ಶನಿವಾರಸಂತೆ, ನ. ೮: ಶನಿವಾರಸಂತೆ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್, ೧ನೇ ವಿಭಾಗ, ಗುಡುಗಳಲೆ ಹಾಗೂ ಕೊಡ್ಲಿಪೇಟೆ ಬಸ್ ನಿಲ್ದಾಣದ ಬಳಿ ಸೋಮವಾರಪೇಟೆ ತಾಲೂಕು ಕಾನೂನು ಸೇವೆಗಳ ಸಮಿತಿಯ ವತಿಯಿಂದ ಹಿರಿಯ ಸಿವಿಲ್ ನ್ಯಾಯಾಧೀಶ ಗೋಕುಲ ಹಾಗೂ ವಕೀಲ ಹೇಮಚಂದ್ರ ಅವರುಗಳು ಶನಿವಾರಸಂತೆ ಪೊಲೀಸ್ ವಾಹನದಲ್ಲಿ ತೆರಳಿ ಉಚಿತವಾಗಿ ಕಾನೂನಿನ ನೆರವು ಹಾಗೂ ಅರಿವಿನ ಬಗ್ಗೆ ತಿಳಿಸಿದರು.
ಕಾನೂನು ಸೇವೆಗಳ ಪ್ರಾಧಿಕಾರಗಳು ಕಾನೂನು ಹಕ್ಕುಗಳ ಸಂರಕ್ಷಣೆಗೆ ಬದ್ಧವಾಗಿದೆ. ಜನಸಾಮಾನ್ಯರಿಗೆ ಕಾನೂನು ಬಗ್ಗೆ ಅರಿವನ್ನುಂಟು ಮಾಡಿ, ರೂ. ೨ ಲಕ್ಷ ವಾರ್ಷಿಕ ಆದಾಯ ಕಡಿಮೆ ಇರುವವರಿಗೆ ಉಚಿತವಾದ ಕಾನೂನಿನ ನೆರವು ದೊರೆಯುತ್ತದೆ. ಉಚಿತವಾಗಿ ವಕೀಲರನ್ನು ನೇಮಿಸಿಕೊಡುವ ವ್ಯವಸ್ಥೆಯೂ ಇದೆ. ಮಹಿಳೆಯರು, ಮಕ್ಕಳು, ಪ್ರಾಕೃತಿಕ ವಿಕೋಪಕ್ಕೆ ಒಳಗಾದವರು, ಸರ್ವೋಚ್ಚ ನ್ಯಾಯಾಲಯದಿಂದ ಹಿಡಿದು ಎಲ್ಲಾ ನ್ಯಾಯಾಲಯ ಸಮಿತಿಗಳಿಂದ ಸದುಪಯೋಗಪಡೆದುಕೊಳ್ಳಿ ಎಂದರು.
ಈ ಸಂದರ್ಭ ಶನಿವಾರಸಂತೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಎಸ್. ಪರಶಿವಮೂರ್ತಿ, ಸಾರ್ವಜನಿಕರು, ಪೊಲೀಸ್ ಸಿಬ್ಬಂದಿಗಳು ಹಾಜರಿದ್ದರು.