ಗುಡ್ಡೆಹೊಸೂರು, ನ. ೮: ಕರ್ನಾಟಕ ಥ್ರೋಬಾಲ್ ತಂಡಕ್ಕೆ ಕೊಡಗಿನಿಂದ ಆಯ್ಕೆಯಾಗಿ ಇತ್ತೀಚೆಗೆ ಹರಿಯಾಣದಲ್ಲಿ ನಡೆದ ಪಂದ್ಯಾಟದಲ್ಲಿ ರನ್ನರ್ಸ್ ಅಪ್ ಪ್ರಶಸ್ತಿ ಪಡೆದ ದೀಪಾಶ್ರೀಗೆ ಗುಡ್ಡೆಹೊಸೂರಿನ ವಿವೇಕಾನಂದ ಸೇವಾ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ನಂಜರಾಯಪಟ್ಟಣ ಸಹಕಾರ ಸಂಘದ ಉಪಾಧ್ಯಕ್ಷ ಬಿ.ಎಸ್. ಧನಪಾಲ್ ಅವರು ವಹಿಸಿದ್ದರು. ಈ ಸಂದರ್ಭ ಇಲ್ಲಿನ ಸೇವಾ ಸಂಘದ ಬೊಟ್ಟುಮನೆ ರಮೇಶ್, ಬಾಲು, ರಾಮಕೃಷ್ಣ, ಕುಶಾಲನಗರದ ಗಣೇಶ್ ದಂಪತಿಗಳು ಹಾಜರಿದ್ದರು. ಸಮಿತಿಯ ಸದಸ್ಯ ವಿನೀಶ್ ಕಾರ್ಯಕ್ರಮ ನಿರೂಪಿಸಿ, ಮಹೇಂದ್ರ ಅವರು ಸ್ವಾಗತಿಸಿದರು. ಶಿಕ್ಷಕರಾದ ಸುನೀಲ್ ವಂದಿಸಿದರು. ಈ ಸಂದರ್ಭ ಕೋಳಿಬೈಲ್ ಉದಯ, ಗಣೇಶ್ ಗಾಣಿಗಾ ಮುಂತಾದವರು ಹಾಜರಿದ್ದರು.