ಮಡಿಕೇರಿ, ಅ.೨೯: ರೈತರು ಹಾಗೂ ಬೆಳೆಗಾರರು ಕೃಷಿ ಚಟುವಟಿಕೆಗಳಿಗೆ ಬಳಸುವ ಹತ್ತು ಹೆಚ್‌ಪಿ ಸಾಮರ್ಥ್ಯದೊಳಗಿನ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವದು ಹಾಗೂ ಕಾವೇರಿ ಸೇರಿದಂತೆ ಜಿಲ್ಲೆಯಲ್ಲಿರುವ ಎಲ್ಲ ನದಿದಂಡೆಗಳನ್ನು ಸಂರಕ್ಷಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಇಂದು ನಡೆದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಜಿಲ್ಲಾ ಪಂಚಾಯ್ತಿ ಸಭಾಂಗಣ ದಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿದ್ಯುತ್ ಇಲಾಖೆ ಪ್ರಗತಿ ಬಗ್ಗೆ ಪರಿಶೀಲನೆ ಮಾಡುತ್ತಿದ್ದ ಸಂದರ್ಭ ವಿಷಯ ಪ್ರಸ್ತಾಪಿಸಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು; ಬೆಳೆಗಾರರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಕಲ್ಪಿಸುವ ಬಗ್ಗೆ ಸರಕಾರಕ್ಕೆ ಮನವಿ ಸಲ್ಲಿಕೆಯಾಗಿದೆಯೇ, ಜಿಲ್ಲೆಯಲ್ಲಿ ಎಷ್ಟು ಪಂಪ್‌ಸೆಟ್‌ಗಳಿಗೆ ಸಂಪರ್ಕಗಳಿವೆ, ಎಷ್ಟು ಬಿಲ್ ಬಾಕಿ ಇದೆ ಎಂದು ಪ್ರಶ್ನಿಸಿದರು. ಉತ್ತರಿಸಿದ ಅಧಿಕಾರಿ ಇಲಾಖೆಯ ಮೇಲಧಿ ಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ, ಜಿಲ್ಲೆಯಲ್ಲಿ ಒಟ್ಟು ೪೪೦೦ ಸಂಪರ್ಕ ಗಳಿದ್ದು, ೩ರಿಂದ ೪ಸಾವಿರದಷ್ಟು ಬಿಲ್ ಬರುತ್ತದೆ. ಒಟ್ಟು ರೂ.೧೫ಕೋಟಿ ಬಿಲ್ ಪಾವತಿಗೆ ಬಾಕಿ ಇರುವದಾಗಿ ತಿಳಿಸಿದರು.

ಈ ಸಂದರ್ಭ ಮಾತನಾಡಿದ ಸಂಸದ ಪ್ರತಾಪ್ ಸಿಂಹ ಈ ಬಗ್ಗೆ ವಿದ್ಯುತ್ ನಿಗಮದ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಮಾತುಕತೆ ನಡೆಸಿದ್ದು, ಸಭೆ ನಡೆಸುವದಾಗಿ ಹೇಳಿದ್ದಾರೆ. ಈ ತಿಂಗಳ ಬಿಲ್ ತೆಗೆಸಿ ವರ್ಷಕ್ಕೆ ಸರಾಸರಿ ಎಷ್ಟು ಬಿಲ್ ಬರುತ್ತದೆ ಎಂಬ ಮಾಹಿತಿ ಕೊಡಿ, ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಮಾಡೋಣ, ಮೈಸೂರು ದಸಾರಾಗೆ ವಿದ್ಯುತ್ ಅಲಂಕಾರಕ್ಕೆ ೭ ಕೋಟಿ ಖರ್ಚು ಮಾಡಿರುವಾಗ ಸಂಕಷ್ಟದಲ್ಲಿರುವ ಬೆಳೆಗಾರರ ೧೫ ಕೋಟಿ ಬಿಲ್ ಪಾವತಿ ಮಾಡಿದರೆ ತೊಂದರೆ ಏನೂ ಇಲ್ಲ. ಮಾಹಿತಿ ಯೊಂದಿಗೆ

(ಮೊದಲ ಪುಟದಿಂದ) ಸಭೆಗೆ ಬನ್ನಿ, ತೀರ್ಮಾನ ಮಾಡೋಣವೆಂದು ಸೆಸ್ಕ್ ಅಧಿಕಾರಿಗೆ ಸೂಚಿಸಿದರು.

ಸೌಭಾಗ್ಯ ಯೋಜನೆಯಡಿ ಕೆಲವೊಂದು ಕಾಮಗಾರಿ ಅರಣ್ಯ ಇಲಾಖೆಯ ತಡೆಯಿಂದಾಗಿ ವಿಳಂಬವಾಗಿರುವ ಬಗ್ಗೆ ಅಧಿಕಾರಿ ಮಾಹಿತಿ ನೀಡಿದಾಗ ಮಧ್ಯ ಪ್ರವೇಶಿಸಿದ ಕರ್ನಾಟಕ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಶಾಂತೆಯAಡ ರವಿ ಕುಶಾಲಪ್ಪ ಅವರು; ನಾಪೋಕ್ಲು ಬಳಿಯ ಮಂಙÁಟ್ ಕಾಲೋನಿಗೆ ಇನ್ನೂ ಕೂಡ ಸಂಪರ್ಕ ಒದಗಿಸಿಲ್ಲ, ಅಲ್ಲಿ ಅರಣ್ಯ ಇಲಾಖೆಯಿಂದ ಯಾವದೇ ತಕರಾರಿಲ್ಲ, ಈ ಬಗ್ಗೆ ಸಾಕಷ್ಟು ಬಾರಿ ಗಮನಕ್ಕೆ ತಂದರೂ ಅಧಿಕಾರಿಗಳಿಗೆ ಕೆಲಸ ಮಾಡುವ ಇಚ್ಛಾಶಕ್ತಿಯಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಶಾಸಕ ರಂಜನ್ ಅವರು; ಈ ಸಂಬAಧ ಲೋಕೋಪಯೊಗಿ ಇಲಾಖೆ, ವಿದ್ಯುತ್, ಅರಣ್ಯ ಇಲಾಖಾಧಿಕಾರಿಗಳ ಜಂಟಿ ಸಭೆ ಕರೆದು ತೀರ್ಮಾನ ಕೈಗೊಳ್ಳುವಂತೆ ಸಲಹೆ ಮಾಡಿದರು. ದೀಪಾವಳಿ ಹಬ್ಬ ಕಳೆದ ಬಳಿಕ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವಂತೆ ಸಂಸದರು ಹೇಳಿದರು.

ನದಿ ದಡ ಸಂರಕ್ಷಣೆ

ಕಾವೇರಿ ನದಿ ಸೇರಿದಂತೆ ಜಿಲ್ಲೆಯಾದ್ಯಂತ ಹರಿಯುವ ನದಿ ಪಾತ್ರಗಳ ಅತಿಕ್ರಮಣವಾಗುತ್ತಿದೆ. ನದಿಗಳ ಇಕ್ಕೆಲಗಳಲ್ಲಿ ಜಾಗ ಇಲ್ಲವಾಗಿದೆ. ಹೊಳೆ ಬದಿಯ ಜಾಗ ಸರ್ವೆ ಮಾಡಿ ಪೈಸಾರಿ ಅಥವಾ ಅರಣ್ಯವೆಂದು ಗುರುತಿಸಬೇಕಾಗಿದೆ. ನದಿಗಳಿಗೆ ಕಲುಷಿತ ನೀರು ಹರಿಸುವುದನ್ನು ತಡೆಗಟ್ಟಬೇಕಿದೆ, ಇದು ಜಿಲ್ಲೆಯ ಅಳಿವು, ಉಳಿವಿನ ಪ್ರಶ್ನೆಯಾಗಿದ್ದು, ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕಾಗಿದೆ ಎಂದು ಪಶ್ಚಿಮ ಘಟ್ಟ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ರವಿಕುಶಾಲಪ್ಪ ಸಭೆಯ ಗಮನ ಸೆಳೆದರು.

ದನಿಗೂಡಿಸಿದ ಶಾಸಕ ರಂಜನ್ ಅವರು; ಈ ನಿಟ್ಟಿನಲ್ಲಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತುಕೊಳ್ಳಬಾರದು, ತಾ.ಪಂ. ಕಾರ್ಯನಿರ್ವಹಣಾಧಿಕಾರಿಗಳು ಕೂಡ ನಿಗಾ ವಹಿಸುತ್ತಿರಬೇಕು. ನದಿ ಪಾತ್ರದಲ್ಲಿ ಮನೆ, ಕಟ್ಟಡ ನಿರ್ಮಿಸಿದ್ದರೆ ಅಂತಹ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿಗಳಿಗೆ ನೋಟೀಸ್ ಜಾರಿ ಮಾಡಿ, ನದಿ ಪಾತ್ರದಿಂದ ೧೦೦ಮೀ. ಅಂತರದಲ್ಲಿ ಯಾವುದೇ ಚಟುವಟಿಕೆ ನಡೆಸಬಾರದೆಂದಿದೆ. ವರ್ಷಂಪ್ರತಿ ನದಿ ದಡದಲ್ಲಿ ನೆಲೆಸಿರುವವರಿಗೆ ಪರಿಹಾರ ಕೊಡೋದೇ ರಾಮಾಯಣವಾಗಿದೆ ಎಂದು ಹೇಳಿದರು. ಅಭ್ಯತ್‌ಮಂಗಲದಲ್ಲಿ ಗುರುತಿಸಲಾಗಿರುವ ಜಾಗವನ್ನು ಸ್ವಾಧೀನಕ್ಕೆ ತೆಗೆದುಕೊಂಡು ಪುನರ್‌ವಸತಿಗೆ ಕ್ರಮ ಕೈಗೊಳ್ಳಬೇಕು. ನೆಲ್ಯಹುದಿಕೇರಿಯಲ್ಲಿ ಸುಮಾರು ೨೪೦ಎಕರೆ ಪೈಸಾರಿ ಜಾಗ ಒತ್ತುವರಿಯಾಗಿದ್ದು, ದೊಡ್ಡ ಬೆಳೆಗಾರರು ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಿ ಬಡವರಿಗೆ ನೀಡುವಂತೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನದಿಪಾತ್ರದಲ್ಲಿ ಮನೆ, ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡದಂತೆ ಗಮನಹರಿಸುವ ನಿಟ್ಟಿನಲ್ಲಿ ತಾ.ಪಂ. ಇಒ, ಗ್ರಾ.ಪಂ. ಪಿಡಿಒಗಳಿಗೆ ಸೂಚನೆ ನೀಡಬೇಕೆಂದು ಜಿ.ಪಂ. ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಿದರು. ನದಿ ದಡದಲ್ಲಿರುವವರಿಗೆ ವರ್ಷ ವರ್ಷ ಪರಿಹಾರ ನೀಡುವಂತಾಗಬಾರದು. ಮನೆ ಕಳೆದುಕೊಂಡವರಿಗೆÀ ಮನೆ ನೀಡಲಾಗಿದ್ದು, ಅವರುಗಳು ಅಲ್ಲಿಯೇ ವಾಸವಿರುವಂತೆ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.

ಕಾವೇರಿ ಹುಟ್ಟಿ ಹರಿಯುವ ಭಾಗಮಂಡಲದಿAದ ಹಿಡಿದು ಕೊಪ್ಪ ಗಡಿಭಾಗದವರೆಗೆ ನದಿ ಪಾತ್ರದ ಜಾಗ ಗುರುತಿಸಿ ಸಿಮೆಂಟ್ ಕಂಬಗಳನ್ನು ನೆಟ್ಟು ಜಾಗ ಗುರುತು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು. ಈ ಸಂಬAಧ ಕಾವೇರಿ ನೀರಾವರಿ ನಿಗಮದಿಂದ ಅನುದಾನ ಒದಗಿಸುವ ಭರವಸೆ ನೀಡಿದರು.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೆರೆಗಳ ಅಭಿವೃದ್ಧಿ, ಕೃಷಿ, ತೋಟಗಾರಿಕೆ ಅಭಿವೃದ್ಧಿ, ಕೃಷಿ ಹೊಂಡ ನಿರ್ಮಾಣ, ಹೀಗೆ ಹಲವು ಕಾರ್ಯಕ್ರಮಗಳನ್ನು ಕೈಗೊಳ್ಳಬಹುದಾಗಿದೆ. ಆ ನಿಟ್ಟಿನಲ್ಲಿ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಪ್ರತಾಪ್ ಸಿಂಹ ಸೂಚಿಸಿದರು.

ರಸಗೊಬ್ಬರ ಪೂರೈಕೆ ಸಂಬAಧಿಸಿದAತೆ ಮಾಹಿತಿ ಪಡೆದ ಸಂಸದರು ಜಿಲ್ಲೆಗೆ ಬೇಡಿಕೆ ಇರುವ ರಸಗೊಬ್ಬರ ಸಂಬAಧ ಅಗತ್ಯ ಮಾಹಿತಿ ಒದಗಿಸುವಂತೆ ಸೂಚಿಸಿದರು.

ಈ ಬಗ್ಗೆ ಮಾತನಾಡಿದ ಶಾಸಕ ಅಪ್ಪಚ್ಚುರಂಜನ್ ಅವರು ಸಹಕಾರ ಸಂಘಗಳಲ್ಲಿ ರಸಗೊಬ್ಬರವನ್ನು ಮತ್ತಷ್ಟು ದಾಸ್ತಾನು ಮಾಡಿಕೊಳ್ಳಬೇಕು. ಜಿಲ್ಲೆಗೆ ಬೇಕಿರುವ ರಸಗೊಬ್ಬರವನ್ನು ಪೂರೈಸಿಕೊಳ್ಳುವಂತೆ ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಸೂಚಿಸಿದರು.

ಪ್ರಾಂಶುಪಾಲರಿಗೆ ನೋಟೀಸ್

ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮವನ್ನು ಚುರುಕುಗೊಳಿಸಬೇಕು. ಎರಡನೇ ಹಂತದ ಲಸಿಕೆ ಪಡೆಯುವಂತಾಗಲು ವಿಶೇಷ ಲಸಿಕಾ ಮೇಳವನ್ನು ಆಯೋಜಿಸುವಂತೆ ಸಂಸದರು ಸಲಹೆ ಮಾಡಿದರು.

ನವೋದಯ ಶಾಲೆಯಲ್ಲಿ ಕೆಲವು ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿರುವ ಹಿನ್ನೆಲೆ ನವೋದಯ ಶಾಲೆಯ ವಿದ್ಯಾರ್ಥಿಗಳು, ಸಿಬ್ಬಂದಿಯವರು, ಅಡುಗೆಯವರು ಹೀಗೆ ಎಲ್ಲರಿಗೂ ಆರ್‌ಟಿಪಿಸಿಆರ್ ಪರೀಕ್ಷೆ ಮಾಡಿ ನೆಗೆಟಿವ್ ವರದಿ ಪಡೆದಿರಲಿಲ್ಲವೇ ಎಂದು ಪ್ರಶ್ನಿಸಿದರು.

ಕೋವಿಡ್-೧೯ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡದಿರುವ ಹಿನ್ನೆಲೆ ನವೋದಯ ಶಾಲೆಯ ಪ್ರಾಂಶುಪಾಲರಿಗೆ ನೋಟೀಸು ನೀಡುವಂತೆ ಶಾಸಕರು ಸೂಚಿಸಿದರು. ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನವೋದಯ ಶಾಲೆಗೆ ಭೇಟಿ ನೀಡಿ ಪರಿಶೀಲಿಸಲಾಗಿದೆ ಎಂದರು. ಈಗಾಗಲೇ ೧ನೇ ತರಗತಿಯಿಂದ ಶಾಲೆಗಳು ಆರಂಭವಾಗಿರುವುದರಿAದ ಮಕ್ಕಳ ಹಾಜರಾತಿ ಪ್ರಮಾಣದ ಬಗ್ಗೆ ಪ್ರತಿ ವಾರ ಮಾಹಿತಿ ನೀಡಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಕ್ರಮವಹಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಸಂಸದರು ನಿರ್ದೇಶನ ನೀಡಿದರು.

ಆಹಾರ ಪೂರೈಕೆಗೆ ಕ್ರಮ

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಪಡಿತರ ಪೂರೈಸುವಂತೆ ಸಂಸದರು ಸೂಚಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮುಕ್ಕೋಡ್ಲು, ಹಮ್ಮಿಯಾಲ, ಮುಟ್ಲು, ಗರ್ವಾಲೆ, ಸೂರ್ಲಬ್ಬಿ ಮತ್ತಿತರ ಕುಗ್ರಾಮಗಳಿಗೆ ಪಡಿತರ ಪೂರೈಕೆಯಾಗುತ್ತಿಲ್ಲ. ಪಡಿತರ ಪೂರೈಕೆಯಾಗದೆ ಅಲ್ಲಿನ ಜನರು ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಪ್ರತೀ ತಿಂಗಳು ಕಾಲ ಮಿತಿಯೊಳಗೆ ಪಡಿತರ ಪೂರೈಸುವಂತೆ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕರಿಗೆ ಸೂಚಿಸಿದರು.

ನ್ಯಾಯಬೆಲೆ ಅಂಗಡಿಗಳು ಇಲ್ಲ, ಅಂತರ್ಜಾಲ ಸಂಪರ್ಕವೂ ಇಲ್ಲ, ಸಂಚಾರಿ ಮೂಲಕವೂ ಆಹಾರ ಪೂರೈಕೆ ಆಗುತ್ತಿಲ್ಲ, ಹೀಗಾಗಿ ಅಲ್ಲಿನ ಜನರ ಬವಣೆ ಹೇಳತೀರದು ಎಂದು ಶಾಸಕರು ಸಿಟ್ಟಾದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಮಾತೃವಂದನಾ ಕಾರ್ಯಕ್ರಮವನ್ನು ಸಮರ್ಪಕವಾಗಿ ಕಲ್ಪಿಸಬೇಕು. ಜಿಲ್ಲೆಗೆ ಹೊಸ ಅಂಗನವಾಡಿಗಳು ಅಗತ್ಯವಿದ್ದಲ್ಲಿ ಅಂಗನವಾಡಿಗಳನ್ನು ಆರಂಭಿಸಲು ಅಗತ್ಯ ಕ್ರಮವಹಿಸುವಂತೆ ಸಂಸದರು ಸೂಚಿಸಿದರು. ಸಮಿತಿಯ ನಾಮ ನಿರ್ದೇಶಿತ ಸದಸೆÀ್ಯ ವಿಜಯ ಅವರು ಜಿಲ್ಲೆಯ ಆದಿವಾಸಿ ಗಿರಿಜನ ಕುಟುಂಬಗಳಿಗೆ ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಸಬೇಕು ಎಂದು ಗಮನಸೆಳೆದರು. ಸದಸ್ಯರಾದ ಯಮುನಾ ಚಂಗಪ್ಪ ಅವರು ಜಿಲ್ಲೆಯಲ್ಲಿ ಕಾಡಾನೆ ಹಾವಳಿ ವಿಪರೀತವಾಗಿದ್ದು, ಇದನ್ನು ನಿಯಂತ್ರಿಸಲು ಕ್ರಮವಹಿಸಬೇಕು ಎಂದು ಹೇಳಿದರು.

‘ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಉಪ ಕೇಂದ್ರ ಆರಂಭ ಸಂಬAಧ ಪ್ರತ್ಯೇಕ ಕೊಠಡಿ ಒದಗಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ಪ್ರತಾಪ್ ಸಿಂಹ ಸೂಚಿಸಿದರು. ಕಾಲೇಜಿಗೆ ನೇರವಾಗಿ ಹೋಗಲು ಸಾಧ್ಯ ಇಲ್ಲದವರು ಮುಕ್ತ ವಿಶ್ವವಿದ್ಯಾನಿಲಯದ ಮೂಲಕ ಪದವಿ, ಸ್ನಾತಕೋತ್ತರ ಪದವಿ ಪಡೆಯಲು ಅನುಕೂಲವಾಗಲಿದೆ ಎಂದು ಹೇಳಿದರು.

ಜಿ.ಪಂ.ಯೋಜನಾ ನಿರ್ದೇಶಕ ಶ್ರೀಕಂಠಮೂರ್ತಿ, ಜಿ.ಪಂ.ಉಪ ಕಾರ್ಯದರ್ಶಿ ಪಿ.ಲಕ್ಷಿö್ಮ, ಮುಖ್ಯ ಯೋಜನಾಧಿಕಾರಿ ರಾಜ ಗೋಪಾಲ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ವೆಂಕಟೇಶ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಕಾರ್ಯಪ್ಪ, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಶಬಾನಾ ಎಂ.ಶೇಖ್, ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕರಾದ ಗೌರವ್ ಕುಮಾರ್ ಶೆಟ್ಟಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್, ತಾ.ಪಂ.ಇಒಗಳಾದ ಶೇಖರ್, ಅಪ್ಪಣ್ಣ, ಜಯಣ್ಣ, ಪೌರಾಯುಕ್ತ ರಾಮದಾಸ್, ಐಟಿಡಿಪಿ ಇಲಾಖೆ ಅಧಿಕಾರಿ ಶ್ರೀನಿವಾಸ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಮುದ್ದಣ್ಣ, ಡಿವೈಎಸ್‌ಪಿ ಶೈಲೇಂದ್ರ ಕುಮಾರ್ ಇತರರು ತಮ್ಮ ಇಲಾಖೆಗೆ ಸಂಬAಧಿಸಿದAತೆ ಹಲವು ಮಾಹಿತಿ ನೀಡಿದರು. ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಭಂವರ್‌ಸಿAಗ್ ಮೀನಾ ಇದ್ದರು.