ಮುಳ್ಳೂರು, ಅ. ೩೦: ಜಿಲ್ಲಾ ಮಕ್ಕಳ ಸಹಾಯವಾಣಿ ಕೇಂದ್ರ ಮತ್ತು ಕೊಡಗು ಗ್ರಾಮಾಭಿವೃದ್ಧಿ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಸಮೀಪದ ಶನಿವಾರಸಂತೆ ಹಾವುಗೊಲ್ಲರ ಕೇರಿ ಮತ್ತು ತ್ಯಾಗರಾಜ ಕಾಲೋನಿಯಲ್ಲಿ ಕೇಂದ್ರ ಸರಕಾರ ಮಕ್ಕಳ ರಕ್ಷಣೆಗಾಗಿ ಜಾರಿಗೊಳಿಸಿರುವ ಬಾಲ್ಯ ವಿವಾಹ ವಿರೋಧಿ, ಬಾಲ ಕಾರ್ಮಿಕರ ನಿಯಂತ್ರಣ ಕಾಯಿದೆಗಳ ಕುರಿತು ಹಾಗೂ ಭಿಕ್ಷಾಟನೆ ನಿಯಂತ್ರಣ ಕುರಿತು ಅರಿವು ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು. ಮಕ್ಕಳ ಸಹಾಯ ವಾಣಿ ಕೇಂದ್ರದ ತಾಲೂಕು ಕಾರ್ಯಕರ್ತೆ ಬಿ.ಆರ್. ಕುಮಾರಿ ಮಾತನಾಡಿ, ಮಕ್ಕಳ ಹಿತ ದೃಷ್ಟಿಯಿಂದ ಸರಕಾರ ಮಕ್ಕಳಿ ಗಾಗಿಯೇ ವಿವಿಧ ಕಾಯಿದೆ, ಕಾನೂನುಗಳನ್ನು ಜಾರಿಗೊಳಿಸಿದ್ದು, ಕಾಯಿದೆಗಳ ಬಗ್ಗೆ ಮಕ್ಕಳು, ಪೋಷಕರು ಹಾಗೂ ಸಾರ್ವಜನಿಕ ರಿಗೆ ಅರಿವಿನ ಅಗತ್ಯ ಇದೆ ಎಂದರು.

ಬಾಲ್ಯ ವಿವಾಹ ಮಾಡುವುದು ಅಪರಾಧ ಪೋಷಕರು ಅಪ್ರಾಪ್ತ ವಯಸಿನ ಹೆಣ್ಣು ಮಕ್ಕಳಿಗೆ ವಿವಾಹ ಮಾಡುವುದರಿಂದ ಮುಂದೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ವಿದ್ಯಾವಂತರಾಗಬೇಕಿದ್ದ ಮಕ್ಕಳನ್ನು ಶಾಲೆಗೆ ಹೋಗುವುದನ್ನು ನಿಲ್ಲಿಸಿ ದುಡಿಯಲು ಕಳಿಸುವುದು ಬಾಲ ಕಾರ್ಮಿಕ ಕಾಯಿದೆ ಪ್ರಕಾರ ಕಾನೂನು ಬಾಹಿರವಾಗುತ್ತದೆ ಇಂತಹ ಪ್ರಕರಣದಲ್ಲಿ ಮಕ್ಕಳ ಪೋಷಕರು, ದುಡಿಸಿಕೊಳ್ಳುವ ಮಾಲೀಕರು ಶಿಕ್ಷಾರ್ಹರಾಗುತ್ತಾರೆ ಎಂದರು.

ಪಟ್ಟಣದ ಪ್ರದೇಶದ ಕೆಲವೊಂದು ಕೇರಿಗಳಲ್ಲಿ ಮಕ್ಕಳು ಭಿಕ್ಷಾಟನೆ ಮಾಡುತ್ತಿರುವ ಪ್ರಕರಣ ಗಳು ಹೆಚ್ಚಾಗುತ್ತಿದ್ದು ಈ ಬಗ್ಗೆ ವಿದ್ಯಾ ವಂತರು ಹಾಗೂ ಸಾರ್ವಜನಿಕರು ಗಮನಿಸಿ ಮಕ್ಕಳಿಗೆ ಮತ್ತು ಪೋಷಕರಿಗೆ ಭಿಕ್ಷಾಟನೆ ಮಾಡದಂತೆ ಬುದ್ಧಿಹೇಳುವುದರ ಜೊತೆಯಲ್ಲಿ ಭಿಕ್ಷಾಟನೆ ಮಾಡುವ ಮಕ್ಕಳನ್ನು ರಕ್ಷಣೆ ಮಾಡಿ ಸಂಬAಧ ಇಲಾಖೆ ಗಳಿಗೆ ಮಾಹಿತಿ ನೀಡಿ ಸಹಕರಿ ಸುವಂತೆ ಮನವಿ ಮಾಡಿದರು.

ತಾಲೂಕು ಕಾರ್ಯಕರ್ತ ಎ.ಎಸ್. ಯೋಗೇಶ್ ಮಾತನಾಡಿ, ಸಹಾಯ ವಾಣಿ ಕೇಂದ್ರದ ೧೦೯೮ ಸಂಖ್ಯೆಗೆ ಮಕ್ಕಳ ಮೇಲಿನ ದೌರ್ಜನ್ಯವನ್ನು ತಿಳಿಸಿ ಸಹಕರಿಸುವಂತೆ ಮನವಿ ಮಾಡಿದರು. ಅರಿವು ಕಾರ್ಯಕ್ರಮ ಸಂದರ್ಭ ವಿವಿಧ ಕಡೆಯ ಅಂಗನ ವಾಡಿ ಕಾರ್ಯಕರ್ತೆ ಯರಾದ ಅಶ್ವಿನಿ, ಗಂಗಮ್ಮ ಹಾಗೂ ಸ್ಥಳೀಯ ಪ್ರಮುಖರು ಹಾಜರಿದ್ದರು.