ಮಡಿಕೇರಿ, ಅ. ೨೯; ಅರಣ್ಯ ಇಲಾಖೆಗೆ ಸಿ ಮತ್ತು ಡಿ ಜಾಗ ಹಸ್ತಾಂತರ ಸಂಬAಧ ಮರು ಪರಿಶೀಲನೆಗಾಗಿ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸುವದಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹೇಳಿದರು.
ಜಿಲ್ಲಾ ಅಭಿವೃದ್ಧಿ ಮತ್ತು ಸಮನ್ವಯ ಸಮಿತಿ ಸಭೆಯಲ್ಲಿಂದು ನಗರಸಭೆಯ ಕಸ ವಿಲೇವಾರಿಗೆ ಪರ್ಯಾಯ ಜಾಗ ಗುರುತಿಸಿದ ಬಗ್ಗೆ ಪ್ರಶ್ನಿಸಿದಾಗ ಆಯುಕ್ತರು, ಪ್ರಸ್ತುತ ಗುರುತಿಸಲಾಗಿರುವ ಜಾಗ ಸಿ ಮತ್ತು ಡಿ ವರ್ಗಕ್ಕೆ ಸೇರಿದ್ದೆಂದು ಅರಣ್ಯ ಇಲಾಖೆ ತಡೆಯೊಡ್ಡಿರುವದಾಗಿ ತಿಳಿಸಿದಾಗ ಮಧ್ಯ ಪ್ರವೇಶಿಸಿದ ಶಾಸಕರು; ಸಿ ಮತ್ತು ಡಿ ಜಾಗವನ್ನು ಅರಣ್ಯ ಇಲಾಖೆಯಿಂದ ಹಿಂಪಡೆದು ಲ್ಯಾಂಡ್ ಬ್ಯಾಂಕ್ಗೆ ಹಸ್ತಾಂತರಿಸಲಾಗಿದೆ. ಸರಕಾರಿ ಉದ್ದೇಶಕ್ಕೆ ಜಾಗ ಬೇಕಾಗುತ್ತದೆ.
ಇದೀಗ ೧೧,೭೨೨.೨೯ ಎಕರೆ ಜಾಗವನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವAತೆ ನ್ಯಾಯಾಲಯ ಆದೇಶಿಸಿದೆ. ಈ ಬಗ್ಗೆ ಮರು ಪರಿಶೀಲನೆೆಗೆ ಅಫಿಡವಿಟ್ ಸಲ್ಲಿಸುವದಾಗಿ ಹೇಳಿದರು.