂಚಾಯಿತಿಯಿAದ ಸ್ವಚ್ಛಗೊಳಿಸಿ ಸ್ಯಾನಿಟೈಸರ್‌ಗೊಳಿಸಲಾಗಿದ್ದು ಗಂಟೆಗೊಮ್ಮೆ ಮಕ್ಕಳ ಕೈಯನ್ನು ಬಿಸಿನೀರು ಸಾಬೂನಿನಿಂದ ಶಿಕ್ಷಕಿಯರು ಹಾಗೂ ಸಹಾಯಕಿಯರು ಕೈ ತೊಳೆಸಿ ಸರಕಾರದ ಮಾರ್ಗಸೂಚಿಯನ್ವಯ ತರಗತಿ ನಡೆಸಿದರು.
ಸುಂಟಿಕೊಪ್ಪ ಗುಡ್ಡಪ್ಪ ರೈ ಬಡಾವಣೆಯ ಅಂಗನವಾಡಿ ಕೇಂದ್ರವನ್ನು ೧ನೇ ವಿಭಾಗದ ಸದಸ್ಯರುಗಳಾದ ಪಿ.ಎಫ್.ಸಬಾಸ್ಟೀನ್, ಸೋಮನಾಥ್ ಸಮ್ಮುಖದಲ್ಲಿ ಪುಟಾಣಿಗಳು ಉದ್ಘಾಟಿಸಿದ್ದರು. ಮಕ್ಕಳಿಗೆ ಪುಷ್ಪ ಹಾಗೂ ಸಿಹಿ ತಿಂಡಿಯನ್ನು ನೀಡಿ ಸ್ವಾಗತಿಸಿದರು. ಈ ಸಂದರ್ಭ ಅಂಗನವಾಡಿ ಕಾರ್ಯಕರ್ತೆ ಶೋಭ, ಸಹಾಯಕಿ ಹಾಗೂ ಮಕ್ಕಳ ಪೋಷಕರು ಇದ್ದರು.