ಮಡಿಕೇರಿ, ನ. ೮: ಕೊಡಗು ಯುವ ಸೇನೆಯ ಸಾಮಾಜಿಕ ಜಾಲತಾಣ ವಿಭಾ ಗದ ಸಂಚಾಲಕಿ ಯಾಗಿ ಶಿಲ್ಪಾ ಕಿರಣ್ ನೇಮಕಗೊಂಡಿದ್ದಾರೆ. ಜಿಲ್ಲಾ ಸಂಚಾಲಕ ಮಾಚೆಟ್ಟಿರ ಸಚಿನ್ ಮಂದಣ್ಣ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಅಶ್ವತ್ಥ್ ಹರಪಳ್ಳಿ ಅವರ ಸೂಚನೆಯ ಮೇರೆಗೆ ಈ ಜವಾಬ್ದಾರಿಯನ್ನು ನೀಡಲಾಗಿದೆ ಎಂದು ಕೊಡಗು ಯುವ ಸೇನೆಯ ಪ್ರಮುಖ ಕುಲದೀಪ್ ಪೂಣಚ್ಚ ತಿಳಿಸಿದ್ದಾರೆ.