ಮಡಿಕೇರಿ, ನ. ೩: ರಾಜ್ಯಮಟ್ಟದ ಕರ್ನಾಟಕ ಡ್ಯಾನ್ಸ್ ಸ್ಪೋರ್ಟ್ಸ್ ಚಾಂಪಿಯನ್ ಶಿಪ್‌ನಲ್ಲಿ ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದ ವಿದ್ಯಾರ್ಥಿಗಳು ಪಾಲ್ಗೊಂಡು ವಿವಿಧ ವಿಭಾಗಗಳಲ್ಲಿ ಬಹುಮಾನ ಗೆದ್ದಿದ್ದಾರೆ.

ಏಕವ್ಯಕ್ತಿ ವಿಭಾಗ (೧೧ ರಿಂದ ೧೭ ವಯೋಮಾನ) ತೇಜಸ್ ಪ್ರಥಮ, ಅದಿತಿ ೧೧ ರಿಂದ ೧೩ ದ್ವಿತೀಯ, ೬ ರಿಂದ ೧೦ ಯಾನಶೆಟ್ಟಿ ದ್ವಿತೀಯ, ೧೧ ರಿಂದ ೧೭ ವಯಸ್ಸಿನ ಗ್ರೂಪ್ ನೃತ್ಯ ಹಿಪ್ ಹಾಪ್ ಮಿನಿ ಕ್ರೂನಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಮೆಗಾ ಕ್ರೂ- ಓಪನ್ ಏಜ್ ವರ್ಗದಲ್ಲಿ ಮೊದಲನೇ ಸ್ಥಾನ ಪಡೆದುಕೊಂಡಿದ್ದಾರೆ.

ನಾಟ್ಯಕಲಾ ತಂಡದ ನೃತ್ಯ ಸಂಯೋಜಕÀ ಅಭಿಷೇಕ್ ಸೃಜನಶೀಲ ನೃತ್ಯ ಸಂಯೋಜಕ ಪ್ರಶಸ್ತಿಯನ್ನು ಪಡೆದಿದ್ದಾರೆ. ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋದ ವಿದ್ಯಾರ್ಥಿಗಳ ಆಕರ್ಷಕ ನೃತ್ಯ ಪ್ರದರ್ಶನ ಆಯೋಜಕರ ಹಾಗೂ ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಯಿತು.