ಮಡಿಕೇರಿ, ಅ. ೩೧: ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ವರ್ಷಂಪ್ರತಿ ರಾಜ್ಯ ಸರಕಾರದಿಂದ ನೀಡಲಾಗುವ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ಕ್ರೀಡಾಕ್ಷೇತ್ರದ ಸಾಧನೆಗಾಗಿ ಕೊಡಗಿನವರಾದ ಮಚ್ಚಂಡ ರೋಹನ್ ಬೋಪಣ್ಣ ಅವರು ಆಯ್ಕೆಯಾಗಿದ್ದಾರೆ.

೬೬ ಸಾಧಕರ ಪಟ್ಟಿಯನ್ನು ಇಂದು ಅಧಿಕೃತವಾಗಿ ಬಿಡುಗಡೆ ಮಾಡಲಾಗಿದ್ದು, ಒಲಂಪಿಯನ್ ಕೂಡ ಆಗಿರುವ ಟೆನ್ನಿಸ್‌ಪಟು ರೋಹನ್ ಬೋಪಣ್ಣ ಅವರು ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕಳೆದ ಹಲವು ವರ್ಷಗಳಿಂದ ಭಾರತದ ಖ್ಯಾತ ಟೆನ್ನಿಸ್ ಆಟಗಾರರಾಗಿರುವ ರೋಹನ್ ಬೋಪಣ್ಣ ಕೊಡಗಿನ ಮಾದಾಪುರ ಸನಿಹದ ಗರಗಂದೂರಿನವರಾಗಿದ್ದಾರೆ. ಇವರು ಮಚ್ಚಂಡ ಬೋಪಣ್ಣ ಹಾಗೂ ಮಲ್ಲಿಕಾ ಬೋಪಣ್ಣ ದಂಪತಿಯ ಪುತ್ರರಾಗಿದ್ದು, ೨೦೦೨ ರಿಂದ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರಶಸ್ತಿಯ ಬಗ್ಗೆ ರೋಹನ್ ಅವರ ಪೋಷಕರಾದ ಬೋಪಣ್ಣ ಹಾಗೂ ಮಲ್ಲಿಕಾ ಅವರು

(ಮೊದಲ ಪುಟದಿಂದ) ‘ಶಕ್ತಿ’ಯೊಂದಿಗೆ ಹರ್ಷ ವ್ಯಕ್ತಪಡಿಸಿದ್ದು, ಪುತ್ರನ ಸಾಧನೆಯನ್ನು ಇದೀಗ ರಾಜ್ಯ ಸರಕಾರ ಪರಿಗಣಿಸಿರುವುದು ಸಂತಸ ತಂದಿದೆ. ಸ್ವಲ್ಪ ತಡವಾದರೂ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಸಂತಸ ತಂದಿದೆ ಎಂದಿದ್ದಾರೆ.

೬೬ ಸಾಧಕರೊಂದಿಗೆ ಈ ಬಾರಿ ವಿಶೇಷವಾಗಿ ಭಾರತ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಸ್ಮರಣೆಯಲ್ಲಿ ರಾಜ್ಯದ ೧೦ ಸಂಘ - ಸಂಸ್ಥೆಗಳಿಗೆ ಅಮೃತ ಮಹೋತ್ಸವ ರಾಜ್ಯ ಪ್ರಶಸ್ತಿಯನ್ನು ನೀಡಲಾಗುತ್ತಿದೆ.