ಮಡಿಕೇರಿ, ನ. ೮: ಪರೀಕ್ಷೆ ಎಂದರೆ ಕೇವಲ ವಿದ್ಯಾರ್ಥಿಗಳು ಬರೆಯುವುದಷ್ಟೇ ಅಲ್ಲ ಬದುಕಿನ ಪ್ರತೀ ಹೆಜ್ಜೆಯೂ ಪರೀಕ್ಷೆ. ಅದಕ್ಕೆ ನಾವೆಲ್ಲರೂ ಪ್ರತೀ ಹೆಜ್ಜೆಯಲ್ಲಿಯೂ ತಯಾರಿ ಮಾಡಿಕೊಂಡಿರಬೇಕು ಎಂದು ಅಂರ‍್ರಾಷ್ಟಿçÃಯ ಅಥ್ಲೀಟ್ ತೀತಮಾಡ ಅರ್ಜುನ್ ದೇವಯ್ಯ ಅಭಿಪ್ರಾಯ ಪಟ್ಟರು. ಕೊಡವಾಮೆರ ಕೊಂಡಾಟ ಸಂಘಟನೆಯ ತಿಂಗಕೋರ್ ಅರಿವು ಸರಣಿ ಕಾರ್ಯಕ್ರಮಕ್ಕೆ ಆನ್‌ಲೈನ್ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಶಿಕ್ಷಣ ಕೇವಲ ಪುಸ್ತಕಕ್ಕೆ ಸೀಮಿತವಾಗಿರದೆ ಸಂಸ್ಕಾರವನ್ನು ಕಲಿಸುವಂತಿರಬೇಕು. ಒಂದು ಮಗುವನ್ನು ಸಮಾಜದ ಶಕ್ತಿಯಾಗಿ ರೂಪಿಸುವ ಗುರುತರ ಜವಾಬ್ದಾರಿ ತಾಯಂದಿರದ್ದು. ಸಮಾಜ ಹಾಗೂ ವ್ಯವಸ್ಥೆಯು ಯಾವ ಸಂದರ್ಭದಲ್ಲಿ ಬೇಕಾದರೂ ಬದಲಾಗಬಹುದು, ಆ ಬದಲಾವಣೆಗೆ ಹೊಂದಿಕೊAಡು ಹೋಗುವ ಸ್ಥೆöÊರ್ಯವನ್ನು ನಾವು ಹೊಂದಿರಬೇಕು. ಅದಕ್ಕೆ ಬೇಕಾದ ಶಿಕ್ಷಣವಾಗಬೇಕು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಘಟನೆಯ ಸ್ಥಾಪಕ ಅಧ್ಯಕ್ಷ ಚಾಮೆರ ದಿನೇಶ್' ಬೆಳ್ಯಪ್ಪ ಜನಾಂಗದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ವ್ಯವಸ್ಥೆ ಹಾಗೂ ಯೋಜನೆಯ ಅರಿವು ತಲುಪಬೇಕು ಎನ್ನುವ ಉದ್ದೇಶದಿಂದ ತಿಂಗಕೋರ್ ಅರಿವು ಕಾರ್ಯಕ್ರಮ ಸರಣಿಯನ್ನು ಪ್ರಾರಂಭ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಪ್ರತೀ ತಿಂಗಳೂ ಒಂದೊAದು ವಿಚಾರದ ಮೇಲೆ ಅರಿವಳಿಕೆ ಕೊಡುವ ಕಾರ್ಯಕ್ರಮಗಳು ನಡೆಯಲಿದೆ. ಗೂಗಲ್ ಮೀಟ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗದವರು ಕೊಡವಾಮೆರ ಕೊಂಡಾಟ ಸಂಘಟನೆಯ ಯೂಟ್ಯೂಬ್ ಮತ್ತು ಫೇಸ್‌ಬುಕ್ ಖಾತೆಗಳಲ್ಲಿಯೂ ನೋಡಿ ತಿಳಿದುಕೊಳ್ಳಬಹುದು ಎಂದರು.
ಕಾರ್ಯಕ್ರಮದ ಮೊದಲಿಗೆ ಹಿರಿಯ ಸದಸ್ಯ ಮಾಳೇಟಿರ ಶ್ರೀನಿವಾಸ್ ಒಕ್ಕಣೆ ಕಟ್ಟಿ ಕಾರೋಣರಿಗೆ ಅಕ್ಕಿ ಹಾಕಿದರೆ, ಆಡಳಿತ ಮಂಡಳಿ ಸದಸ್ಯೆ ಕುಲ್ಲಚಂಡ ವಿನುತ ಕೇಸರಿ ಸ್ವಾಗತಿಸಿ, ಆಡಳಿತ ಮಂಡಳಿ ಸದಸ್ಯ ಮಲ್ಲಂಡ ದರ್ಶನ್ ಮುತ್ತಪ್ಪ ವಂದಿಸಿದರು. ಸದಸ್ಯ ಮೇದುರ ಹಿತೇಶ್ ಪೂವಯ್ಯ ಕಾರ್ಯಕ್ರಮ ನಿರೂಪಿಸಿದರು. ಸದಸ್ಯೆ ಚಮ್ಮಟ್ಟಿರ ಹೃಷಿ ಪಾರ್ವತಿ ಫೇಸ್ಬುಕ್ ಲೈವ್ ಮಾಡಿ, ಐಮುಡಿಯಂಡ ಕಿಶನ್ ಅಪ್ಪಯ್ಯ ಯೂಟ್ಯೂಬ್ ನಿರ್ವಹಿಸಿದರು.