ನಾಪೋಕ್ಲು, ಅ. ೩೦: ಇಡೀ ದೇಶದಲ್ಲಿ ಹಿಂದುತ್ವದ ಬಗ್ಗೆ ಗೌರವವಿದೆ. ರಾಷ್ಟç ಹಾಗೂ ರಾಷ್ಟçದ ಧರ್ಮವನ್ನು ನಾಶ ಮಾಡಲು ಕೆಲವರು ಪ್ರಯತ್ನಿಸುತ್ತಿದ್ದು, ಅಂತವರ ವಿರುದ್ಧ ಸಂಘಟಿತರಾಗಬೇಕಾಗಿದೆ ಎಂದು ಹಿಂದೂ ಜಾಗರಣಾ ವೇದಿಕೆಯ ದಕ್ಷಿಣ ಪ್ರಾಂತ್ಯ ಪ್ರಧಾನ ಕಾರ್ಯದರ್ಶಿ ಕೆ.ಟಿ.ಉಲ್ಲಾಸ ಹೇಳಿದರು. ಸಮೀಪದ ಚೆಯ್ಯಂಡಾಣೆಯ ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಸುರಕ್ಷಾ ಸಮಿತಿಯ ವತಿಯಿಂದ ಲಕ್ಷಿö್ಮ ಮಹಿಳಾ ಸಮಾಜದಲ್ಲಿ ಶುಕ್ರವಾರ ಏರ್ಪಡಿಸಲಾಗಿದ್ದ ದ್ವಜಾರೋಹಣ ಕಾರ್ಯಕ್ರಮ ಹಾಗೂ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.

೯೦ ವರ್ಷಗಳ ಇತಿಹಾಸದ ಹಿಂದೂ ಸಂಘಟನೆಯಿAದಾಗಿ ನೂರಾರು ಯುವಕರು ಧರ್ಮದ ಬಗ್ಗೆ ಜಾಗೃತರಾಗಿದ್ದಾರೆ. ದೇಶದಲ್ಲಿ ಹಿಂದುತ್ವದ ಬಗ್ಗೆ ಪ್ರತಿಯೊಬ್ಬರಿಗೂ ಗೌರವ ಇದೆ. ಆದರೆ ಕೆಲವರು ಹಿಂದೂ ಸಂಘಟನೆಯನ್ನು ಮುಗಿಸಲು ಸಂಚು ರೂಪಿಸುತ್ತಿದ್ದಾರೆ. ಇದಕ್ಕೆ ಆಸ್ಪದ ಕೊಡಬಾರದು ಎಂದರು.

ಯುವ ವಾಗ್ಮಿ ಹೋರಾಟಗಾರ್ತಿ ಹಾರಿಕ ಮಂಜುನಾಥ್ ಮಾತನಾಡಿ ಹಿಂದೂ ಧರ್ಮಕ್ಕೆ ೨೫ ಲಕ್ಷ ವರ್ಷಗಳ ಇತಿಹಾಸ ಇರುವುದರಿಂದಲೇ ಇಂದು ಮಹಿಳೆ ಮುಖಕ್ಕೆ ಬೊಟ್ಟು ಹಾಕುತ್ತಾಳೆ. ಇದು ಹಿಂದೂ ಧರ್ಮದ ಸಂಕೇತವಾಗಿದೆ ಎಂದ ಅವರು ಅದರಂತೆ ಕೇಸರಿ ಶಲ್ಯ, ಭಗವಧ್ವಜ, ಕೂಡ ಹಿಂದೂಗಳ ಸಂಕೇತವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುಕ್ಕೆಮನೆ ಆರ್, ನಾರಾಯಣ ಮೂರ್ತಿ, ವಹಿಸಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಜೀತ್ ಕುಕ್ಕೇರ, ಹಿರಿಯರಾದ ಮಚ್ಚಂಡ ರಾಮು ಮುದ್ದಯ್ಯ, ಹಿಂದೂ ಸಂಘಟನೆಯ ಪ್ರಮುಖರಾದ ಪವನ್ ತೋಟಂಬೈಲು, ಮತ್ತಿತರ ಕಾರ್ಯಕರ್ತರು ಇದ್ದರು. ಈ ಸಂದರ್ಭ ಕುಕ್ಕೆಮನೆ ಸುಬ್ರಮಣ್ಯ ಸಂತಾಪಿಸಲಾಯಿತು.

ಕಾರ್ಯಕ್ರಮಕ್ಕೆ ಮೊದಲು ಗೋವು ಪೂಜೆ ನೆರವೇರಿಸಿ ಪಟ್ಟಣದಲ್ಲಿ ಮೆರವಣಿಗೆ ನಡೆಸಲಾಯಿತು. ಚೇಲಾವರ ಜಲಪಾತಕ್ಕೆ ತೆರಳುವ ಜಂಕ್ಷನ್ ಬಳಿ ಮಚ್ಚಂಡ ಎಸ್.ರಾಮು ಮುದ್ದಯ್ಯ ಧ್ವಜಾರೋಹಣ , ಸರ್ಕಾರಿ ಆಸ್ಪತ್ರೆಯ ಬಳಿ ಬಿಳಿಯಂಡ್ರ ಚಂದ್ರಶೇಖರ್ ಧ್ವಜಾರೋಹಣ ,ಪಟ್ಟಣದಲ್ಲಿ ಕುಕ್ಕೆಮನೆ ನಾರಾಯಣ ಮೂರ್ತಿ ಧ್ವಜಾರೋಹಣ ನೆರವೇರಿಸಿದರು. ಚೇನಂಡ ಸಂಪತ್ ಸ್ವಾಗತಿಸಿ ಶ್ಯಾನೂಬೊಗರ ಮೀನಾಕ್ಷಿ ಶಿವರಾಂ ಪ್ರಾರ್ಥಿಸಿದರು. ಬಿಳಿಯಂಡ್ರ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿ ತೋಟಂಬೈಲು ಅನಂತಕುಮಾರ್ ವಂದಿಸಿದರು. ವಿವಿಧ ಹಿಂದೂಪರ ಸಂಘಟನೆಗಳ ಪದಾಧಿಕಾರಿಗಳು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಸಂದರ್ಭ ವೇದಿಕೆಯ ಉಪಾಧ್ಯಕ್ಷ ಬಿಳಿಯಂಡ್ರ ಶರಣು, ಚೆರುವಾಳಂಡ ರಾಕೇಶ್ ಸುಬ್ಬಯ್ಯ, ಪ್ರಧಾನ ಕಾರ್ಯದರ್ಶಿ ಸುಧಿ ಮಕ್ಕಿಮನೆ, ಕಾರ್ಯದರ್ಶಿಗಳಾದ ಎಸ್.ಜಿ. ವಿವೇಕ್, ಸಿ.ಸಿ. ನವೀನ್, ಖಜಾಂಚಿ ತೋಟಂಬೈಲ್ ಪವನ್, ಪೊಕ್ಕೋಳಂಡ್ರ ದನೋಜ್ ಹಾಗೂ ಹಿಂದೂ ಪರ ಸಂಘಟನೆಗಳ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಸಮೀಪದ ಚೆಯ್ಯಂಡಾಣೆಯ ಹಿಂದೂ ಜಾಗರಣ ವೇದಿಕೆ ಮತ್ತು ಹಿಂದೂ ಸುರಕ್ಷಾ ಸಮಿತಿಯ ವತಿಯಿಂದ ಚೆಯ್ಯಂಡಾಣೆಯಲ್ಲಿ ಮೆರವಣಿಗೆ ನಡೆಸಲಾಯಿತು. -ದುಗ್ಗಳ