ಗೋಣಿಕೊಪ್ಪಲು, ನ.೮: ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿದ್ದ ಹುಲಿ ಹಾಗೂ ಚಿರತೆಗಳು ಇದೀಗ ಅರಣ್ಯವನ್ನು ಬಿಟ್ಟು ನಾಡಿನತ್ತ ಹೆಜ್ಜೆ ಹಾಕಿವೆ. ಇದರಿಂದ ಅರಣ್ಯ ಪ್ರದೇಶಕ್ಕೆ ಹೊಂದಿಕೊAಡಿರುವ ದೇವರ ಕಾಡುಗಳಲ್ಲಿ ಇವುಗಳ ಸಂಚಾರ ಆರಂಭಗೊAಡಿದೆ. ಕಳೆದೆರಡು ದಿನಗಳಿಂದ ಹುಲಿ ಹಾಗೂ ಚಿರತೆಗಳು ಓಡಾಟ ನಡೆಸಿದ ಹೆಜ್ಜೆ ಗುರುತುಗಳು ಕಂಡು ಬಂದ ಹಿನೆÀ್ನಲೆಯಲ್ಲಿ ಇದೀಗ ಬೊಟ್ಯತ್‌ನಾಡ್ ಈಶ್ವರ ದೇವಸ್ಥಾನ ಸುತ್ತ ಮುತ್ತಲಿನ ಪ್ರದೇಶದಲ್ಲಿರುವ ಜನರು ಸಹಜವಾಗಿಯೇ ಆತಂಕಕ್ಕೀಡಾಗಿದ್ದಾರೆ.
ಹಾತೂರು ಹಾಗೂ ಅರುವತ್ತೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಈ ಪ್ರದೇಶದಲ್ಲಿ ಎರಡು ದಿನಗಳ ಹಿಂದೆ ಹುಲಿಯ ಸಂಚಾರವನ್ನು ಸ್ಥಳೀಯ ಗ್ರಾಮಸ್ಥರು ಗಮನಿಸಿದ್ದರು ಎನ್ನಲಾಗಿದೆ. ತದ ನಂತರ ಈ ವಿಷಯವನ್ನು ಅರಣ್ಯ ಸಿಬ್ಬಂದಿಗಳಿಗೆ ತಿಳಿಸಿದ್ದರು. ಸುದ್ದಿ ತಿಳಿದ ಪೊನ್ನಂಪೇಟೆ ಆರ್‌ಎಫ್‌ಒ ದಿವಾಕರ್ ಹಾಗೂ ಅರಣ್ಯ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಸುತ್ತಲೂ ಅರಣ್ಯ ಪ್ರದೇಶ ಆವರಿಸಿರುವುದರಿಂದ ಹುಲಿ ಹಾಗೂ ಚಿರತೆಗಳು ಈ ಭಾಗದಲ್ಲಿ ಸಂಚಾರ ನಡೆಸಿರುವ ಬಗ್ಗೆ ಸ್ಥಳದಲ್ಲಿ ಕಂಡು ಬಂದಿರುವ ಹುಲಿ ಹೆಜ್ಜೆಗಳು ಸಾಕ್ಷಿಯಾಗಿವೆ. ಗ್ರಾಮದಲ್ಲಿ ಜನರು ಆತಂಕಕ್ಕೀಡಾಗಿರುವುದರಿAದ ಅರಣ್ಯ ಸಿಬ್ಬಂದಿಗಳು ಪ್ರತಿ ದಿನ ಈ ಭಾಗಕ್ಕೆ ಭೇಟಿ ನೀಡಿ ಹುಲಿ ಹಾಗೂ ಚಿರತೆಯ ಸಂಚಾರದ ಬಗ್ಗೆ ನಿಗಾ ವಹಿಸಬೇಕೆಂದು ಗ್ರಾಮದ ಪ್ರಮುಖರಾದ ಗುಮ್ಮಟ್ಟೀರ ದರ್ಶನ್ ತಿಳಿಸಿದ್ದಾರೆ.
ಹುಲಿಯ ಹೆಜ್ಜೆ ಗುರುತುಗಳು ಕಂಡು ಬಂದಿರುವುದರಿAದ ಈ ಭಾಗದ ಕಾಫಿ ತೋಟದಲ್ಲಿ ಇವುಗಳು ಅಡಗಿರಬಹುದೆಂದು ಅಂದಾಜಿಸ ಲಾಗಿದೆ. ಹಾಗಾಗಿ ತೋಟದ ಕಾರ್ಮಿಕರು ಸದ್ಯದ ಪರಿಸ್ಥಿತಿಯಲ್ಲಿ ಕೆಲಸಕ್ಕೆ ತೆರಳುತ್ತಿಲ್ಲ. ಅರಣ್ಯ ಸಿಬ್ಬಂದಿಗಳು ಈ ಪ್ರದೇಶದಲ್ಲಿ ಕೂಂಬಿAಗ್ ಕಾರ್ಯಾಚರಣೆ ನಡೆಸಿದ್ದಾರೆ.
-ಹೆಚ್.ಕೆ.ಜಗದೀಶ್