ಮಡಿಕೇರಿ, ನ. ೩ : ರಾಜ್ಯ ಮಟ್ಟದ ಕರ್ನಾಟಕ ಡ್ಯಾನ್ಸ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ನಲ್ಲಿ ಮಡಿಕೇರಿಯ ವಿಂಗ್ಸ್ ಆಫ್ ಪ್ಯಾಶನ್ ಡ್ಯಾನ್ಸ್ ಅಕಾಡೆಮಿಯ ವಿದ್ಯಾರ್ಥಿಗಳು ಆರು ಚಿನ್ನ, ಎರಡು ಬೆಳ್ಳಿ ಹಾಗೂ ಮೂರು ಕಂಚಿನ ಪದಕ ಪಡೆದುಕೊಂಡು ಸಾಧನೆ ತೋರಿದ್ದಾರೆ.
ನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ರಾಜ್ಯ ಮಟ್ಟದ ಕರ್ನಾಟಕ ಡ್ಯಾನ್ಸ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್ನ ಕಾಂಟೆAಪ್ರರಿ ವಿಭಾಗದಲ್ಲಿ ಚರಿಷ್ಮ, ಎಂ.ಎನ್.ರಿಷೀಕ ಪ್ರಥಮ, ಅಕ್ಷತ ದ್ವಿತೀಯ ಸ್ಥಾನ, ಫೋಕ್ ವಿಭಾಗದಲ್ಲಿ ಕವಿತ, ದೃತಿ ಪ್ರಥಮ, ರುಷಿಕ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸೆಮಿ ಕ್ಲಾಸಿಕಲ್ ವಿಭಾಗದಲ್ಲಿ ಮೇಘ ತೃತೀಯ, ಬಾಲಿವುಡ್ ವೆಸ್ಟನ್ ಸ್ಟೆöÊಲ್ ವಿಭಾಗದಲ್ಲಿ ಹೊಸೊಕ್ಲು ನಿಧಿ ಪ್ರಥಮ, ವಂಶಿಕ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಗ್ರೂಪ್ ಡಾನ್ಸ್ನಲ್ಲಿ ಪ್ರಥಮ ಸ್ಥಾನ ಲಭಿಸಿದೆ.
ಸೂಪರ್ ಮಾಮ್ : ಸೂಪರ್ ಮಾಮ್ ವಿಭಾಗದಲ್ಲಿ ವಿಂಗ್ಸ್ ಆಫ್ ಪ್ಯಾಶನ್ ಡಾನ್ಸ್ ಅಕಾಡೆಮಿಯ ಸ್ಥಾಪಕರು ಮತ್ತು ನೃತ್ಯ ಸಂಯೋಜಕ ಪ್ರೀತ ಕೃಷ್ಣ ಪ್ರಥಮ ಸ್ಥಾನ ಹಾಗೂ ಯಶಸ್ವಿನಿ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.