ವೀರಾಜಪೇಟೆ, ಅ: ೩೧: ಖಾಸಗಿ ಚಿಟ್‌ಫಂಡ್ ಸಂಸ್ಥೆಯೊAದರ ಸಿಬ್ಬಂದಿಗಳಿAದ ಲಕ್ಷಾಂತರ ರೂಪಾಯಿ ವಂಚನೆಯಾಗಿರುವುದು ತಡವಾಗಿ ಬೆಳಕಿಗೆ ಬಂದಿದೆ.
ನಗರದ ದೊಡ್ಡಟ್ಟಿ ಚೌಕಿ ಬಳಿಯ ಖಾಸಗಿ ವಸತಿ ಗೃಹದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇರಳ ಮೂಲದ ದೇಶ ಮತ್ತು ವಿದೇಶಗಳಲ್ಲಿ ೪೦೦ಕ್ಕೂ ಅಧಿಕ ಶಾಖೆಗಳನ್ನು ಹೊಂದಿರುವ ಖಾಸಗಿ ಚಿಟ್‌ಫಂಡ್ ಸಂಸ್ಥೆ ಶ್ರೀ ಗೋಕುಲಂ ಚಿಟ್ ಮತ್ತು ಫೈನಾನ್ಸ್ ಕಂ ಲಿಮಿಟೆಡ್‌ನ ವೀರಾಜಪೇಟೆ ಶಾಖೆಯ ಸಿಬ್ಬಂದಿ ಗಳಿಂದ ಲಕ್ಷಾಂತರ ರೂಪಾಯಿ ವಂಚನೆಯಾಗಿ ಇದೀಗ ಪ್ರಕರಣದಲ್ಲಿ ಇಬ್ಬರ ಬಂಧನವಾಗಿದೆ. ಶಾಖಾ ವ್ಯವಸ್ಥಾಪಕ ಕೇರಳ ರಾಜ್ಯದ ಮಾನಂದ ವಾಡಿ ನಿವಾಸಿ ಕೆ.ಟಿ. ವಿನೋದ್ (೪೨) ಮತ್ತು ಪಿರಿಯಾಪಟ್ಟಣ ನಿವಾಸಿ ಜಯ ಪ್ರಸಾದ್ (೨೮) ಬಂಧಿತ ಆರೋಪಿಗಳು.
ಘಟನೆಯ ವಿವರ: ಈ ಚಿಟ್ ಫಂಡ್ ಸಂಸ್ಥೆಯು ವೀರಾಜಪೇಟೆ ನಗರದಲ್ಲಿ ಸುಮಾರು ಮೂರು ವರ್ಷಗಳ ಹಿಂದೆ ತನ್ನ ಶಾಖೆಯನ್ನು ಆರಂಭ ಮಾಡಿದ್ದು, ನಗರ ಮತ್ತು ನಗರದ ವಿವಿಧ ಭಾಗಗಳ ಗ್ರಾಹಕರು ಸಂಸ್ಥೆಯ ಮೇಲೆÀ ವಿಶ್ವಾಸವನ್ನಿಟ್ಟು ಹಣ ಹೂಡಿಕೆ ಮಾಡಿದ್ದಾರೆ. ಈ ನಡುವೆ ಗ್ರಾಹಕರೊಬ್ಬರು ಲಾಕ್‌ಡೌನ್ ಸಂದÀರ್ಭದಲ್ಲಿ ಆರ್ಥಿಕ ಸಮಸ್ಯೆ ಎದುರಾಗಿದ್ದ ಹಿನ್ನೆಲೆ ಸಂಸ್ಥೆಯಲ್ಲಿ ಹೂಡಿಕೆ ಮಾಡಲಾಗಿದ್ದ ಹಣವನ್ನು ಹಿಂದಿರುಗಿಸುವAತೆ ಹಲವು ಬಾರಿ ಶಾಖೆಯ ವ್ಯವಸ್ಥಾಪಕರಿಗೆ ಮನವಿ ಮಾಡಿದ್ದರು. ಆದರೆ ವ್ಯವಸ್ಥಾಪಕರು ಸ್ಪಂದಿಸಿರಲಿಲ್ಲ ಎನ್ನಲಾಗಿದೆ.
ನಂತರದಲ್ಲಿ ಹಲವು ದಿನಗಳು ಕಳೆದ ನಂತರ ಮೈಸೂರು ಶಾಖೆಯ (ವಲಯ ಶಾಖೆ) ಸಹಾಯಕ ಜನರಲ್ ಮ್ಯಾನೇಜರ್ ಪವೀತ್ರನ್ ಎಂಬವರಿಗೆ ದೂರು ನೀಡಿದ್ದು, ಈ ಬಗ್ಗೆ ಶಾಖಾಧಿಕಾರಿಗಳು ವೀರಾಜಪೇಟೆ
(ಮೊದಲ ಪುಟದಿಂದ) ಶಾಖೆಯ ವ್ಯವಸ್ಥಾಪಕ ರಿಂದ ಮಾಹಿತಿ ಬಯಸಿದ್ದರು. ಆದರೆ ನಗರ ಶಾಖೆಯ ವ್ಯವಸ್ಥಾಪಕ ವಿನೋದ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ ಎಂದು ಹೇಳಲಾಗಿದೆ. ಈ ನಡುವೆ ಮತ್ತೊಮ್ಮೆ ಗ್ರಾಹಕ ರೊಂದಿಗೆ ವಲಯ ಶಾಖೆಗೆ ಭೇಟಿ ನೀಡಿ ದೂರು ನೀಡಲಾಗಿತ್ತು. ಗ್ರಾಹಕರ ಒತ್ತಡಕ್ಕೆ ಮಣಿದ ವಲಯ ಶಾಖಾಧಿಕಾರಿ ವೀರಾಜಪೇಟೆಗೆ ಆಗಮಿಸಿ ಶಾಖೆಯ ಗಣಕಯಂತ್ರದಲ್ಲಿ ನಮೂದಾದ ಅಂಶಗಳು ಹಾಗೂ ಇತರ ಮಾಹಿತಿ ಗಳನ್ನು ಪರಿಶೀಲನೆಗೆ ಒಳಪಡಿಸಿದ ವೇಳೆ ಸುಮಾರು ೩೫ ಲಕ್ಷಕ್ಕಿಂತ ಅಧಿಕ ಹಣ ವಂಚನೆಯಾಗಿ ರುವುದು ಬೆಳಕಿಗೆ ಬಂದಿದೆ. ಗ್ರಾಹಕರಿಗೆ ಮತ್ತು ಚಿಟ್ ಫಂಡ್ ಸಂಸ್ಥೆಗೆ ವಂಚನೆ ಯಾಗಿರುವುದನ್ನು ಮನಗಂಡು ವೀರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಶಾಖೆಯ ವ್ಯವಸ್ಥಾಪಕ ವಿನೋದ್ ಮತ್ತು ಸಹಾಯಕ ವ್ಯವಸ್ಥಾಪಕ ಜಯಪ್ರಸಾದ್ ಎಂಬವರ ಮೇಲೆ ದೂರು ದಾಖಲು ಮಾಡಿದ್ದಾರೆ.
ಆರೋಪಿಗಳು ಬಂಧನ: ದೂರು ದಾಖಲಾದ ಹಿನ್ನೆಲೆಯಲ್ಲಿ ಇಬ್ಬರೂ ಸಿಬ್ಬಂದಿಗಳು ತಲೆಮರೆಸಿಕೊಂಡಿದ್ದರು. ತನಿಖೆ ನಡೆಸಿದ ಪೊಲೀಸರು ಪಿರಿಯಾಪಟ್ಟಣದಲ್ಲಿ ಜಯಪ್ರಸಾದ್ ನನ್ನು, ವೀರಾಜಪೇಟೆ ನಗರದಲ್ಲಿ ಕೆ.ಟಿ. ವಿನೋದ್‌ನನ್ನು ಬಂಧಿಸುತ್ತಾರೆ. ಬಂಧಿತರಿAದ ಕಾರು ಹಾಗೂ ಇತರ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ. -ಕಿಶೋರ್ ಕುಮಾರ್ ಶೆಟ್ಟಿ