ಮಡಿಕೇರಿ, ಅ. ೩೦: ಪಂಚಾಯಿತಿ ಕಟ್ಟಡವೆಂಬುದು ಸಾರ್ವಜನಿಕ ಆಸ್ತಿಯಾಗಿದ್ದು, ಕುಂದಚೇರಿ ಗ್ರಾ.ಪಂ. ಕಟ್ಟಡ ನಿರ್ಮಾಣ ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗದಿಂದ ಅನುಷ್ಠಾನಗೊಳಿಸಲು ಈ ಹಿಂದೆಯೇ ತೀರ್ಮಾನಿಸಲಾಗಿದೆ. ಆದರೆ ಕೆಲವು ಗ್ರಾಮಸ್ಥರು ರಾಜಕೀಯ ದುರುದ್ದೇಶದಿಂದ ಇಲ್ಲ-ಸಲ್ಲದ ಆರೋಪ ಮಾಡಿ ಕಟ್ಟಡ ನಿರ್ಮಾಣಕ್ಕೆ ವಿರೋಧ ವ್ಯಕ್ತಪಡಿ ಸುತ್ತಿದ್ದಾರೆ ಎಂದು ಕುಂದಚೇರಿ ಗ್ರಾ.ಪಂ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಪಂಚಾಯಿತಿ ಅಧ್ಯಕ್ಷೆ ಸಿ.ಯು ಸಬಿತ, ಉಪಾಧ್ಯಕ್ಷ ಕೆ.ವಿ ಪ್ರವೀಣ್‌ಕುಮಾರ್ ಹಾಗೂ ಸದಸ್ಯರು, ಗ್ರಾ.ಪಂ ಕಟ್ಟಡ ಕಟ್ಟಲು ಸರಿಯಾದ ದಾಖಲಾತಿ ಇಲ್ಲದ ಕಾರಣ ೨೦೧೯-೨೦ರ ಗ್ರಾಮ ಸಭೆಯಲ್ಲಿ ಇದಕ್ಕೆ ವಿರೋಧವಿತ್ತು ಎಂಬ ಕೆಲವರ ಆರೋಪ ಸತ್ಯಕ್ಕೆ ದೂರವಾಗಿದೆ ಎಂದರು. ೨೦೧೭ ರ ಡಿಸೆಂಬರ್ ೧೧ ರಂದು ನಡೆದ ಸಾಮಾನ್ಯ ಸಭೆಯಲ್ಲಿ ಪಂಚಾ ಯಿತಿಯ ನೂತನ ಕಟ್ಟಡ ನಿರ್ಮಾಣ ಸಂಬAಧ ಚರ್ಚಿಸಲಾಗಿ ೩ ಜನರು ಹೊರತುಪಡಿಸಿ ಸಭಿಕರೆಲ್ಲರು ಸಹಮತ ಸೂಚಿಸಿದ್ದರು. ಹಾಗೆಯೇ ನಂತರದ ಕ್ರಿಯಾ ಯೋಜನೆಯಲ್ಲಿ ಇದಕ್ಕೆ ಹಣವನ್ನು ಮೀಸಲಿಡ ಲಾಯಿತು.
ಕೆಲ ಗ್ರಾಮಸ್ಥರು ಆರೋಪಿಸಿದಂತೆ ೨೦೧೯-೨೦ ರ ಸಭೆಯಲ್ಲಿ ಕಟ್ಟಡದ ಬಗ್ಗೆ ಯಾವುದೇ ರೀತಿಯ ಚರ್ಚೆಗಳಾಗಿಲ್ಲ ಎಂಬ ಸ್ಪಷ್ಟನೆ ನೀಡಿದರು.
೧೪ನೇ ಹಣಕಾಸಿನ ಯೋಜನೆ ಯಡಿಯಲ್ಲಿ ಒಟ್ಟು ರೂ. ೧೦,೮೫,೨೫೦ ಕಟ್ಟಡ ಕಟ್ಟಲು ಮೀಸಲಿಡಲಾಗಿದ್ದು, ಈ ಮೊತ್ತವನ್ನು ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗದಲ್ಲಿ ಠೇವಣಿ ಇಡಲಾಗಿದೆ. ೧೫ನೇ ಹಣಕಾಸಿನ ಯೋಜನೆಯಲ್ಲಿ ಹಾಗೂ ರಾಜೀವ್ ಗಾಂದಿ ಸಶಸ್ತಿçÃಕರಣ ಯೋಜನೆ ಸೇರಿ ಮೀಸಲಾದ ರೂ. ೫,೫೪,೮೭೭ ಹಣವನ್ನು ಇಂಜಿನಿಯರಿAಗ್ ಉಪವಿಭಾಗಕ್ಕೆ ವರ್ಗಾವಣೆ ಮಾಡಲು ಬಾಕಿ ಇದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ರಾಜೀವ್‌ಗಾಂಧಿ ಸೇವಾ ಕೇಂದ್ರ ನಿರ್ಮಾಣ ಹೆಸರಲ್ಲಿ ರೂ. ೧೮,೨೨,೦೦೦ ಮೀಸಲಿಡಲಾಗಿದ್ದು, ಒಟ್ಟು ರೂ. ೩೪ ಲಕ್ಷದಲ್ಲಿ ಕಟ್ಟಡ ನಿರ್ಮಾಣವಾಗಲಿದ್ದು, ಕಾನೂನಾ ತ್ಮಕವಾಗಿ ಕಟ್ಟಡ ನಿರ್ಮಾಣ ಮುಂದುವರೆಯುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಂಚಾಯಿತಿ ಸದಸ್ಯರುಗಳಾದ ಕೆ.ಯು ಹರೀಶ್, ಪಿ.ಬಿ ದಿನೇಶ್, ಬೊಮ್ಯನ ಬಸಪ್ಪ ಹಾಗೂ ಬೇಬಿ ಪೊನ್ನಪ್ಪ ಹಾಜರಿದ್ದರು.