ಪೊನ್ನಂಪೇಟೆ, ಅ. ೩೦: ಪೊನ್ನಂಪೇಟೆ ೬ನೇ ವಾರ್ಡಿನಲ್ಲಿ ಭಾರತ ೧೦೦ ಕೋಟಿ ಲಸಿಕೆ ಡೋಸ್‌ಗಳನ್ನು ನೀಡಿದ ಸಲುವಾಗಿ ಕಾರ್ಯಕ್ರಮ ನಡೆಸಲಾಯಿತು. ಇದರ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ೮೫ನೇ ಮನ್‌ಕಿ ಬಾತ್ ಕಾರ್ಯಕ್ರಮವನ್ನು ವೀಕ್ಷಿಸಲಾಯಿತು.

೬ನೇ ವಾರ್ಡಿನ ಆಶಾ ಕಾರ್ಯಕರ್ತೆಯಾದ ಪ್ರಮಿತಾ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಶಕ್ತಿ ಕೇಂದ್ರದ ಪ್ರಮುಖ ಕೋಟೆರ ಕಿಶನ್ ಉತ್ತಪ್ಪ, ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಅಧ್ಯಕೆÀ್ಷ ಗಿರಿಜಾ ವೆಂಕಟೇಶ್, ಜಿಲ್ಲಾ ಕೃಷಿ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಮತ್ರಂಡ ಕಬೀರ್ ದಾಸ್, ಪೊನ್ನಂಪೇಟೆ ಹೋಬಳಿ ಎಸ್‌ಸಿ ಘಟಕದ ಅಧ್ಯಕ್ಷ ರಮೇಶ್, ೬ನೇ ವಾರ್ಡಿನ ಬೂತ್ ಕಾರ್ಯದರ್ಶಿ ವೆಂಕಟೇಶ್ ಹೆಚ್.ಆರ್., ಪೊನ್ನಂಪೇಟೆ ಗ್ರಾಮ ಪಂಚಾಯಿತಿ ಸದಸೆÀ್ಯ ವಿಮಲಾ ಮಚ್ಚಮಾಡ, ಬಿಜೆಪಿ ಕಾರ್ಯಕರ್ತರುಗಳಾದ ಲೋಕೇಶ, ಮಾಂತೇಶ, ಶಂಕರು, ಹರೀಶ, ಗಣಿ, ಸುಜು, ಶಶಿ, ಸಿದ್ಧ, ಸತೀಶ್ ಅವರುಗಳು ಹಾಜರಿದ್ದರು.

ನಿಟ್ಟೂರು

ದೇಶದಲ್ಲಿ ೧೦೦ ಕೋಟಿ ಜನರಿಗೆ ಕೊರೊನಾ ನಿರೋಧಕ ಲಸಿಕೆ ಪೂರೈಸಿದ ಪ್ರಯುಕ್ತ ನಿಟ್ಟೂರು ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿರುವ ಬಾಳೆಲೆ ಪ್ರ‍್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಅಶೋಕ್, ರೇಷ್ಮ ಹಾಗೂ ಹರಿಣಿಯವರನ್ನು ಶಾಲು ಹೊದಿಸಿ ಗೌರವ ಸಲ್ಲಿಸಲಾಯಿತು. ನಿಟ್ಟೂರು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ್ ಕಾಟಿಮಾಡ ಸರೀನ್ ಮುತ್ತಣ್ಣ, ಸಹಪ್ರಮುಖ್ ಅಳಮೇಂಗಡ ಸುರೇಶ್ ಸುಬ್ಬಯ್ಯ, ಕಾರ್ಮಾಡು ಬೂತ್ ಅಧ್ಯಕ್ಷ ಮುಕ್ಕಾಟಿರ ಸೋಮಯ್ಯ, ಕಾರ್ಯದರ್ಶಿ ಕೊಟ್ಟಂಗಡ ಮಂಜುನಾಥ, ಗಾಣಂಗಡ ಸುದೀಪ್, ಪಟ್ಟಡ ಬೋಪಯ್ಯ, ವಿ.ಯಂ. ಸುರೇಶ್, ಕಳ್ಳೇಂಗಡ ಕಾರ್ಯಪ್ಪ, ಮೇಚಂಡ ರಮೇಶ್, ಕಾಟಿಮಾಡ ಕುಟ್ಟಪ್ಪ, ಧೀರಜ್, ಮಹೇಶ್ ಮಲ್ಲೇಂಗಡ ಶಶಿಮಣಿ ಚಲನ್, ಮುಂತಾದವರು ಹಾಜರಿದ್ದರು.