ಮಡಿಕೇರಿ ಅ.೩೧ : ವಿಶ್ವ ಹಿಂದೂ ಪರಿಷತ್ ನ ಕೊಡಗು ಜಿಲ್ಲಾಧ್ಯಕ್ಷರಾಗಿ ಪಿ.ಕೃಷ್ಣಮೂರ್ತಿ, ಕಾರ್ಯಾಧ್ಯಕ್ಷರಾಗಿ ಎಸ್.ಸುರೇಶ್ ಮುತ್ತಪ್ಪ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಪುದಿಯೊಕ್ಕಡ ರಮೇಶ್ ಆಯ್ಕೆಯಾಗಿದ್ದಾರೆ. ಸಲಹಾ ಸಮಿತಿಗೆ ಟಾಟಾ ಬೋಪಯ್ಯ ಹಾಗೂ ಟಿ.ಪಿ.ಶನಯ್ ಅವರನ್ನು ನೇಮಕ ಮಾಡಲಾಗಿದೆ.

ಭಜರಂಗದಳದ ಜಿಲ್ಲಾ ಸಂಯೋಜಕರಾಗಿ ಕೆ.ಎಂ.ಅನೀಶ್ ಕುಮಾರ್, ಸಹ ಸಂಯೋಜಕರಾಗಿ ವಿವೇಕ್ ರೈ, ದುರ್ಗಾವಾಹಿನಿ ಜಿಲ್ಲಾ ಸಂಯೋಜಕರಾಗಿ ಅಂಬಿಕಾ ಉತ್ತಪ್ಪ ಹಾಗೂ ಸಹ ಸಂಯೋಜಕರಾಗಿ ಕುಮಾರಿ ವಿಕಿತಾ ಆಯ್ಕೆಯಾಗಿದ್ದಾರೆ.

ವಿಶ್ವ ಹಿಂದೂ ಪರಿಷತ್‌ನ ಮಂಗಳೂರು ಕಾರ್ಯಾಲಯದ ಸೇವಾ ಪ್ರತಿಷ್ಠಾನದ ಸಭಾಂಗಣದಲ್ಲಿ ನಡೆದ ವಿಭಾಗ ಮಟ್ಟದ ಬೈಠಕ್‌ನಲ್ಲಿ ವಿಭಾಗ ಕಾರ್ಯದರ್ಶಿ ಶರನ್ ಪಂಪ್ವೆಲ್, ಕೇಂದ್ರಿಯ ಪ್ರಧಾನ ಸಹ ಕಾರ್ಯದರ್ಶಿ ಸ್ತಾನು ಮಾಲಯನ್, ಪ್ರಾಂತ ಕಾರ್ಯದರ್ಶಿ ಜಗನ್ನಾಥ ಶಾಸ್ತಿç ಹಾಗೂ ಪ್ರಾಂತ ಸಂಘಟನಾ ಕಾರ್ಯದರ್ಶಿ ಬಸವರಾಜ್ ಅವರ ಉಪಸ್ಥಿತಿಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.