ಗೋಣಿಕೊಪ್ಪಲು, ನ. ೭: ಅರುವತ್ತೊಕ್ಕಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಟ್ಟು ಗ್ರಾಮದ ಶ್ರೀ ಭದ್ರಕಾಳಿ ದೇವಾಲಯಕ್ಕೆ ಕಾಂಗ್ರೆಸ್ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಅಜ್ಜಿಕುಟ್ಟಿರ ಪೊನ್ನಣ್ಣ ಭೇಟಿ ನೀಡಿದರು.
ಈ ವೇಳೆ ದೇವಾಲಯ ಜೀರ್ಣೋದ್ಧಾರಕ್ಕಾಗಿ ೫೦ ಸಾವಿರ ಹಣವನ್ನು ದೇವಾಲಯ ಸಮಿತಿಗೆ ಹಸ್ತಾಂತರಿಸಿದರು. ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೀದೇರಿರ ನವೀನ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಹಿರಿಯರು ಪೊನ್ನಣ್ಣನವರನ್ನು ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಪಿ.ಕೆ. ಪೊನ್ನಪ್ಪ, ಎಂ.ಎಸ್. ಕುಶಾಲಪ್ಪ, ಎರ್ಮು ಹಾಜಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕೋಳೆರ ಭಾರತಿ, ಪಕ್ಷದ ಮುಖಂಡರಾದ ಶಾಜಿ ಅಚ್ಚುತ್ತನ್, ಮತ್ರಂಡ ದಿಲ್ಲು, ಕರ್ತಮಾಡ ರಮ್ಯ, ಮುಕ್ಕಾಟೀರ ಸಂದೀಪ್, ಕೋಳೆರ ದಿನು, ಮೂಕಳೇರ ಅಪ್ಪಣ್ಣ, ಚಿರಿಯಪಂಡ ಸನ್ನಿ ಕುಶಾಲಪ್ಪ, ಯಶ್ವಿನ್, ಸಾದಲಿ, ದೇವಾಲಯ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.