ವೀರಾಜಪೇಟೆ, ಅ. ೨೯: ವೀರಾಜಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಮಂಡೇಪAಡ ವಿನಾಂಕ್ ಕುಟ್ಟಪ್ಪ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ವೀರಾಜಪೇಟೆ, ಅ. ೨೯: ವೀರಾಜಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಮಂಡೇಪAಡ ವಿನಾಂಕ್ ಕುಟ್ಟಪ್ಪ ಆಯ್ಕೆಯಾಗಿದ್ದಾರೆ. ಬಿಜೆಪಿಯಿಂದ ಇಬ್ಬರು ವಾಪಸ್ ಪಡೆಯದ ಕಾರಣ ಚುನಾವಣೆ ನಡೆಸಿದರು.
ಪಟ್ಟಣ ಪಂಚಾಯಿತಿಯ ಸಭಾಂಗಣದಲ್ಲಿ ತಹಶೀಲ್ದಾರ್ ಆರ್ ಯೋಗಾನಂದ್ ಅವರ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಬಿಜೆಪಿಯ ಹರ್ಷವರ್ದನ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಅಪರಾಹ್ನ ಮೂರು ಗಂಟೆಗೆ ಚುನಾವಣೆ ನಿಗದಿ ಮಾಡಲಾಗಿತ್ತು. ನಿಗದಿತ ಸಮಯಕ್ಕೆ ಬಿಜೆಪಿ ಸದಸ್ಯರು, ಶಾಸಕ ಬೋಪಯ್ಯ, ಸಂಸದ ಪ್ರತಾಪ್ ಸಿಂಹ ಸಭಾಗಂಣಕ್ಕೆ ಆಗಮಿಸಿದರು. ೧೮ ಸದಸ್ಯ ಬ¯ದ ಪಂಚಾಯಿತಿಯಲ್ಲಿ ಬಿಜೆಪಿ ೮ ಕಾಂಗ್ರೆಸ್ ೬, ಜೆಡಿಎಸ್ ೧, ಪಕ್ಷೇತರ ೩ ಜನ ಸದಸ್ಯರು ಹಾಜರಿದ್ದರು.
ಬಿಜೆಪಿ ಅಭ್ಯರ್ಥಿ ವಿನಾಂಕ್ ಕುಟ್ಪಪ್ಪ ಅವರ ಪರ ಆಶಾ ಸಬ್ಬಯ್ಯ, ಸುಭಾಷ್ ಮಹಾದೇವ್, ಅನಿತಾ ಕುಮಾರ್,
(ಮೊದಲ ಪುಟದಿಂದ) ಪೂರ್ಣಿಮ, ಟಿ.ಆರ್ ಸುಶ್ಮಿತಾ, ಯಶೋಧ, ಸುನೀತಾ ಜೂನಾ, ಸಂಸದ ಪ್ರತಾಪ್ ಸಿಂಹ, ಶಾಸಕ ಕೆ.ಜಿ. ಬೋಪಯ್ಯ ಕೈ ಎತ್ತುವುದರ ಮೂಲಕ ಮತ ಚಲಾಯಿಸಿದರು.
ಕಾಂಗ್ರೆಸ್‌ನ ಮಹಮದ್ ರಾಫಿ ಪರ ಪಟ್ಟಡ ರಂಜಿ ಪೂಣಚ್ಚ, ಡಿ.ಪಿ ರಾಜೇಶ್, ಸಿ.ಕೆ ಪೃಥ್ವಿನಾಥ್, ತಬಸಮ್, ಅಗಸ್ಟಿನ್ ಬೆನ್ನಿ, ಪಕ್ಷೇತರ ಸದಸ್ಯ ರಜನಿಕಾಂತ್ ಕೈ ಎತ್ತಿ ತಮ್ಮ ಮತವನ್ನು ಚಲಾಯಿಸಿದರು. ಪಕ್ಷೇತರ ಸದಸ್ಯರಾದ ಮನೆಯಪಂಡ ದೇಚಮ್ಮ ಕಾಳಪ್ಪ, ಅಬ್ದುಲ್ ಜಲೀಲ್ ಯಾರಿಗು ಮತ ಚಲಾಯಿಸದೆ ತಟಸ್ಥರಾದ ಕಾರಣ ಚುನಾವಣಾಧಿಕಾರಿ ಆರ್ ಯೋಗಾನಂದ್ ೧೦ ಮತ ಪಡೆದ ಮಂಡೆಪAಡ ವಿನಾಂಕ್ ಕುಟ್ಟಪ್ಪ ಅವರು ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಆಗಿದ್ದಾರೆ ಎಂದು ಘೋಷಣೆ ಮಾಡಿದರು.
ಇದೇ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ನೆಲ್ಲಿರ ಚಲನ್, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಸುಜಾ ಕುಶಾಲಪ್ಪ, ರಾಜ್ಯ ಶಿಸ್ತು ಸಮಿತಿ ಅಧ್ಯಕ್ಷೆ ಪಟ್ಟಡ ರೀನಾಪ್ರಕಾಶ್, ಅಕ್ರಮ ಸಕ್ರಮ ಅಧ್ಯಕ್ಷ ಕಾಡ್ಯಮಾಡ ಗೀರಿಶ್ ಗಣಪತಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘು ನಾಣಯ್ಯ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಟಿ.ಆರ್ ಸುಶ್ಮಿತಾ, ಸ್ಥಾಯಿ ಸಮಿತಿ ಅಧ್ಯಕ್ಷೆ ಸುನೀತಾ ಜೂನಾ ಮತ್ತಿತರರು ಉಪಸ್ಥಿತರಿದ್ದರು.