ಮಡಿಕೇರಿ, ಅ. ೨೯: ಮಡಿಕೇರಿಯ ಸ್ಟೋನ್‌ಹಿಲ್ ಬಳಿ ಬೆಟ್ಟದ ಮೇಲೆ ಮತ್ತೆ ಕಸಗಳನ್ನು ಹಾಕದೇ ಆದಷ್ಟು ಶೀಘ್ರ ಅಲ್ಲಿರುವ ಕಸದ ರಾಶಿಯನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಸಂಸದ ಪ್ರತಾಪ್ ಸಿಂಹ ನಗರಸಭೆಗೆ ಸೂಚನೆ ನೀಡಿದರು.

ಇಂದು ಜಿ.ಪಂ.ಸಭಾAಗಣದಲ್ಲಿ ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಬೆಟ್ಟದ ಮೇಲಿರುವ ಕಸದ ರಾಶಿ ತೆರವುಗೊಳಿಸುವ ಸಂಬAಧ ಕೈಗೊಳ್ಳಲಾಗಿರುವ ಕ್ರಮದ ಬಗ್ಗೆ ಪ್ರಶ್ನಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ನಗರಸಭೆ ಪೌರಾಯುಕ್ತ ಎಸ್.ವಿ. ರಾಮದಾಸ್, ೧೫ನೇ ಹಣಕಾಸು ಯೋಜನೆಯಡಿ ರೂ. ೪೪ ಲಕ್ಷ ಅನುದಾನ ಬಂದಿದೆ, ಕಸ ತೆರವುಗೊಳಿಸುವ ಸಂಬAಧ ಟೆಂಡರ್ ಕರೆಯಲಾಗಿತ್ತಾದರೂ ಯಾರೂ ಭಾಗವಹಿಸದ ಕಾರಣ ಮರು ಟೆಂಡರ್ ಕರೆಯಲಾಗಿ, ಮೈಸೂರಿನ ಸಂಸ್ಥೆಯೊAದು ಮುಂದೆ ಬಂದಿದೆ. ಪ್ರಸ್ತುತ ಬೆಟ್ಟದಲ್ಲಿ ಅಂದಾಜು ೬೦ ಸಾವಿರ ಟನ್‌ನಷ್ಟು ಕಸ ಸಂಗ್ರಹವಾಗಿದ್ದು, ಒಂದು ಟನ್ ಕಸ ತೆರವುಗೊಳಿಸಲು ಟೆಂಡರ್‌ದಾರರು ರೂ. ೮೨೬ ದರ ನಮೂದಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಮಾತನಾಡಿದ ಸಂಸದರು; ೧೫ನೇ ಹಣಕಾಸು ಯೋಜನೆಯಡಿ ಶೇ.೩೦ ಕುಡಿಯುವ ನೀರಿಗೆ, ಶೇ.೩೦ ಕಸ ತ್ಯಾಜ್ಯ ವಿಲೇವಾರಿ ಕಾರ್ಯಕ್ಕೆ ಬಳಸಬಹು ದಾಗಿದೆ, ಇದೀಗ ರಾಶಿಯಾಗಿರುವ ಬೆಟ್ಟದ ಮೇಲೆ ಮತ್ತೆ ಕಸ ಹಾಕಬಾರದು, ಕಸ ಹೆಚ್ಚಾದಂತೆ ಕರಗಿ ನೀರಾಗಿ ಮತ್ತೆ ಜನವಸತಿ ಪ್ರದೇಶದತ್ತ ಹರಿಯುತ್ತದೆ. ಇದನ್ನು ತಡೆಯಬೇಕಾದರೆ ಕಸವನ್ನು ಅಲ್ಲಿಂದ ತೆರವುಗೊಳಿಸಬೇಕು, ಪರ್ಯಾಯ ಜಾಗ ಗುರುತಿಸಿ, ಅಲ್ಲಿ ಕಸ ಸುಡುವ, ಕಸ ವಿಂಗಡಿಸುವ ಯಂತ್ರಗಳನ್ನು ಅಳವಡಿಸಬೇಕು, ಮಂಗಳೂರಿನಲ್ಲಿ ಟನ್‌ಗೆ ೫೬೦ ಹಾಗೂ ಮೈಸೂರಿನಲ್ಲಿ ಟನ್‌ಗೆ ೪೮೦ ರಂತೆ ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.

ಸಭೆಗೆ ಕರೆಯಿರಿ

ನಗರಸಭೆಯ ವಾರ್ಷಿಕ ಆದಾಯದ ಬಗ್ಗೆ ಸಂಸದರ ಪ್ರಶ್ನೆಗೆ ಉತ್ತರಿಸಿದ ಆಯುಕ್ತರು; ರೂ.೭.೫ ಕೋಟಿ ಇದ್ದು, ನಗರಸಭೆ ಖರ್ಚು ವೆಚ್ಚಗಳಿಗೆ ಬಳಸಿಕೊಳ್ಳುತ್ತಿರುದಾಗಿ ಹೇಳಿದರು. ಮೊದಲು ನಗರದ ಜನತೆಗೆ ಮೂಲಭೂತ ವ್ಯವಸ್ಥೆ ಕಲ್ಪಿಸಬೇಕು, ನಂತರ ಇತರ ವೆಚ್ಚಗಳಿಗೆ

(ಮೊದಲ ಪುಟದಿಂದ) ಎಂದು ಹೇಳಿದ ಸಂಸದರು, ನಗರ ಸಭೆಯ ಆಡಳಿತ ಮಂಡಳಿ ಸಭೆ ನಡೆಸುವಾಗ ತನ್ನನ್ನು ಆಹ್ವಾನಿಸುವಂತೆ ಹೇಳಿದರಲ್ಲದೆ, ಸಭೆಯಲ್ಲಿ ಕಸ ವಿಲೇವಾರಿ ಬಗ್ಗೆ ತಾನೂ ಮಾಹಿತಿ ನೀಡಲಿದ್ದು, ಅನುಮೋದನೆ ಪಡೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಕೋರ್ಟ್ಗೆ ಹೋಗಲು ಸೂಚನೆ

ಸಭೆಯಲ್ಲಿ ಹಾಜರಿದ್ದ ಶಾಸಕ ರಂಜನ್ ಅವರು ನ್ಯಾಯಾಲಯದಲ್ಲಿರುವ ವ್ಯಾಜ್ಯ ಏನಾಯಿತೆಂದು ಪ್ರಶ್ನಿಸಿದಾಗ ಉತ್ತರಿಸಿದ ಆಯುಕ್ತರು,

ವ್ಯಾಜ್ಯ ಮುಗಿದಿಲ್ಲ ಎಂದು ಹೇಳಿದರು.

ಮುಂದಿನ ವಿಚಾರಣೆ ಸಂದರ್ಭ ಸಭೆಯಲ್ಲಿನ ಚರ್ಚೆ

ಬಗ್ಗೆ ವರದಿ ಸಹಿತ ನ್ಯಾಯಾಲಯಕ್ಕೆ ಹಾಜರಾಗಿ ಮಾಹಿತಿ ನೀಡುವಂತೆ ಹೇಳಿದರು. ಕಸ ಅಲ್ಲಿಯೇ ಉಳಿದರೆ ಮತ್ತೆ ಕೆಳಗಡೆ ಬರುತ್ತದೆ ಎಂದು ಹೇಳಿದರು.