ಪೊನ್ನಂಪೇಟೆ, ಅ.೩೦: ತಾ. ೨೬ ರಂದು ಬಾಳೆಲೆ ಗ್ರಾಮದ ಸಾರ್ವಜನಿಕ ಬಸ್ ತಂಗುದಾಣದಲ್ಲಿ ನಿತ್ರಾಣಗೊಂಡು ಮಲಗಿದ್ದ ಅಂದಾಜು ೬೦ ವರ್ಷದ ಅಪರಿಚಿತ ವ್ಯಕ್ತಿಯನ್ನು ಗ್ರಾಮ ಪಂಚಾಯಿತಿ ಸದಸ್ಯ ವಿನು ಉತ್ತಪ್ಪ ಎಂಬವರು ಬಾಳೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಾ. ೨೮ರಂದು ಆ ಅಪರಿಚಿತ ವ್ಯಕ್ತಿ ಮೃತಪಟ್ಟಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮೃತ ವ್ಯಕ್ತಿಯ ವಾರಿಸುದಾರರು ಇದ್ದಲ್ಲಿ ೦೮೨೭೨- ೨೨೯೦೦೦, ೦೮೨೭೪- ೨೫೭೪೮೮, ೦೮೨೭೪- ೨೪೭೨೦೯, ೦೮೨೭೪-೨೪೯೦೪೪ ಈ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವAತೆ ಪೊಲೀಸ್ ಪ್ರಕಟಣೆ ಕೋರಿದೆ.