ಮಡಿಕೇರಿ, ನ. ೨: ನರಕ ಚತುರ್ದಶಿಯನ್ನು ಧನತ್ರಯೋದಶಿಯ ಮರುದಿನ ಆಚರಿಸಲಾಗುವುದು. ಈ ವರ್ಷ ನರಕ ಚತುರ್ದಶಿಯ ಶುಭ ಮುಹೂರ್ತ ತಾ. ೩ ರ ಬುಧವಾರ (ಇಂದು) ಬೆಳಗಿನ ಜಾವ ಬರುವುದಿಲ್ಲ. ಬದಲಿಗೆ ಸೂರ್ಯೋದಯದ ವೇಳೆ ತ್ರಯೋದಶಿಯೇ ಮುಂದುವರಿಯುತ್ತದೆ. (ಇಂದು) ಬೆಳಿÀಗ್ಗೆ ೯.೦೨ ರಿಂದ ಚತುರ್ದಶಿಯ ಶುಭ ಮುಹೂರ್ತ ಪ್ರಾರಂಭವಾಗಲಿದೆ. ಇದರಿಂದಾಗಿ ದೀಪಾವಳಿ ಪ್ರಾರಂಭದ ದಿನದ ನರಕ ಚತುರ್ದಶಿ ಹಬ್ಬ ಆಚರಿಸುವವರು ಬೆ. ೯ ಗಂಟೆ ೨ ನಿಮಿಷ ಕಳೆೆದ ಬಳಿಕ ಎಣ್ಣೆ ಶಾಸ್ತç ಮಾಡಿಕೊಂಡು ಆನಂತರ ಸ್ನಾನ ಮಾಡಬೇಕಾಗುತ್ತದೆ. ಆ ನಂತರ ಪೂಜಾದಿಗಳನ್ನು ನಡೆಸಿ ಮತ್ತೆ ಉಪಾಹಾರ ಮಾಡಬಹುದು. ಪ್ರತಿ ವರ್ಷದಂತೆ ಬೆಳಿಗ್ಗೆ ಎದ್ದ ಕೂಡಲೇ ಸ್ನಾನ ಮಾಡಿದರೆ ಚತುರ್ದಶಿಯ ಮುಹೂರ್ತವೇ ಇರುವದಿಲ್ಲ ಎಂಬುದನ್ನು ಆಚರಣೆ ಮಾಡುವವರ ಗಮನಕ್ಕೆ ಈ ಮೂಲಕ ತರಲಾಗುತ್ತಿದೆ.
ಹಾಗೇನಾದರೂ ಬುಧವಾರ ಹಬ್ಬಾಚರಣೆ ಮಾಡಲು ಸಾಧ್ಯವಿಲ್ಲದಿದ್ದವರು ಗುರುವಾರ ದಿನ ಬೆಳಿಗ್ಗೆ ನರಕ ಚತುರ್ದಶಿಯನ್ನು ಆಚರಣೆÉ ಮಾಡಬಹುದು. ಆದರೆ, ಬೆಳಿಗ್ಗೆ ಬೇಗನೆ ಎದ್ದು ಎಣ್ಣೆ ಶಾಸ್ತç, ಸ್ನಾನ, ಪೂಜೆ ಇತ್ಯಾದಿ ಮಾಡಬೇಕಾಗುತ್ತದೆ. ಏಕೆಂದರೆ, ಗುರುವಾರ ಬೆಳಿಗ್ಗೆ ೬ ಗಂಟೆ ೩ ನಿಮಿಷದವರೆಗೆ ಮಾತ್ರ ಚತುರ್ದಶಿ ಮುಹೂರ್ತವಿದ್ದು ಆ ಬಳಿಕ ಅಮಾವಾಸ್ಯೆ ಪ್ರಾರಂಭವಾಗುತ್ತದೆ. ಆಸಕ್ತರು ತಮ್ಮ ಅನುಕೂಲಕ್ಕೆ ತಕ್ಕಂತೆ ನರಕ ಚತುರ್ದಶಿ ಹಬ್ಬವನ್ನು ಆಚರಣೆ ಮಾಡಬಹುದಾಗಿದೆ ಎಂಬ ಬಗ್ಗೆ ಈ ಮೂಲಕÀ ಮಾಹಿತಿ ನೀಡಲಾಗಿದೆ.
-“ಚಕ್ರವರ್ತಿ” (ಮೊಬೈಲ್:೮೬೬೦೭೨೪೦೧೦)