ಮಡಿಕೇರಿ/ ವೀರಾಜಪೇಟೆ, ನ. ೮: ಕೊಡಗು ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಸುಮಾರು ೫೦,೦೦೦ದಷ್ಟು ನೋಟ್ ಪುಸ್ತಕಗಳನ್ನು ಸಮಾಜ ಸೇವಕ ಹಾಗೂ ಉದ್ಯಮಿ ಕದ್ದಣಿಯಂಡ ಹರೀಶ್ ಬೋಪಣ್ಣ ಕೊಡುಗೆ ನೀಡಲು ಪ್ರಾರಂಭಿಸಿದ್ದಾರೆ. ಅವರ ಅಭಿಪ್ರಾಯದ ಅನ್ವಯ ಕೊರೊನಾ ಸಂದರ್ಭ ಜಿಲ್ಲೆಯಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಅನೇಕ ಪೋಷಕರು ತಮ್ಮ ಮಕ್ಕಳಿಗೆ ನೋಟ್ ಪುಸ್ತಕಗಳನ್ನು ಖರೀದಿಸಲು ಕಷ್ಟವಾಗುವಷ್ಟು ಸಮಸ್ಯೆಯುಂಟಾಗಿದೆ. ಇಂತಹ ಸಂದರ್ಭ ಮಕ್ಕಳ ಭವಿಷ್ಯವನ್ನು ಶೈಕ್ಷಣಿಕವಾಗಿ ಮುಂದುವರೆಸಲು ತನ್ನ ಕೈಲಾದ ನೆರವು ನೀಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಾರಂಭಿಕವಾಗಿ ಅವರು ಇಂದು ಮಡಿಕೇರಿಯ ಜೂನಿಯರ್ ಕಾಲೇಜು ಸಭಾಭವನದಲ್ಲಿ ಮಕ್ಕಳಿಗೆ ಪುಸ್ತಕಗಳನ್ನು ವಿತರಿಸುವ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಈ ಸಂದರ್ಭ ಅತಿಥಿಯಾಗಿ ಆಗಮಿಸಿದ್ದ ಮೂಡಾದ ಮಾಜಿ ಅಧ್ಯಕ್ಷ ಹಾಗೂ ನಗರಸಭಾ ಮಾಜಿ ಸದಸ್ಯ ಚುಮ್ಮಿ ದೇವಯ್ಯ ಅವರು ಮಾತನಾಡಿ, ಮಕ್ಕಳು ದೃಢ ಸಂಕಲ್ಪದಿAದ ಹೆಜ್ಜೆಯಿರಿಸಿ ಕೊರೊನಾದಿಂದ ಉಂಟಾದ ನೋವನ್ನು ಮರೆತು ಶಿಕ್ಷಣವನ್ನು ಮುಂದುವರೆಸುವAತೆ ಸಲಹೆಯಿತ್ತರು. ಸಭಾಧ್ಯಕ್ಷತೆ ವಹಿಸಿದ್ದ ‘ಶಕ್ತಿ’ ಪ್ರಧಾನ

(ಮೊದಲ ಪುಟದಿಂದ) ಸಂಪಾದಕ ಜಿ. ರಾಜೇಂದ್ರ ಅವರು ಮಾತನಾಡಿ, ಮಕ್ಕಳು ಆತ್ಮವಿಶ್ವಾಸದಿಂದ ಹೆಜ್ಜೆಯಿರಿಸಿ ಮಾನಸಿಕವಾಗಿ ಧೃತಿಗೆಡದೆ, ಶೈಕ್ಷಣಿಕ ಸಾಧನೆಯೊಂದಿಗೆ ಇತರ ಉತ್ತಮ ಹವ್ಯಾಸಗಳ ಚಟುವಟಿಕೆಗಳನ್ನು ಕೂಡ ಅಭ್ಯಸಿಸಿ ಸಾಧನೆಗೈಯುವಂತೆ ಸಲಹೆಯಿತ್ತರು. ಪ್ರಾಂಶುಪಾಲೆ ನಳಿನಿ ಸ್ವಾಗತಿಸಿದರು. ಪ್ರಾಧ್ಯಾಪಕ ಶ್ರೀನಿವಾಸ್ ಉಪಸ್ಥಿತರಿದ್ದರು. ಶಿಕ್ಷಕಿ ಸೌಮ್ಯ ವಂದಿಸಿದರು.

ವೀರಾಜಪೇಟೆಯಲ್ಲಿಯೂ ವಿತರಣೆ

೨ನೇ ಕಾರ್ಯಕ್ರಮವಾಗಿ ಹರೀಶ್ ಬೋಪಣ್ಣ ಅವರು ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯ ದ್ವಿಶತಕ ಸವಿನೆನಪಿನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ವಿದ್ಯಾ ಸಂಸ್ಥೆಯ ಧರ್ಮಗುರುಗಳಾದ ರೆ.ಫಾ. ಮುದಲೈ ಮುತ್ತು ಅವರು ಈ ಸಂದರ್ಭ ಮಾತನಾಡಿ ‘ತಾನು ಗಳಿಸುವ ಸಂಪತ್ತಿನಲ್ಲಿ ಇತರರಿಗೆ ದಾನದ ರೂಪದಲ್ಲಿ ಯಾರು ನೀಡುತ್ತಾನೋ ಆತ ದೇವರ ಅತಿಯಾದ ಪ್ರೀತಿಗೆ ಪಾತ್ರನಾಗುತ್ತಾನೆ’ ಎಂದು ಹರೀಶ್ ಬೋಪಣ್ಣ ಅವರ ಸೇವಾ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಸಭೆಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯರಾದ ಪಟ್ಟಡ ರಂಜಿ ಪೂಣಚ್ಚ ಮತ್ತು ದೇಚಮ್ಮ ಕಾಳಪ್ಪ ಇವರುಗಳು ಮಾತನಾಡಿದರು. ವೇದಿಕೆಯಲ್ಲಿ ಪಂಚಾಯಿತಿ ಸದಸ್ಯರುಗಳಾದ ರಾಜೇಶ್ ಪದ್ಮನಾಭ, ಹೆಚ್.ಎಸ್. ಮತೀನ್, ಫೌಜಿಯಾ ತಬ್ಸಮ್, ಪ್ರೌಢಶಾಲಾ ವಿಭಾಗದ ಮುಖ್ಯಸ್ಥರಾದ ಬೆನ್ನಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯಸ್ಥರಾದ ಸಿಸ್ಟರ್ ಮೆಟೀಲ್ಡಾ ಹಾಗೂ ಮಾರ್ವಿನ್ ಲೋಬೋ ಉಪಸ್ಥಿತರಿದ್ದರು. -ಕೆ.ಕೆ.ಎಸ್.