ಮಡಿಕೇರಿ, ಅ.೨೯ : ಮೈಸೂರು ಕ್ಯಾಥಲಿಕ್ ಧರ್ಮಕ್ಷೇತ್ರ, ಬೆಂಗಳೂರು ಮಹಾಧರ್ಮಕ್ಷೇತ್ರ ಹಾಗೂ ಕಾರಿತಾಸ್ ಇಂಡಿಯಾ ಸಹಯೋಗದೊಂದಿಗೆ ೨೦೧೮-೧೯ರ ಮಳೆಹಾನಿ ಸಂತ್ರಸ್ತರಿಗೆ ಪ್ರವಾಹ ಪುನರ್ವಸತಿ ಯೋಜನೆ ಯಡಿ “ಕೊಡಗಿಗೆ ನಮ್ಮ ಕೊಡುಗೆ” ಕಾರ್ಯಕ್ರಮದಲ್ಲಿ ಹಟ್ಟಿಹೊಳೆಯಲ್ಲಿ ನಿರ್ಮಿಸಲಾದ ೧೨ ನೂತನ ಮನೆಗಳನ್ನು ಹಸ್ತಾಂತರಿಸಲಾಯಿತು.

ಹಟ್ಟಿಹೊಳೆಯ ನಿರ್ಮಲ ಭವನ ಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂತ್ರಸ್ತರನ್ನು ಆಶೀರ್ವದಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬೆಂಗಳೂರಿನ ಮಹಾಧರ್ಮ ಕ್ಷೇತ್ರದ ಮಹಾಧರ್ಮಾಧ್ಯಕ್ಷ ಡಾ.ಪೀಟರ್ ಮಚಾಡೋ, ಜಾತಿ ಬೇಧವಿಲ್ಲದೆ ಎಲ್ಲರೂ ಒಗ್ಗೂಡಿ ಸಂಕಷ್ಟದಲ್ಲಿ ರುವವರಿಗೆ ಸ್ಪಂದಿಸುವAತಾಗಬೇಕು ಎಂದರು.

ಇಂದು ಕಷ್ಟದಲ್ಲಿರುವವರಿಗೆ ನಾವು ಸ್ಪಂದಿಸಿದಾಗ ಮುಂದಿನ ದಿನಗಳಲ್ಲಿ ನಮಗೆ ಇತರರಿಂದ ಸ್ಪಂದನ ದೊರೆಯುತ್ತದೆ ಎಂದು ಅಭಿಪ್ರಾಯಪಟ್ಟ ಅವರು, ಜನಸಾಮಾನ್ಯರಿಗೆ ತೊಂದರೆ ಉಂಟಾದ ಸಂದರ್ಭದಲ್ಲಿ ವಿವಿಧ ಸಂಘ ಸಂಸ್ಥೆಗಳ ಜೊತೆಗೆ ಸರ್ಕಾರದ ಪೋತ್ಸಾಹವೂ ಅಗತ್ಯ ಎಂದರು.

(ಮೊದಲ ಪುಟದಿಂದ) ವೀರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳು, “ನೆಲೆ” ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಉಳ್ಳವರು ಇಲ್ಲದವರಿಗೆ ಸಂಪತ್ತನ್ನು ಹಂಚುವ ಕೆಲಸ ಮಾಡಿದಾಗ ಆತ್ಮಕ್ಕೆ ತೃಪ್ತಿ ಸಿಗುತ್ತದೆ. ಪ್ರಕೃತಿಯನ್ನು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ, ಅಂತರAಗವನ್ನು ಶುದ್ಧಿಪಡಿಸಿಕೊಂಡು ಇಡೀ ಜಗತ್ತನ್ನೆ ಪ್ರೇಮಿಸಿದಲ್ಲಿ ಪರಿಶುದ್ಧವಾಗಿರಲು ಸಾಧ್ಯ. ಆ ನಿಟ್ಟಿನಲ್ಲಿ ಪ್ರತಿಯೊಬ್ಬರು ಸಮಾಜದಿಂದ ಪಡೆದದ್ದನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡುವಂತಾಗಬೇಕು, ಆಗ ಸಂತೋಷದ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯೆ ಶಾಂತೆಯAಡ ವೀಣಾ ಅಚ್ಚಯ್ಯ ಮಾತನಾಡಿ, ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಲವು ಮಂದಿ ಸಂತ್ರಸ್ತರಾಗಿದ್ದು, ಸರ್ಕಾರ ಇಂತಹ ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಿದೆ. ಅಲ್ಲದೇ ಹಲವು ಸಂಘ ಸಂಸ್ಥೆಗಳು ಸಂತ್ರಸ್ತರ ನೆರವಿಗೆ ಬಂದಿದೆ. ಸಂತ್ರಸ್ತರು ತಮಗೆ ದೊರೆತ ಮನೆಗಳಲ್ಲೇ ವಾಸಿಸುವಂತೆ ಸಲಹೆ ನೀಡಿದರು.

ಮೈಸೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಡಾ.ಕೆ.ಎ.ವಿಲಿಯಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ೨೦೧೮-೧೯ರಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಹಲವು ಸಾವು-ನೋವುಗಳು ಸಂಭವಿಸಿದೆ. ಪ್ರಕೃತಿ ಮುನಿದರೆ ಏನಾಗುತ್ತದೆ ಎನ್ನುವ ಉದಾಹರಣೆ ನಮ್ಮ ಮುಂದಿದ್ದು, ಪ್ರಕೃತಿ ರಕ್ಷಣೆಯೊಂದಿಗೆ ಸಹಕಾರ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದರು.

ಪ್ರಕೃತಿಗೆ ಹಾನಿ ಮಾಡದೆ ನಮಗೆ ಬೇಕಾದಷ್ಟನ್ನು ಮಾತ್ರ ಪಡೆದು ಸಮಾಜಕ್ಕೆ ಮರಳಿ ನೀಡಬೇಕೆಂದು ಕರೆ ನೀಡಿದರು. ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಮೈಸೂರು ಕ್ಯಾಥಲಿಕ್ ಧರ್ಮಕ್ಷೇತ್ರ ದಾನಿಗಳ ಸಹಕಾರದಿಂದ ನಿಧಿ ಸಂಗ್ರಹಿಸಿದ ಸಂದರ್ಭ ಹಲವು ಆರೋಪಗಳು ಕೇಳಿ ಬಂದಿತ್ತು. ಆದರೆ ಇದೀಗ ಅವುಗಳನ್ನು ಮೀರಿ ಹಟ್ಟಿಕೊಳೆಯಲ್ಲಿ ೧೨ ಸಂತ್ರಸ್ತರಿಗೆ ಮನೆಗಳನ್ನು ಹಸ್ತಾಂತರಿಸಲಾಗಿದೆ ಎಂದರು.

ಫಲಾನುಭವಿಗಳು ತಮಗೆ ನೀಡಿದ ಮನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆಗ ಮಾತ್ರ ದಾನಿಗಳ ಕೊಡುಗೆಗೆ ಸಾರ್ಥಕತೆ ದೊರಕುತ್ತದೆ ಎಂದರು. ಸಭಾ ಕಾರ್ಯಕ್ರಮಕ್ಕೂ ಮೊದಲು ಧರ್ಮಗುರುಗಳು ಬಲಿಪೂಜೆ ಮಾಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಮೈಸೂರು ಧರ್ಮಕ್ಷೇತ್ರದ ವಿಶ್ರಾಂತ ಧರ್ಮಾಧ್ಯಕ್ಷ ಥಾಮಸ್ ಆಂಟನಿ ವಾಜûಪಿಳ್ಳಿ, ಮೈಸೂರು ಧರ್ಮಕ್ಷೇತ್ರ ಸಿಆರ್‌ಐ ಡಾಮಿನಿಕ್ ವಾe಼ï, ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಕೆ.ಸಿ. ಶೀಲ, ವೀರಾಜಪೇಟೆ ವಲಯ ಶ್ರೇಷ್ಠ ಗುರು ರೆ.ಫಾ. ಮದಲೈಮುತ್ತು, ಮಡಿಕೇರಿ ವಲಯ ಶ್ರೇಷ್ಠ ಗುರು ರೆ.ಫಾ. ದೀಪಕ್, ಮೈಸೂರು ಒಡಿಪಿ ನಿರ್ದೇಶಕ ರೆ.ಫಾ. ಅಲೆಕ್ಸ್ ಪ್ರಶಾಂತ್ ಸಿಕ್ವೇರಾ, ಬೆಂಗಳೂರು ಬಿಎಂಎಸ್‌ಎಸ್ ನಿರ್ದೇಶಕ ರೆ.ಫಾ. ಸಂತೋಷ್, ಹಟ್ಟಿಹೊಳೆ ಜಪಮಾಲೆ ಮಾತೆ ದೇವಾಲಯ ಧರ್ಮಗುರು ರೆ.ಫಾ. ಆಲ್ಪರ್ಡ್ ಜಾನ್ ಮೆಂಡೋನ್ಸಾ, ದಾನಿಗಳು ಮತ್ತಿತರರು ಹಾಜರಿದ್ದರು.