ಚೆಟ್ಟಳ್ಳಿ, ನ. ೨: ಶ್ರೀ ಕಾವೇರಿ ಮಾತೆಯ ಐತಿಹಾಸಿಕ ಹಿನ್ನೆಲೆಯಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿರುವ ಸಿದ್ದಾಪುರ ಸನಿಹದ ಗುಹ್ಯ ಶ್ರೀ ಅಗಸ್ತೆö್ಯÃಶ್ವರ ದೇವ ಸನ್ನಿಧಿಯಲ್ಲಿ ನಿನ್ನೆ ವಿಶೇಷ ಪೂಜಾ ಕಾರ್ಯ ನಡೆಯಿತು. ಈ ಬಾರಿಯ ಪೂಜಾಕೈಂಕರ್ಯದಲ್ಲಿ ಅಖಿಲಕೊಡವ ಸಮಾಜ ಯೂತ್‌ವಿಂಗ್ ಹಾಗೂ ಕೊಡವ ರೈರ‍್ಸ್ ಕ್ಲಬ್ ಸಂಘಟನೆಯ ನೇತೃತ್ವದಲ್ಲಿ ಹಲವಾರು ಯುವಕ - ಯುವತಿಯರು ಕೊಡವ ಸಾಂಪ್ರದಾಯಿಕ ಧಿರಿಸಿನಲ್ಲಿ ಪಾಲ್ಗೊಂಡು ಪೂಜೆ ಪ್ರಾರ್ಥನೆ ನಡೆಸಿದ್ದು ವಿಶೇಷವಾಗಿತ್ತು.
‘ಗುಹ್ಯ ಅಗಸ್ತೆö್ಯÃಶ್ವರ ದೇವನೆಲೆಕ್’ ಎಂಬ ಚಿಂತನೆಯೊAದಿಗೆ ಇದೇ ಪ್ರಥಮ ಬಾರಿಗೆ ಸದಸ್ಯರು ಕ್ಷೇತ್ರದತ್ತ ತೆರಳಿದ್ದರು. ಯುವಕರು ಮಾತ್ರವಲ್ಲದೆ ಹಿರಿಯರು ತಂಡದಲ್ಲಿ ಪಾಲ್ಗೊಂಡಿದ್ದರು.
ತಲಕಾವೇರಿ ತೀರ್ಥೋದ್ಭವದ ಬಳಿಕದ ಕೆಲವು ದಿನಗಳಲ್ಲಿ ಅಗಸ್ತೆö್ಯÃಶ್ವರ ಕ್ಷೇತ್ರದಲ್ಲಿ ಪೂಜೆ ಜರುಗಲಿದೆ.
(ಮೊದಲ ಪುಟದಿಂದ) ದೇವರ ದರ್ಶನದೊಂದಿಗೆ ಸನಿಹದ ವಿಷ್ಣುಮೂರ್ತಿ ದೇವಾಲಯದಲ್ಲೂ ಪೂಜಾಕೈಂಕರ್ಯದಲ್ಲಿ ಭಾಗಿಗಳಾಗಿದ್ದರು. ಅಗಸ್ತೆö್ಯÃಶ್ವರ ಸನ್ನಿಧಿಯಲ್ಲಿ ಮಹಾಪೂಜೆ ಸಲ್ಲಿಸಿ ನಾಡಿನ ಸುಭೀಕ್ಷೆಗೆ ಪ್ರಾರ್ಥಿಸಲಾಯಿತು. ತಲಕಾವೇರಿಯ ಇತಿಹಾಸಕ್ಕೂ ಗುಹ್ಯ ಕ್ಷೇತ್ರಕ್ಕೂ ಸಂಬAಧವಿರುವದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಇದರಂತೆ ಈ ಬಾರಿ ಪ್ರಥಮ ಎಂಬAತೆ ಈ ತಂಡ ಸ್ಥಳೀಯರೊಂದಿಗೆ ಸಾಂಪ್ರದಾಯಿಕ ಧಿರಿಸಿನಲ್ಲಿ ಪಾಲ್ಗೊಂಡಿತ್ತು.
ಅ.ಕೊ.ಸ. ಯೂತ್‌ವಿಂಗ್‌ನ ಅಧ್ಯಕ್ಷ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ಕೊಡವ ರೈರ‍್ಸ್ ಕ್ಲಬ್‌ನ ಅಜ್ಜಿಕುಟ್ಟೀರ ಪ್ರಥ್ವಿಸುಬ್ಬಯ್ಯ, ಸಣ್ಣುವಂಡ ದರ್ಶನ್ ಕಾವೇರಪ್ಪ, ಮಲ್ಲಪನೆರ ವಿನು ಚಿಣ್ಣಪ್ಪ ಮುಂದಾಳತ್ವದಲ್ಲಿ ೮೦ ಮಂದಿ ಭಾಗಿಗಳಾಗಿದ್ದರು. ಪೊನ್ನಂಪೇಟೆಯಿAದ ವಾಹನ ಜಾಥಾದ ಮೂಲಕ ಕ್ಷೇತ್ರಕ್ಕೆ ತೆರಳಲಾಯಿತು.
ಈ ಸಂದರ್ಭ ಅಖಿಲ ಕೊಡವ ಸಮಾಜ ಉಪಾಧ್ಯಕ್ಷರಾದ ಅಜ್ಜಿಕುಟ್ಟೀರ ಸುಬ್ರಮಣಿ ಮಾದಯ್ಯ, ಯೂತ್ ವಿಂಗ್ ಆಡಳಿತ ಮಂಡಳಿ ಸದಸ್ಯ ಕಾಣತಂಡ ವಿವೇಕ್ ಅಯ್ಯಪ್ಪ ಸೇರಿದಂತೆ ಪ್ರಮುಖರಾದ ಚೀರಂಡ ಕಂದಾ ಸುಬ್ಬಯ್ಯ, ಮಾಳೇಟೀರ ಶ್ರೀನಿವಾಸ್, ಮುರುವಂಡ ನೀಲ, ಅಪ್ಪಚ್ಚೀರ ಕಮಲ, ಮಲ್ಲಮಾಡ ಮಂಡೇಪAಡ ರಮೇಶ್, ಪುಟ್ಟಿಚಂಡ ವಿಜು, ಬಿ.ಆರ್ ರಾಮಚಂದ್ರ ರಾವ್ ಸೇರಿದಂತೆ ಇತರರು ತಂಡವನ್ನು ಸ್ವಾಗತಿಸಿ ದೇವಸ್ಥಾನದ ಪರಿಚಯ ಮಾಡಿಕೊಟ್ಟರು. ದೇವಸ್ಥಾನದಲ್ಲಿ ಇದೇ ಬುಧವಾರ ಹಾಗೂ ಗುರುವಾರ ವಿಶೇಷ ಜಾತ್ರೆ ನಡೆಯಲಿದ್ದು ೪ರಂದು ಅಂದರೆ ದೀಪಾಳಿಯ ಅಮವಾಸೆಯ ದಿನ ದೇವರ ಜಳಕ ನಡೆಯಲಿದೆ ಎಂದು ತಕ್ಕ ಮುಖ್ಯಸ್ಥರು ಮಾಹಿತಿ ನೀಡಿದರು. ವರ್ಷಂಪ್ರತಿ ದೀಪಾವಳಿ ಸಂದರ್ಭದಲ್ಲಿ ವಾರ್ಷಿಕ ಉತ್ಸವ ನಡೆಯಲಿದ್ದು, ತುಲಾ ಮಾಸದ ಕೃಷ್ಣ ಪಕ್ಷದ ಏಕಾದಶಿ ದಿವಸ ಕೊಡಿಮರ ನಿಲ್ಲಿಸುವ ಮೂಲಕ ಉತ್ಸವಕ್ಕೆ ಚಾಲನೆ ದೊರೆಯಲಿದೆ.