ಮಡಿಕೇರಿ, ನ. ೭: ತುಳುವೆರ ಜನಪದ ಕೂಟದ ಅಂಗ ಸಂಸ್ಥೆ ಜನಪದ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಶೇಖರ್ ಭಂಡಾರಿ ಹಾಗೂ ಉಪಾಧ್ಯಕ್ಷರಾಗಿ ಕೆ.ಜಿ. ರಾಮಕೃಷ್ಣ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಗೋಣಿಕೊಪ್ಪಲಿನ ಸಂಘದ ಕಚೇರಿಯಲ್ಲಿ ಜನಪದ ಪತ್ತಿನ ಸಹಕಾರ ಸಂಘದ ನೂತನ ಆಡಳಿತ ಮಂಡಳಿಗೆ ಚುನಾವಣೆ ಪ್ರಕ್ರಿಯೆ ನಡೆಯಿತು.
ನಿರ್ದೇಶಕ ಸ್ಥಾನಕ್ಕೆ ಮಡಿಕೇರಿ ತಾಲೂಕು ಪರಿಶಿಷ್ಟ ಜಾತಿ ವರ್ಗದ ೧ ಸ್ಥಾನಕ್ಕೆ ಪಿ.ಎಂ. ರವಿ, ಹಿಂದುಳಿದ ಪ್ರವರ್ಗ ಎ ಸ್ಥಾನಕ್ಕೆ ಬಿ.ವೈ. ಆನಂದ ರಘು, ಸಾಮಾನ್ಯ ಮಹಿಳೆ ಸ್ಥಾನಕ್ಕೆ ಲೀಲಾಶೇಷಮ್ಮ, ಸಾಮಾನ್ಯ ವರ್ಗದ ಎರಡು ಸ್ಥಾನಕ್ಕೆ ಬಿ.ಬಿ. ಐತ್ತಪ್ಪ ರೈ, ಎಂ.ಡಿ. ನಾಣಯ್ಯ ನೇಮಕಗೊಂಡಿದ್ದಾರೆ.
ವೀರಾಜಪೇಟೆ ಹಿಂದುಳಿದ ಪ್ರವರ್ಗ ಎ ಸ್ಥಾನಕ್ಕೆ ಬಿ.ಎಸ್. ಪುರುಷೋತ್ತಮ, ಸಾಮಾನ್ಯ ಮಹಿಳೆ ಸ್ಥಾನಕ್ಕೆ ವಿ. ಸಂಧ್ಯಾ ರೈ, ಸಾಮಾನ್ಯ ವರ್ಗದ ಸ್ಥಾನಗಳಿಗೆ ಪಿ.ಎಸ್. ಮಂಜುನಾಥ್, ಕೆ.ಪಿ. ಪುರುಷೋತ್ತಮ ಆಯ್ಕೆಯಾದರು.
ಸೋಮವಾರಪೇಟೆ ತಾಲೂಕು ಪರಿಶಿಷ್ಟ ಪಂಗಡ ವರ್ಗದ ಸದಸ್ಯ ೧ ಸ್ಥಾನಕ್ಕೆ ಆರ್. ಭವ್ಯ, ಸಾಮಾನ್ಯ ವರ್ಗದ ೩ ಸ್ಥಾನಗಳಿಗೆ ಬಿ. ಶಿವಪ್ಪ, ಎಸ್.ಎನ್. ರಘು, ಗೌತಮ್ ಶಿವಪ್ಪ ನೇಮಕಗೊಂಡರು.
ಆಡಳಿತ ಮಂಡಳಿಗೆ ೧೫ ಸದಸ್ಯರು ನಾಮಪತ್ರ ಸಲ್ಲಿಸಿದ್ದು, ಎಲ್ಲರೂ ಅವಿರೋಧವಾಗಿ ಆಯ್ಕೆಯಾದರು. ಚುನಾವಣೆ ಪ್ರಕ್ರಿಯೆಯನ್ನು ರಿಟರ್ನಿಂಗ್ ಅಧಿಕಾರಿ ಪಿ.ಬಿ. ಮೋಹನ್ ಕುಮಾರ್ ನಡೆಸಿಕೊಟ್ಟರು.