ಮಡಿಕೇರಿ, ಅ. ೨೯: ಮಂಗಳೂರು ವಿಶ್ವವಿದ್ಯಾನಿಲಯದ ವತಿಯಿಂದ ಕೊಡಗಿನ ಚಿಕ್ಕಅಳುವಾರದಲ್ಲಿರುವ ಜ್ಞಾನ ಕಾವೇರಿ ಕ್ಯಾಂಪಸ್‌ನಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಐದು ವರ್ಷಗಳ ಸಮಗ್ರ ಕಾನೂನು ಅಧ್ಯಯನ ಪದವಿ ಶಿಕ್ಷಣವನ್ನು ಪ್ರಾರಂಭಿಸಲು ಚಿಂತನೆ ನಡೆದಿದೆ.
ಇದಕ್ಕೆ ಈಗಾಗಲೇ ವಿ.ವಿ.ಯ ಸಿಂಡಿಕೇಟ್‌ನಲ್ಲಿ ಅನುಮೋದನೆ ಯಾಗಿದ್ದು, ಸರಕಾರದ ಅನುಮತಿ ಹಾಗೂ ಮತ್ತಿತರ ಪೂರ್ವ ಸಿದ್ಧತೆಗಳ ಕುರಿತಾಗಿ ಪ್ರಯತ್ನ ನಡೆಯುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಸ್. ಯಡಪಡಿತ್ತಾಯ ಅವರು ಮಾಹಿತಿ ನೀಡಿದ್ದಾರೆ.
‘ಶಕ್ತಿ’ಯೊಂದಿಗೆ ಮಾತನಾಡಿದ ಅವರು ಜ್ಞಾನಕಾವೇರಿಯಲ್ಲಿ ಐದು ವರ್ಷಗಳ ಸಮಗ್ರÀ ಕಾನೂನು ಸ್ನಾತಕೋತ್ತರ ಕೋರ್ಸ್ (ಎಲ್.ಎಲ್.ಎಮ್) ಪ್ರಾರಂಭಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಬಾರ್ ಕೌನ್ಸಿಲ್ ತಾತ್ವಿಕ ಒಪ್ಪಿಗೆಯೂ ದೊರೆತಿದೆ. ಮುಂದಿನ ಜನವರಿಯಿಂದ ಇದನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸರಕಾರದ ಅನುಮತಿ ಸದ್ಯದಲ್ಲಿ ಸಿಗುವ ವಿಶ್ವಾಸವಿದೆ. ಬಹುತೇಕ
(ಮೊದಲ ಪುಟದಿಂದ) ಮುಂದಿನ ಶೈಕ್ಷಣಿಕ ವರ್ಷವಾದ ೨೦೨೨ - ೨೩ನೇ ಸಾಲಿನಿಂದ ಈ ಶಿಕ್ಷಣ ಇಲ್ಲಿ ಪ್ರಾರಂಭವಾಗಲಿದೆ. ಕೊಡಗಿನಲ್ಲಿ ಎಲ್ಲಿಯೂ ಕಾನೂನು ಪದವಿ ಶಿಕ್ಷಣ ಪ್ರಸ್ತುತ ಇಲ್ಲದಿರು ವದರಿಂದ ವಿಶ್ವವಿದ್ಯಾನಿಲಯ ಈ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದರು.
ಪಿಯುಸಿ ನಂತರದಿAದ ಈ ಶಿಕ್ಷಣ ಪ್ರಾರಂಭವಾಗಲಿದೆ ಐದು ವರ್ಷಗಳ ಕೋರ್ಸ್ ಇದಾಗಿದ್ದು, ಆರಂಭಿಕವಾಗಿ ೩೦ ವಿದ್ಯಾರ್ಥಿಗಳ ಮೂಲಕ ಇದಕ್ಕೆ ಚಾಲನೆ ನೀಡಲಾಗುವುದು. ಈಗಾಗಲೇ ಇದರ ಪೂರ್ವ ಸಿದ್ಧತೆಗಳು ಕೂಡ ಪ್ರಗತಿಯಲ್ಲಿವೆ ಎಂದು ಅವರು ವಿವರವಿತ್ತರು. ಪ್ರಸ್ತುತ ಜ್ಞಾನ ಕಾವೇರಿಯಲ್ಲಿ ಐದಾರು ಸ್ನಾತಕೋತ್ತರ ಪದವಿಗಳಿದ್ದು, ಇವುಗಳೊಂದಿಗೆ ಸಮಗ್ರ ಕಾನೂನು ಅಧ್ಯಯನವೂ (ಎಲ್‌ಎಲ್‌ಎಮ್) ಪ್ರಾರಂಭಗೊಳ್ಳಲಿದ್ದು, ಕೊಡಗಿನ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ರಾಷ್ಟಿçÃಯ ಶಿಕ್ಷಣ ನೀತಿ ಅನುಷ್ಠಾನ ಸಂಬAಧ ಈಗಾಗಲೇ ಎಲ್ಲಾ ವ್ಯವಸ್ಥೆ ನಡೆದಿದೆ. ನವೆಂಬರ್ ೮ ರಿಂದ ಇದು ಎಲ್ಲಾ ವಿಭಾಗದ ಪ್ರಥಮ ವರ್ಷದ ಶಿಕ್ಷಣದೊಂದಿಗೆ ಅಳವಡಿಕೆಯಾಗಲಿದೆ. ವಿ.ವಿ. ಅಧೀನದ ಎಲ್ಲಾ ೨೦೭ ಕಾಲೇಜುಗಳಲ್ಲಿಯೂ ನವೆಂಬರ್ ೮ ರಿಂದ ಎನ್.ಇ.ಪಿ. ಜಾರಿಯಾಗಲಿದೆ ಎಂದು ಅವರು ಮಾಹಿತಿ ನೀಡಿದರು.