ಶನಿವಾರಸಂತೆ, ನ. ೭: ಶನಿವಾರಸಂತೆ ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಕಾನೂನು ಅರಿವು ಕಾರ್ಯಕ್ರಮ ನಡೆಯಿತು. ತಾಲೂಕು ಕಾನೂನು ಸೇವಾ ಸಮಿತಿಯ ಪ್ರಧಾನ ಸಿವಿಲ್ ನ್ಯಾಯಾಧೀಶೆ ಪ್ರತಿಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸೋಮವಾರಪೇಟೆ ತಾಲೂಕಿನಲ್ಲಿ ೩೦೫ ಹಳ್ಳಿಗಳಿವೆ. ಪ್ರತಿಯೊಂದು ಗ್ರಾಮದ ಸದಸ್ಯರಿಗೂ ಕಾನೂನಿನ ಜ್ಞಾನವಿರಬೇಕು ಎಂದರು. ಸೋಮವಾರಪೇಟೆ ತಾಲೂಕು ವಕೀಲ ವಸಂತ ಮಾತನಾಡಿ, ಮೋಟಾರ್ ವಾಹನಗಳ ಬಗ್ಗೆ ಅರಿವು, ಇನ್ಶುರೆನ್ಸ್, ಮೊಬೈಲ್ ಬಳಕೆ ಮತ್ತಿತರ ವಿಚಾರಗಳ ಕುರಿತು ವಿವರಣೆ ನೀಡಿದರು.
ಕಾರ್ಯಕ್ರಮದಲ್ಲಿ ಪಂಚಾಯಿತಿಯ ಸದಸ್ಯರುಗಳಾದ ಡಿ.ಪಿ. ಬೋಜಪ್ಪ, ಸಿ.ಜೆ. ಗಿರೀಶ್, ಎಂ.ಡಿ. ದೇವರಾಜ್, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್, ಪಂಚಾಯಿತಿ ಸಿಬ್ಬಂದಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು. ಅಶ್ವಿನಿ ಪ್ರಾರ್ಥನೆಯೊಂದಿಗೆ ಡಿ.ಪಿ. ಬೋಜಪ್ಪ ಸ್ವಾಗತಿಸಿ, ಸಿ.ಜೆ. ಗಿರೀಶ್ ವಂದಿಸಿದರು.