ಕೂಡಿಗೆ, ಅ. ೩೦: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮದಲಾಪುರ ವ್ಯಾಪ್ತಿಯಲ್ಲಿ ಕಾಡಾನೆಗಳು ಭತ್ತ ಮತ್ತು ಜೋಳ ಬೆಳೆಯನ್ನು ತುಳಿದು, ತಿಂದು ನಾಶಪಡಿಸಿವೆ.
ಬೆಂಡೆಬೆಟ್ಟದಿAದ ಬಂದಿರುವ ಕಾಡಾನೆಗಳು ಹಾರಂಗಿ ನದಿಯನ್ನು ದಾಟಿಕೊಂಡು ಬಂದು ಮದಲಾಪುರ ವ್ಯಾಪ್ತಿಯ ನಾಗರಾಜ್, ಮಂಜುನಾಥ, ವೈರಮುಡಿ, ಸೋಮಶೇಖರ್ ಎಂಬವರ ಗದ್ದೆಗಳಲ್ಲಿ ಭತ್ತ ಬೆಳೆಯನ್ನು ಮತ್ತು ಅಕ್ಕ ಪಕ್ಕದ ಜಮೀನಿನಲ್ಲಿ ಜೋಳದ ಬೆಳೆಯನ್ನು ಸಂಪೂರ್ಣ ನಾಶಪಡಿಸಿವೆ.
ಅರಣ್ಯ ಇಲಾಖಾ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ನೀಡುವ ಭರವಸೆ ನೀಡಿದರು.