ಗೋಣಿಕೊಪ್ಪಲು, ನ. ೨: ಮೈ ಬಗ್ಗಿಸಿ ದುಡಿದು ತಿನ್ನುವ ವಯಸ್ಸಿನಲ್ಲಿ ಯುವಕರಿಬ್ಬರು ಅನ್ಯಮಾರ್ಗದಿಂದ ಹಣ ಸಂಪಾದಿಸಲು ಮುಂದಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು, ಇದೀಗ ಮಾಡಿದ ತಪ್ಪಿಗೆ ಜೈಲು ಸೇರುವಂತಾಗಿದೆ. ಪೊಲೀಸರ ಸೋಗಿನಲ್ಲಿ ದರೋಡೆ ಮಾಡಿದ್ದ ಕಿರುಗೂರು ಸಮೀಪದ ಹೊನ್ನಿಕೊಪ್ಪಲು ಗ್ರಾಮದ ಕಾಕೇರ ಸೋನಾ ಹಾಗೂ ಎಂ.ಎಸ್. ಪ್ರತಾಪ್‌ನನ್ನು ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಹೊನ್ನಿಕೊಪ್ಪಲು ಸಮೀಪದ ನಾರಾಯಣಗೌಡ ಎಂಬವರ ಮನೆಗೆ ನಿನ್ನೆ ರಾತ್ರಿ ನುಗ್ಗಿದ ಆರೋಪಿಗಳಿಬ್ಬರು ಪೊಲೀಸರ ಸೋಗಿನಲ್ಲಿ ಮಾತನಾಡುತ್ತ ಮನೆಯಲ್ಲಿಟ್ಟಿರುವ ಮದÀ್ಯದ ಬಾಟಲಿಯ ಬಗ್ಗೆ ಪ್ರಶ್ನಿಸಿದ್ದಾರೆ. ಮನೆಯೊಳಗೆ ಪ್ರವೇಶ ಮಾಡಿ ಇಟ್ಟಿರುವ ಮದÀ್ಯದ ಬಾಟಲಿಗಳನ್ನು ತೋರಿಸುವಂತೆ ಹಾಗೂ ಹಣ ನೀಡುವಂತೆ ಒತ್ತಾಯಿಸಿದ್ದಾರೆ. ಇಲ್ಲದಿದ್ದಲ್ಲಿ ಸ್ಥಳಕ್ಕೆ ಪೊಲೀಸ್ ವಾಹನದೊಂದಿಗೆ ಸಂಬAಧಪಟ್ಟ ಸಬ್‌ಇನ್ಸ್ಪೆಕ್ಟರ್ ಹಾಗೂ ಹೆಚ್ಚಿನ ಸಿಬ್ಬಂದಿಗಳನ್ನು ಕರೆಸುವುದಾಗಿ ಭಯಪಡಿಸಿದ್ದಾರೆ.

ಈ ವೇಳೆ ಗಾಬರಿಗೊಂಡ ಮನೆಯ ಮಾಲೀಕ ನಾರಾಯಣಗೌಡ ನಮ್ಮಲ್ಲಿ ಯಾವುದೇ ಮದÀ್ಯದ ಬಾಟಲಿಗಳಿಲ್ಲ ಎಂದು ಸಮಜಾಯಿಷಿಕೆ ನೀಡಲು ಮುಂದಾಗಿದ್ದಾರೆ. ಮನೆಯೊಳಗೆ ಯುವಕರಿಬ್ಬರು ಪ್ರವೇಶಿಸಿ ಹುಡುಕಾಟ ಆರಂಭಿಸಿದ್ದಾರೆ. ಈ ವೇಳೆ ನಾರಾಯಣ ಗೌಡ ತನ್ನ ಪರ್ಸಿನಲ್ಲಿದ್ದ ಹಣವನ್ನು ಜೋಪಾನ ಮಾಡುವ ಸಲುವಾಗಿ ತೆಗೆದಿಡುತ್ತಿದ್ದಂತೆಯೇ ಯುವಕರಿಬ್ಬರು ಅವರ ಮೇಲೆ ಹಲ್ಲೆ ನಡೆಸಿ ಪರ್ಸ್ನಲ್ಲಿದ್ದ ಹಣವನ್ನು ಕಸಿದುಕೊಂಡು ಮನೆಯಿಂದ ತೆರಳಿದ್ದಾರೆ.

(ಮೊದಲ ಪುಟದಿಂದ)

ಕೂಡಲೇ ಬಂಧನ: ಈ ಬಗ್ಗೆ ಅನುಮಾನಗೊಂಡ ಮನೆಯ ಮಾಲೀಕ ಕೂಡಲೇ ಪೊಲೀಸರಿಗೆ ಮೊಬೈಲ್ ಮೂಲಕ ಸಂದೇಶ ನೀಡಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆಯೇ ಗೋಣಿಕೊಪ್ಪ ಸರ್ಕಲ್ ಇನ್ಸ್ಪೆೆಕ್ಟರ್ ಜಯರಾಮ್, ಪೊನ್ನಂಪೇಟೆ ಠಾಣಾಧಿಕಾರಿ ಕುಮಾರ್ ಹಾಗೂ ಗೋಣಿಕೊಪ್ಪ ಸಬ್‌ಇನ್ಸ್ಪೆÉಕ್ಟರ್ ಮತ್ತು ಸಿಬ್ಬಂದಿಗಳು ನಡುರಾತ್ರಿಯಲ್ಲಿ ಜಂಟಿ ಕಾರ್ಯಾಚರಣೆ ಆರಂಭಿಸಿದರು.

ಘಟನಾ ಸ್ಥಳಕ್ಕೆ ಪೊಲೀಸರು ಕೂಡಲೇ ತೆರಳಿ ದರೋಡೆಗೆ ಪ್ರಯತ್ನಿಸಿದವರನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ. ಈ ವೇಳೆ ಬೈಕ್‌ನಲ್ಲಿದ್ದ ಯುವಕರಿಬ್ಬರು ಹೊನ್ನಿಕೊಪ್ಪ ಸಮೀಪದ ಸೇತುವೆ ಬಳಿ ಅನುಮಾನಾಸ್ಪದವಾಗಿ ಕಾಣಿಸಿಕೊಂಡಿದ್ದಾರೆ. ಕೂಡಲೇ ಪೊಲೀಸ್ ವಾಹನದಲ್ಲಿದ್ದ ಕ್ರೆöÊಮ್ ಬ್ರಾಂಚಿನ ಎಂ.ಡಿ. ಮನು, ಮಹೇಶ್.ಪಿ.ಸಿ, ಎನ್.ಆರ್. ಹರೀಶ್, ಅಧಿಕಾರಿಗಳ ಸೂಚನೆ ಮೇರೆ ಆರೋಪಿಗಳು ತಪ್ಪಿಸಿಕೊಳ್ಳದಂತೆ ಎಚ್ಚರವಹಿಸಿದರು.

ಆರೋಪಿಗಳನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವಿಚಾರಿಸಿದಾಗ ದರೋಡೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಆರೋಪಿಗಳ ಮೇಲೆ ಕ್ರಿಮಿನಲ್ ಆರೋಪವಿದ್ದು, ಈ ಹಿಂದೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ನಡುರಾತ್ರಿಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಯುವಕರಿಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳಿಂದ ಬೈಕ್, ಎರಡು ಮೊಬೈಲ್ ಹಾಗೂ ದರೋಡೆ ಮಾಡಿದ್ದ ರೂ. ೫೮ ಸಾವಿರ ನಗದು ಹಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಗೋಣಿಕೊಪ್ಪ ವೃತ್ತ ನಿರೀಕ್ಷಕ ಜಯರಾಮ್ ನೇತೃತ್ವದಲ್ಲಿ ಪೊನ್ನಂಪೇಟೆ ಎಸ್.ಐ. ಕುಮಾರ್, ಗೋಣಿಕೊಪ್ಪ ಎಸ್.ಐ. ಸುಬ್ಬಯ್ಯ, ಜಂಟಿ ಕಾರ್ಯಾಚರಣೆ ನಡೆಸಿದ ವೇಳೆ ಪೊಲೀಸ್ ಸಿಬ್ಬಂದಿಗಳಾದ ಮೊಹಮ್ಮದ್ ಆಲಿ, ಮಜೀದ್, ಮಹೇಂದ್ರ ಪಿ.ಸಿ. ಎನ್.ಆರ್. ಹರೀಶ್ ಮುಂತಾದವರು ಪಾಲ್ಗೊಂಡಿದ್ದರು. -ಹೆಚ್.ಕೆ. ಜಗದೀಶ್