ಚೆಯ್ಯಂಡಾಣೆ, ನ. ೭: ವೀರಾಜಪೇಟೆ ಸೆಂಟರ್ ಎಸ್.ವೈ.ಎಸ್ ವಾರ್ಷಿಕ ಮಹಾಸಭೆಯು ಗುಂಡಿಕೆರೆಯ ಹಿದಾಯತುಲ್ ಇಸ್ಲಾಂ ಮದರಸ ಸಭಾಂಗಣದಲ್ಲಿ ಸೆಂಟರ್ ಅಧ್ಯಕ್ಷ ಅಬ್ದುಲ್ ಜಲೀಲ್ ಸಖಾಫಿ ಅಧ್ಯಕ್ಷತೆಯಲ್ಲಿ ನಡೆಯಿತು.

ಸ್ಥಳೀಯ ಮಸೀದಿಯ ಖತೀಬ್ ಹಾಫಿಝ್ ಇಸ್ಮಾಯಿಲ್ ಲತೀಫಿ ಸಭೆಯನ್ನು ಉದ್ಘಾಟಿಸಿದರು. ಕಾರ್ಯದರ್ಶಿ ಅಹ್ಮದ್ ಮದನಿ ಉಸ್ತಾದ್ ವರದಿ ಹಾಗೂ ಲೆಕ್ಕ ಪತ್ರ ಮಂಡಿಸಿದರು. ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮ್ಮೊದೀನ್ ಪ್ರಾಸ್ತಾವಿಕ ಭಾಷಣ ಮಾಡಿದರು. ಎಸ್.ಎಸ್.ಎಫ್ ರಾಜ್ಯ ಕಾರ್ಯದರ್ಶಿ ಯಾಕೂಬ್ ಮಾಸ್ಟರ್ ಸಂಘಟನೆ ಮಹತ್ವದ ಬಗ್ಗೆ ಮಾತನಾಡಿ ವಿವರಿಸಿದರು. ವೇದಿಕೆಯಲ್ಲಿ ಎಸ್.ವೈ.ಎಸ್ ಜಿಲ್ಲಾಧ್ಯಕ್ಷ ಅಬ್ದುಲ್ಲ ಸಖಾಫಿ, ಕೋಶಾಧಿಕಾರಿ ಇಬ್ರಾಹಿಂ, ಜಮಾಅತ್ ಅಧ್ಯಕ್ಷ ಮೊಹಮ್ಮದ್ ಹಾಜಿ, ಮಾಜಿ ಅಧ್ಯಕ್ಷ ಅಬ್ಬಾಸ್, ಉಮ್ಮರ್ ಸಿ.ಆರ್.ಪಿ., ಸಯ್ಯದ್ ಖಾತಿಂ ತಂಘಳ್, ಲಿಯಾಕತ್ ಅಲಿ, ಎಂ.ಎ. ಇಸ್ಮಾಯಿಲ್ ಹಾಜಿ, ಅಬ್ದುಲ್ ರಹ್ಮಾನ್ ಸಅದಿ ಉಪಸ್ಥಿತರಿದ್ದರು. ನೂತನ ಸಾಲಿನ ಅಧ್ಯಕ್ಷರಾಗಿ ಅಹ್ಮದ್ ಮದನಿ, ಪ್ರಧಾನ ಕಾರ್ಯದರ್ಶಿ ಶರೀಫ್ ಝೈನಿ, ಕೋಶಾಧಿಕಾರಿಯಾಗಿ ಉಮ್ಮರ್ ಸಿ.ಆರ್.ಪಿ., ಉಪಾಧ್ಯಕ್ಷರಾಗಿ ಅಬ್ದುಲ್ ರಹ್ಮನ್ ಸಅದಿ, ದಅವಾ ಕಾರ್ಯದರ್ಶಿ ಅಬ್ದುಲ್ ಖಾದರ್ ಸಅದಿ, ಇಶಾಬಾ ಕಾರ್ಯದರ್ಶಿಯಾಗಿ ಇಸ್ಮಾಯಿಲ್ ಹಾಜಿ, ಸಮಿತಿ ಸದಸ್ಯರುಗಳಾಗಿ ಸಿ.ಎಂ.ಸುಲೈಮಾನ್, ರಶೀದ್ ಐಬಿಎಂ, ಸೂಫಿ, ಬಿ.ಪಿ. ಖಾದರ್, ಹಂಝ, ಎಂ ಎ. ಮೊಯ್ದು, ಅಲಿ ಮುಸ್ಲಿಯಾರ್, ಅಬ್ದುಲ್ ರಜಾಕ್ ಸಅದಿ, ಷಂಶುದ್ದೀನ್, ಹನೀಫಾ, ಮುಹಮ್ಮದ್, ಯಾಕೂಬ್ ಮಾಸ್ಟರ್, ಅಬ್ದುಲ್ ಜಲೀಲ್ ಅಮೀನಿ, ಷಂಶುದ್ದೀನ್ ಅವರುಗಳನ್ನು ಆಯ್ಕೆ ಮಾಡಲಾಯಿತು.