ವೀರಾಜಪೇಟೆ, ನ. ೭ : ವೀರಾಜಪೇಟೆ ಪಟ್ಟಣ ಸಹಕಾರ ಬ್ಯಾಂಕ್ ನಿಯಮಿತ, ಬ್ಯಾಂಕ್‌ನಲ್ಲಿ ೪೩೨೬ ಸದಸ್ಯರಿದ್ದು ವರದಿ ಸಾಲಿನಲ್ಲಿ ಬ್ಯಾಂಕ್ ಒಟ್ಟು ೬೧,೭೨,೭೩೬.೭೩ ಲಾಭ ಗಳಿಸಿದೆ. ಆದಾಯ ತೆರಿಗೆ ರೂ ೧೭,೦೦,೦೦೦.೦೦ ಕಳೆದು ರೂ ೪೪,೭೨,೭೩೬.೭೩ ನಿವ್ವಳ ಲಾಭ ಗಳಿಸಿದೆ ಎಂದು ಬ್ಯಾಂಕ್‌ನ ಅಧ್ಯಕ್ಷ ಕರ್ನಂಡ ಸೋಮಯ್ಯ ತಿಳಿಸಿದರು.

ಬ್ಯಾಂಕಿನ ಸಭಾಂಗಣದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಬ್ಯಾಂಕಿನಲ್ಲಿ ರೂ ೨,೦೯,೨೫,೮೩೦.೦೦ ಪಾಲು ಬಂಡವಾಳ ಇದೆ. ಒಟ್ಟು ಠೇವಣಾತಿ ರೂ ೫೧,೩೦,೮೮,೪೯೮.೦೦ ಇದ್ದು ವರದಿ ಸಾಲಿನಲ್ಲಿ ರೂ ೧೯,೫೫,೫೯,೧೭೦.೦೦ ಗಳ ಸಾಲ ವಿತರಿಸಲಾಗಿದೆ. ರೂ ೧೮,೯೧,೯೮,೯೬೮.೦೦ ಸಾಲಾ ವಸೂಲಿ ಮಾಡಿ ವರ್ಷಾಂತ್ಯಕ್ಕೆ ೨೫,೫೯,೩೬,೦೦೬.೦೦ ಬಾಕಿ ಇದ್ದು ಶೆ ೮೯ ರಷ್ಟು ಸಾಲ ವಸೂಲಾತಿ ಆಗಿದೆ. ಲೆಕ್ಕ ಪರಿಶೋಧನೆಯಲ್ಲಿ ಎ ವರ್ಗ ನೀಡಲಾಗಿದೆ. ಮುಂದಿನ ವರ್ಷ ಬ್ಯಾಂಕ್ ನೂರು ವಸಂತಗಳಿಗೆ ಕಾಲಿಡುತ್ತಿದ್ದು ಶತಮಾನೋತ್ಸವ ಕಾರ್ಯಕ್ರಮ ನಡೆಸುವ ಉದ್ದೇಶ ಹೊಂದಲಾಗಿದೆ. ಎಲ್ಲಾ ಸದಸ್ಯರ ಸಹಕಾರ ಅತ್ಯಗತ್ಯ ಎಂದು ಹೇಳಿದರು.

ಸದಸ್ಯ ನೆಲ್ಲಮಕ್ಕಡ ಉಮೇಶ್ ಮುತ್ತಣ್ಣ ಮಾತನಾಡಿ ಕೆಲವರು ಜಮೀನು ಅಡಇಟ್ಟು ಸಾಲ ತೆಗೆದುಕೊಂಡು ವರ್ಷಗಳೆ ಕಳೆದಿದೆ. ಇದರಿಂದ ಸಂಸ್ಥೆಗೆ ಬಹಳ ನಷ್ಟ ಉಂಟಾಗುತ್ತಿದೆ. ಸಾಲ ಮರು ಪಾವತಿ ಮಾಡದವರ ಬಗ್ಗೆ ಏನು ಕ್ರಮ ಕೈಗೊಂಡಿದ್ದಿರಾ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷರು ಈಗಾಗಲೆ ೮ ಜನರ ವಿರುದ್ದ ಕ್ರಮ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ. ೪ ಜನರು ಸ್ವಲ್ಪ ಹಣ ಕಟ್ಟಿದ್ದಾರೆ. ಉಳಿದವರು ಡಿಸೆಂಬರ್ ಅಂತ್ಯದೊಳಗೆ ಮರು ಪಾವತಿ ಮಾಡುತ್ತೇವೆ ಎಂದು ಲಿಖಿತವಾಗಿ ನೀಡಿದ್ದಾರೆ. ಕೋವಿಡ್ ಸಮಸ್ಯೆ ಇರುವ ಕಾರಣ ಮಾನವೀಯತೆ ದೃಷ್ಟಿಯಿಂದ ಆಡಳಿತ ವiಂಡಳಿ ತೀರ್ಮಾನ ತೆಗದುಕೊಂಡು ಕಾಲಾವಕಾಶ ನೀಡಲಾಗಿದೆ. ಅವರು ತೆಗೆದುಕೊಂಡ ಸಮಯದಲ್ಲಿ ಮರು ಪಾವತಿ ಮಾಡದಿದ್ದರೆ ಕಾನೂನಿನ ರೀತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ವೇದಿಕೆಯಲ್ಲಿ ಉಪಾಧ್ಯಕ್ಷ ಕೆ.ಎಂ ಚರ್ಮಣ, ನಿರ್ಧೇಶಕರುಗಳಾದ ಕೆ.ಡಬ್ಲುö್ಯ. ಬೋಪಯ್ಯ, ಎಂ.ಎ ನಂಜಪ್ಪ, ಕೆ.ಬಿ ಪ್ರತಾಪ್, ಪಿ.ಎಂ ರಚನ್, ಎಂ.ಪಿ ಕಾವೇರಪ್ಪ, ಎಂ. ಎನ್ ಪೂಣಚ್ಚ, ವಿ.ಪಿ ರಮೇಶ್, ಎಂ.ಕೆ ದೇವಯ್ಯ, ಡಿ.ಎಂ ರಾಜ್‌ಕುಮಾರ್, ಪಿ.ಕೆ ಅಬ್ದುಲ್ ರೆಹಮಾನ್, ಹೆಚ್.ಸಿ ಮುತ್ತಮ್ಮ, ಎಸ್.ಪಿ ಜುಬಿನಾ, ಐ.ಎಂ ಕಾವೇರಮ್ಮ, ವ್ಯವಸ್ಥಾಪಕ ಪ್ರಕಾಶ್ ಉಪಸ್ಥಿತರಿದ್ದರು.