ಮಡಿಕೇರಿ, ನ. ೨: ಚೌರೀರ ಕುಟುಂಬ, ಆಕ್ಸ್ ಸ್ಪೋರ್ಟ್ಸ್ ಮತ್ತು ಎಂಟರ್‌ಟೈನ್‌ಮೆAಟ್ ಹಾಗೂ ಹಾಕಿ ಕೂರ್ಗ್ ಅಸೋಸಿಯೇಷನ್‌ನ ಸಂಯುಕ್ತಾಶ್ರಯದಲ್ಲಿ ತಾ. ೧೬ ರಿಂದ ೨೧ರ ವರೆಗೆ ಕೊಡವ ಕುಟುಂಬಗಳ ನಡುವೆ ಚೌರೀರ ಹಾಕಿ ಮತ್ತು ಫುಟ್ಬಾಲ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ಕುಟುಂಬದ ಅಧ್ಯಕ್ಷ ಚೌರೀರ ಉದಯ ತಿಳಿಸಿದರು.

ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರ್ನಾಡಿನ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಪಂದ್ಯಾವಳಿ ನಡೆಯಲಿದ್ದು, ಫುಟ್ಬಾಲ್ ಹಾಗೂ ಹಾಕಿ ವಿಜೇತ ತಂಡಕ್ಕೆ ರೂ.೪೦ ಸಾವಿರ ನಗದು ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ ರೂ.೨೦ ಸಾವಿರ ನಗದು

ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ಆಸಕ್ತರು ನವೆಂಬರ್ ೭ ರೊಳಗೆ ರೂ.೨ ಸಾವಿರ ಪ್ರವೇಶ ಶುಲ್ಕವನ್ನು ನೀಡಿ ತಮ್ಮ ತಂಡದ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಚೌರೀರ, ಅಯ್ಯಪ್ಪ-೯೮೮೬೧೯೯೨೩೪ ಹಾಗೂ ಚೌರೀರ ಮಂದಣ್ಣ-೯೬೩೨೭೬೮೪೬೯ ಅವರನ್ನು ಸಂಪರ್ಕಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.

ಪಂದ್ಯಾವಳಿ ನಾಕ್‌ಔಟ್ ಮಾದರಿಯಲ್ಲಿ ನಡೆಯಲಿದ್ದು, ಸುಮಾರು ೧೨೦ ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಫುಟ್ಬಾಲ್ ಪಂದ್ಯಾಟಕ್ಕೆ ಇಬ್ಬರು ಅತಿಥಿ ಆಟಗಾರರನ್ನು ಬೇರೆ ಕುಟುಂಬದಿAದ ಆಡಿಸಬಹದು ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಕಾರ್ಯದರ್ಶಿ ಚೌರೀರ ಕಾವೇರಿ, ಸದಸ್ಯರಾದ ಸೋಮಣ್ಣ, ಶಾಮ್ ಗಣಪತಿ,

ನೀರನ್ ಮಂದಣ್ಣ, ನಾಣಯ್ಯ ಹಾಜರಿದ್ದರು.