ಪೊನ್ನಂಪೇಟೆ, ಅ.೩೦:ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಬಿಟ್ಟಂಗಾಲದ ತಂಗಾಳಿ ಒಳಾಂಗಣ ಕ್ರೀಡಾಂಗಣದಲ್ಲಿ ಒಕ್ಕಲಿಗರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಯನ್ನು ಆಯೋಜಿಸಲಾಗಿದ್ದು, ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ವಿ.ಪಿ.ಲೋಹಿತ್ ಗೌಡ ಪಂದ್ಯಾವಳಿಗೆ ಚಾಲನೆ ನೀಡಿದರು.

ಈ ಸಂಧರ್ಭ ಪಂದ್ಯಾವಳಿ ಆಯೋಜನೆಗೆ ಸಹಕಾರ ನೀಡಿದ ದಾನಿಗಳನ್ನು ವೇದಿಕೆ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಚನ್ನಂಗಿ ಸ್ನೇಹ ಬಳಗದ ಅಧ್ಯಕ್ಷ ವಿ.ಸಿ.ಪ್ರಕಾಶ್, ವಿ.ಎಂ.ದಿನೇಶ್, ಕೈಕೇರಿಯ ಸುನಂದ ತಿಮ್ಮಯ್ಯ, ಕಣ್ಣಂಗಾಲದ ಸೌಮ್ಯ ವಸಂತ್, ಚನ್ನಂಗಿಯ ವಿ.ವಿ.ಡಾಲು, ಕೋಟೆಕೊಪ್ಪದ ವಿ.ಸಿ.ಸುರೇಶ್ ಹಾಗೂ ವೇದಿಕೆಯ ಪದಾಧಿಕಾರಿಗಳು ಹಾಗೂ ಕ್ರೀಡಾ ಪಟುಗಳು ಹಾಜರಿದ್ದರು. ವಿ.ಜಿ.ಮಧುಸೂದನ್ ಸ್ವಾಗತಿಸಿ, ಕೆ.ಬಿ.ಪವನ್ ಕುಮಾರ್ ವಂದಿಸಿದರು. ಮೂರುದಿನಗಳ ಕಾಲ ಪಂದ್ಯಾವಳಿ ನಡೆಯಲಿದ್ದು, ನ.೧ ರಂದು ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಲಿದೆ.