ಪ್ರಥಮ ಸ್ವಾತಂತ್ರö್ಯ ಸಂಗ್ರಾಮಕ್ಕಿAತಲೂ ಇಪ್ಪತ್ತು ವರ್ಷ ಮೊದಲು, ಸ್ವಾತಂತ್ರö್ಯ ಸಂಗ್ರಾಮದ ಕಿಚ್ಚನ್ನು ಕೊಡಗಿನ ಕೆಲವೇ ಕೆಲವು ಸ್ವಾಭಿಮಾನಿಗಳು ಹಚ್ಚಿ, ಕೆಚ್ಚೆದೆಯಿಂದ ನೇಣುಗಂಬವನ್ನು ಏರಿ ಪ್ರಾಣಾರ್ಪಣೆಯನ್ನು ಮಾಡಿರುವರು. ಅಂತಹ ವೀರಾಗ್ರಣಿಗಳಲ್ಲಿ ಮೊದಲಿಗರು ವೀರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರು. ಆ ಮೂಲಕ ಕೊಡಗಿನ ವೀರ ಪರಂಪರೆಯಲ್ಲಿ ಹುತಾತ್ಮ ಗುಡ್ಡೆಮನೆ ಅಪ್ಪಯ್ಯ ಗೌಡರು ಅಜರಾಮರರಾಗಿರುವರು.

ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡ ಅವರು ಕೊಡಗಿನ ಬಲಮುರಿ ಗ್ರಾಮದ ಗುಡ್ಡೆಮನೆ ಸುಬ್ಬಪ್ಪನವರ ಪ್ರಥಮ ಪುತ್ರನಾಗಿ ಕ್ರಿ.ಶ. ೧೭೯೨ರಲ್ಲಿ ಜನಿಸಿದರು. ಬಾಲ್ಯದಲ್ಲಿ ತುಂಬಾ ಸ್ವಾಭಿಮಾನಿ ತರುಣರಾಗಿದ್ದರು. ಅವರ ಮಡದಿ ಅಕ್ಕಮ್ಮ. ಕೊಡಗಿನ ಅರಸ ಲಿಂಗರಾಜರ ಆಳ್ವಿಕೆಯ ಕಾಲದಲ್ಲಿ ಜಮೇದಾರಾಗಿ ಸೇವೆ ಸಲ್ಲಿಸುತ್ತಿದ್ದು, ಚಿಕ್ಕವೀರರಾಜರ ಆಳ್ವಿಕೆಯ ಕಾಲ ಘಟ್ಟದಲ್ಲಿ ಇವರ ಸ್ವಾಭಿಮಾನ, ಸ್ವಾಮಿ ನಿಷ್ಠೆಯನ್ನು ಪರಿಗಣಿಸಿ ಸುಬೇದಾರ್‌ರಾಗಿ ಮುಂಬಡ್ತಿಯನ್ನು ಪಡೆದಿದ್ದರು. ಅವರಲ್ಲಿದ್ದ ಶೂರತನವನ್ನು ಕಂಡು ಕೊಡಗಿನ ಅಂದಿನ ರಾಜ ಲಿಂಗರಾಜರು ಅಪ್ಪಯ್ಯಗೌಡರಿಗೆ ಓಡಾಡಲು ಕುದುರೆಯನ್ನು ನೀಡಿದ್ದರು. ಅಪ್ಪಯ್ಯಗೌಡರು ಕೊಡಗಿನಾದ್ಯಂತ ಕುದುರೆಯ ಮೂಲಕ ಓಡಾಡುತ್ತಿದ್ದರು.

ಬ್ರಿಟಿಷ್ ಸಾಮ್ರಾಜ್ಯಶಾಹಿಗಳು ೧೮೩೧ರಲ್ಲಿ ಅಂದಿನ ಮೈಸೂರು ಮಹಾರಾಜರಾಗಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರನ್ನು ಪದಚ್ಯುತಗೊಳಿಸಿ ಆಡಳಿತ ಚುಕ್ಕಾಣಿಯನ್ನು ಹಿಡಿದರು. ನಂತರ ಅವಿಭಜಿತ ಕೊಡಗು ರಾಜ್ಯವನ್ನು ಆಕ್ರಮಿಸಲು ದುರುಳ ಬ್ರಿಟಿಷರು ಮುಂದಾದರು. ಕೊಡಗಿನ ಹಾಲೇರಿ ವಂಶದ ದೊಡ್ಡವೀರರಾಜೇಂದ್ರ ಮತ್ತು ಲಿಂಗರಾಜೇAದ್ರ ಒಡೆಯರು ಬ್ರಿಟಿಷರೊಂದಿಗೆ ಸ್ನೇಹದಿಂದ ವರ್ತಿಸುತ್ತಿದ್ದರು. ಕೊಡಗು ರಾಜ್ಯದ ಕೊನೆಯ ರಾಜ ಚಿಕವೀರರಾಜೇಂದ್ರ ಒಡೆಯರು ಬ್ರಿಟಿಷರೊಂದಿಗೆ ಸ್ನೇಹದಿಂದ ಇದ್ದರೂ, ಆಡಳಿತ ವ್ಯವಸ್ಥೆಯಲ್ಲಿ ಬ್ರಿಟಿಷರ ಹಸ್ತಕ್ಷೇಪವನ್ನು ಸಹಿಸುತ್ತಿರಲಿಲ್ಲ.

ಬ್ರಿಟಿಷರು ಕೊಡಗು ರಾಜ್ಯವನ್ನು ಆಕ್ರಮಿಸಿಕೊಂಡು ಜನ ವಿರೋಧಿ ಕ್ರಮಗಳನ್ನು ಜಾರಿಗೆ ತಂದರು. ಕೊಡಗಿನ ಪ್ರಜೆಗಳು ಧಾನ್ಯದ ರೂಪದಲ್ಲಿ ತೆರಿಗೆಯನ್ನು ಕೊಡುವುದರ ಬದಲು, ಹಣದ ರೂಪದಲ್ಲಿ ತೆರಿಗೆಯನ್ನು ನೀಡುವಂತೆ ಆಜ್ಞೆಯನ್ನು ಮಾಡಿದರು. ಅಲ್ಲದೆ ರೈತರು ಹೊಗೆಸೊಪ್ಪು ಬೆಳೆಯಲು ಬ್ರಿಟಿಷರ ಅನುಮತಿ ಪಡೆಯುವಂತೆ ಆದೇಶಿಸಿದರು.

ಹಣದ ರೂಪದಲ್ಲಿ ತೆರಿಗೆ ವಸೂಲಾತಿ ಮಾಡುವ ಆದೇಶ ಹಾಗೂ ಹೊಗೆಸೊಪ್ಪು ಬೆಳೆಯನ್ನು ಬೆಳೆಸಲು ಬ್ರಿಟಿಷರ ಅನುಮತಿ ಪಡೆಯುವಂತೆ ನೀಡಿದ ಆದೇಶದ ಬಗ್ಗೆ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರು ಮತ್ತು ಅವರ ಬೆಂಬಲಿಗರು ಬ್ರಿಟಿಷ್ ಸಾಮ್ರಾಜ್ಯ ಶಾಹಿಗಳ ಕ್ರೂರ ಕ್ರಮಗಳ ವಿರುದ್ಧ ದಂಗೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಂಡು ಅಧಿಕಾರವನ್ನು ಧಿಕ್ಕರಿಸಿ ಸ್ವತಃ ಸೇನೆ ಕಟ್ಟಿ ಬ್ರಿಟಿಷರ ಸಾಮ್ರಾಜ್ಯಶಾಹಿ ಧೋರಣೆಯ ವಿರುದ್ಧ ಯುದ್ಧಕ್ಕೆ ಸಿದ್ಧತೆಯನ್ನು ಮಾಡಿಕೊಂಡರು. ಕೆದಂಬಾಡಿ ರಾಮಗೌಡ, ಅಡಕ್ಕಾರು ಅಣ್ಣಿಗೌಡ, ಪುಟ್ಟ ಬಸವರಾಜು, ಅಪ್ಪಯ್ಯ ಗೌಡರು ಸೇರಿಕೊಂಡು ಬ್ರಿಟಿಷರನ್ನು ಬಗ್ಗು ಬಡಿಯಲು ಉಪಾಯ ಮಾಡತೊಡಗಿದರು.

ಕೆದಂಬಾಡಿ ರಾಮಗೌಡ, ಅಡಕ್ಕಾರು ಅಣ್ಣಿಗೌಡ ಹಾಗೂ ಮಾಚಯ್ಯಯವರು ಸುಳ್ಯದಲ್ಲಿ ಯುದ್ಧ ಸಿದ್ಧತೆಯನ್ನು ಮಾಡ ತೊಡಗಿದರು. ಗುಡ್ಡೆಮನೆ ಅಪ್ಪಯ್ಯಗೌಡ, ಕಲ್ಯಾಣ ಸ್ವಾಮಿ, ಹುಲಿ ಕೊಂದ ನಂಜಯ್ಯ, ಶಾಂತಳ್ಳಿ ಮಲ್ಲಯ್ಯ, ಚೆಟ್ಟಿ ಕುಡಿಯ, ಕುರ್ತು ಕುಡಿಯ ಮುಂತಾದವರು ಕೊಡಗಿನ ಎಲ್ಲಾ ಗ್ರಾಮಗಳಲ್ಲಿ ಸುತ್ತಾಡಿ ಬ್ರಿಟಿಷರ ವಿರುದ್ಧ ಯುದ್ಧಕ್ಕೆ ಸಿದ್ಧತೆ ಮತ್ತು ಯುದ್ಧ ಸಾಮಾಗ್ರಿಗಳ ಸಂಗ್ರಹಣೆಯಲ್ಲಿ ನಿರತರಾದರು. ಸುಳ್ಯದಲ್ಲಿ ಜಮಾವಣೆಗೊಂಡ ಸ್ವಾತಂತ್ರö್ಯ ಸಮರ ಸೇನೆ ಕೊಡಗಿನ ಕಡೆಗೆ ಪ್ರಯಾಣ ಬೆಳೆಸಿ, ಬ್ರಿಟಿಷರ ಅಧೀನದಲ್ಲಿ ದಿವಾನನಾಗಿದ್ದ ಲಕ್ಷಿö್ಮÃನಾರಾಯಣನ ಸಹೋದರ ರಾಮಪ್ಪಯ್ಯ ಸುಳ್ಯದಲ್ಲಿ ಸುಬೇದಾರ್‌ನಾಗಿದ್ದುಕೊಂಡು, ಆ ಭಾಗದ ಜನರಿಗೆ ತೊಂದರೆ ನೀಡುತ್ತಿದ್ದ. ಹಾಗಾಗಿ ಸ್ವಾತಂತ್ರö್ಯ ಸಮರ ಸೇನೆ ರಾಮಪ್ಪಯ್ಯನನ್ನು ಸೆರೆ ಹಿಡಿದು ಕೊಂದು ಹಾಕಿದರು. ಆ ಸ್ಥಾನಕ್ಕೆ ತಿಮ್ಮಪ್ಪಯ್ಯನನ್ನು ಸುಬೇದಾರ್‌ರಾಗಿ ಕಲ್ಯಾಣ ಸ್ವಾಮಿ ನೇಮಕ ಮಾಡಿದ.

ಕಲ್ಯಾಣ ಸ್ವಾಮಿ, ಅಪ್ಪಯ್ಯ ಗೌಡ, ಹುಲಿಕೊಂದ ನಂಜಯ್ಯ, ಚೆಟ್ಟಿ ಕುಡಿಯ ಮೊದಲಾದವರು ಚರ್ಚಿಸಿ ೧೮೩೭ರ ಮಾರ್ಚ್ ೫ರಂದು ಕೊಡಗಿನ ಕೋಟೆಗೆ ಮುತ್ತಿಗೆ ಹಾಕಿ, ಬ್ರಿಟಿಷರನ್ನು ಬಗ್ಗು ಬಡಿದು, ಕೊಡಗನ್ನು ಸ್ವಾಧೀನಪಡಿಸಿಕೊಳ್ಳುವುದೆಂದು ನಿರ್ಧರಿಸಿದರು. ಈ ವಿಷಯ ಬ್ರಿಟಿಷರಿಗೆ ತಿಳಿದು ಈ ದಾಳಿಯನ್ನು ಬಗ್ಗು ಬಡಿಯಬೇಕು ಎಂದು ಬ್ರಿಟಿಷರು ನಿರ್ಧರಿಸಿದರು. ಈ ಸಂದರ್ಭದಲ್ಲಿ ಸ್ವಾತಂತ್ರö್ಯ ಸಂಗ್ರಾಮಿಗಳು ಘಟ್ಟದ ಕೆಳಗಿನ ತಳನೀರು ಕಣಿವೆಯಲ್ಲಿ ಬೀಡು ಬಿಟ್ಟಿರುವ ವಿಚಾರ ಬ್ರಿಟಿಷ್ ಅಧಿಕಾರಿ ಲೀಹಾರ್ಡಿಗೆ ತಿಳಿದು ಅವರನ್ನು ದಮನ ಮಾಡಲು ಸೇನೆಯನ್ನು ಕಳುಹಿಸಿದನು.

ಮಂಗಳೂರಿನಲ್ಲಿ ಕಲ್ಯಾಣ ಸ್ವಾಮಿಗೆ ಈ ವಿಷಯ ತಿಳಿದು ತಕ್ಷಣ ಹುಲಿಕೊಂದ ನಂಜಯ್ಯ, ಸೋಮಯ್ಯ, ಚೆಟ್ಟಿ ಕುಡಿಯ, ಕುರ್ತು ಕುಡಿಯರ ನೇತೃತ್ವದಲ್ಲಿ ಸಾಕಷ್ಟು ಸಂಖ್ಯೆಯ ಯೋಧರನ್ನು ತಳನೀರು ಕಣಿವೆಯಲ್ಲಿ ಬೀಡು ಬಿಟ್ಟಿದ್ದ ಸ್ವಾತಂತ್ರö್ಯ ಯೋಧರ ಸಹಾಯಕ್ಕೆ ಕಳುಹಿಸಿಕೊಟ್ಟರು. ಕಲ್ಯಾಣ ಸ್ವಾಮಿಯ ಸೇನೆಗೂ, ಆಂಗ್ಲರ ಸೇನೆಗೂ ಭೀಕರ ಯುದ್ಧ ನಡೆಯುತ್ತದೆ. ಕೊನೆಗೆ ಕಲ್ಯಾಣ ಸ್ವಾಮಿಯ ದಳಪತಿಗಳಾದ ಹುಲಿಕೊಂದ ನಂಜಯ್ಯ, ಸೋಮಯ್ಯ, ಚೆಟ್ಟಿಕುಡಿಯ, ಕುರ್ತು ಕುಡಿಯ ಮುಂತಾದವರು ಸೆರೆಯಾಗಿ, ಮಡಿಕೇರಿ ಸೆರೆಮನೆ ಸೇರಿದರು. ಈ ವಿಷಯವನ್ನು ಅರಿತು ಅಪ್ಪಯ್ಯಗೌಡರಿಗೆ ಆಘಾತವಾಗಿ, ಆಪ್ತರೊಂದಿಗೆ ಸಮಾಲೋಚಿಸಿ ಬ್ರಟಿಷರ ಸ್ವಾಧೀನದಲ್ಲಿದ್ದ ಮಡಿಕೇರಿ ಕೋಟೆಗೆ ಮುತ್ತಿಗೆ ಹಾಕುವುದೆಂದು ತೀರ್ಮಾನ ಮಾಡಿದರು.

ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರು ತಮ್ಮ ಕುದುರೆಯ ಮೂಲಕ ಸ್ವಾತಂತ್ರö್ಯ ಸಂಗ್ರಾಮದ ಬಿಡಾರದತ್ತ ತೆರಳಿದರು. ತಾವು ನಾಡು ಮತ್ತು ನಾಲ್ಕುನಾಡಿನ ಸ್ವಾತಂತ್ರö್ಯ ಸಂಗ್ರಾಮದ ಅಪಾರ ಸಂಖ್ಯೆಯ ಯೋಧರೊಂದಿಗೆ, ಮಡಿಕೇರಿಯ ಉತ್ತರ ಭಾಗದಲ್ಲಿ ನಾಲ್ಕು ಮೈಲು ದೂರದಲ್ಲಿ ಬಿಡಾರ ಹೂಡಿದರು. ಶಾಂತಳ್ಳಿಯ ಮಲ್ಲಯ್ಯನ ನೇತೃತ್ವದ ಸೇನೆ ಅಪ್ಪಯ್ಯಗೌಡರ ಸೇನೆಯನ್ನು ಸೇರಿಕೊಂಡಿತು. ಈ ವಿಷಯ ಲೀಹಾರ್ಡಿಗೆ ತಿಳಿಯಿತು. ಪರಿಣಾಮ ಲೀಹಾರ್ಡಿಯು ಯಾವುದೇ ಮುನ್ಸೂಚನೆ ನೀಡದೆ ಏಕಾಏಕಿಯಾಗಿ ಅಪ್ಪಯ್ಯಗೌಡರ ಸೇನೆಯ ಮೇಲೆ ದಾಳಿ ಮಾಡಿದರು.

ಮಂಗಳೂರಿನಲ್ಲಿ ರಾಜ್ಯಭಾರ ಮಾಡುತ್ತಿದ್ದ ಕಲ್ಯಾಣಸ್ವಾಮಿ ಹಾಗೂ ಅವರ ಆಪ್ತರಾದ ರಾಮಗೌಡ, ಅಣ್ಣಿಗೌಡ, ಬಂಗರಾಜ ಮುಂತಾದವರು ಸಮಾಲೋಚನೆಯಲ್ಲಿ ತೊಡಗಿದ್ದ ಸಮಯದಲ್ಲಿ, ಬ್ರಿಟಿಷ್ ಸೇನೆ ಅವರ ಮೇಲೆ ಅನಿರೀಕ್ಷಿತ ದಾಳಿ ಮಾಡಿ ಕಲ್ಯಾಣ ಸ್ವಾಮಿ, ರಾಮಗೌಡ, ಬಂಗರಾಜರನ್ನು ಸೆರೆ ಹಿಡಿದು, ಮಂಗಳೂರಿನ ಬಿಕ್ರಾನಕಟ್ಟೆಯಲ್ಲಿ ಅಮಾನುಷವಾಗಿ ಗಲ್ಲ್ಲಿಗೇರಿಸಿದರು.

ಗುಡ್ಡೆಮನೆ ಅಪ್ಪಯ್ಯಗೌಡರೊಂದಿಗೆ ಸೆರೆಯಾಳುಗಳಾದ ನಾಲ್ಕುನಾಡಿನ ಉತ್ತು, ಪೆರಾಜೆಯ ಪಾರುಪತ್ತೆಗಾರ ಕೃಷ್ಣಯ್ಯ, ಶಾಂತಳ್ಳಿಯ ಮಲ್ಲಯ್ಯ, ಚೆಟ್ಟಿಕುಡಿಯ ಇವರುಗಳ ವಿರುದ್ಧ ಆಂಗ್ಲರು ವಿಚಾರಣೆಯ ನಾಟಕ ಮಾಡಿ ಜೀವಾವಧಿ ಶಿಕ್ಷೆಯನ್ನು ವಿಧಿಸಿ ಸಿಂಗಾಪುರ ಮತ್ತು ಕಲ್ಲಿಕೋಟೆಯ ಸೆರೆಮನೆಗೆ ತಳ್ಳಿದರು. ಅಪ್ಪಯ್ಯಗೌಡರ ಸಹೋದರ ಪಾರುಪತ್ತೆಗಾರ ತಮ್ಮಯ್ಯಗೌಡರನ್ನು ಸೆರೆಹಿಡಿದು ಸಿಂಗಾಪುರ ಸೆರೆಮನೆಗೆ ತಳ್ಳಿದರು.

ಬ್ರಿಟಿಷರ ವಿರುದ್ಧದ ದಂಗೆಗೆ ಸೂತ್ರಧಾರಿ ಗುಡ್ಡೆಮನೆ ಅಪ್ಪಯ್ಯಗೌಡ ಎಂಬುವುದನ್ನು ತಿಳಿದ ಬ್ರ‍್ರಿಟಿಷರು, ಅಪ್ಪಯ್ಯಗೌಡರ ವಿರುದ್ಧ ವಿಶೇಷ ವಿಚಾರಣೆ ನಡೆಸಿ, ಇವರನ್ನು ಜೀವಂತವಾಗಿ ಬಿಟ್ಟರೆ ಮತ್ತೆ ಬ್ರಿಟಿಷರ ಮೇಲೆ ದಾಳಿಯನ್ನು ನಡೆಸುತ್ತಾರೆ ಎಂದು ಅರಿತು, ಬ್ರಿಟಿಷರ ನ್ಯಾಯಾಲಯ ಸಾರ್ವಜನಿಕರ ಎದುರು ಬಹಿರಂಗವಾಗಿ ಗಲ್ಲಿಗೇರಿಸಬೇಕೆಂದು ತೀರ್ಪು ನೀಡುತ್ತದೆ. ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ೧೮೩೭ರ ಅಕ್ಟೋಬರ್ ೩೧ರಂದು ಬೆಳ್ಳಿಗೆ ೧೦ ಗಂಟೆಗೆ ಮಡಿಕೇರಿ ಕೋಟೆಯ ಮುಂಭಾಗದಲ್ಲಿ ಬಹಿರಂಗವಾಗಿ ಗಲ್ಲಿಗೇರಿಸಲಾಯಿತು.

ಸ್ವಾತಂತ್ರö್ಯ ಸಂಗ್ರಾಮದಲ್ಲಿ ಸೆರೆಯಾದ ಗುಡ್ಡೆಮನೆ ಅಪ್ಪಯ್ಯಗೌಡರನ್ನು ನೇಣುಹಾಕುವ ಸಂದರ್ಭದಲ್ಲಿ ಅವರ ಪತ್ನಿ ಮದುಮಗಳ ಉಡುಪಿನಲ್ಲಿ ಹಾಜರಿರಬೇಕು, ಅಲ್ಲದೆ ಜಿಲ್ಲೆಯ ಸಾರ್ವಜನಿಕರು, ರೈತರು, ಅಧಿಕಾರಿಗಳು, ಪಟೇಲರುಗಳು ಹಾಜರಿರಬೇಕೆಂದು ಬ್ರಿಟಿಷ್ ಅಧಿಕಾರಿ ಲೀಹಾರ್ಡಿ ಆದೇಶ ಮಾಡಿದ. ಅದರಂತೆ ಬ್ರಿಟಿಷರು ಗುಡ್ಡೆಮನೆ ಅಪ್ಪಯ್ಯಗೌಡರನ್ನು ನೇಣುಗಂಬಕ್ಕೆ ಏರಿಸಿದರು. ದೇಶದ ಸ್ವಾತಂತ್ರö್ಯಕ್ಕಾಗಿ ತಮ್ಮ ಜೀವನವನ್ನು ಬಲಿದಾನ ಮಾಡಿರುವ ವೀರಾಗ್ರಣಿ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರನ್ನು ಸಂಸ್ಮರಣೆ ಮಾಡುವುದು ಭಾರತೀಯರಾದ ನಮ್ಮ ಆದ್ಯ ಕರ್ತವ್ಯ.

-ಡಾ.ದಯಾನಂದ.ಕೆ.ಸಿ., ಪ್ರಾಧ್ಯಾಪಕರು,

ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಡಿಕೇರಿ