ಕೂಡಿಗೆ, ಅ. ೨೭: ಸೀಗೆಹೊಸೂರು ಗ್ರಾಮದ ನವೀನ್ ಎಂಬವರ ಜೋಳದ ಹೊಲದಲ್ಲಿ ಹೆಬ್ಬಾವು ಪತ್ತೆಯಾಗಿದೆ. ೧೩ ಅಡಿ ಉದ್ದ ಮತ್ತು ೨೭ ಕೆ.ಜಿ. ತೂಕದ ಹೆಬ್ಬಾವನ್ನು ಸ್ನೇಕ್ ಗಪೂರ್ ಸಹಕಾರದೊಂದಿಗೆ ನವೀನ್ ಹಾಗೂ ಅನಂತ್ ಕುಮಾರ್ ಹಿಡಿದು ಅರಣ್ಯ ಇಲಾಖೆಗೆ ಒಪ್ಪಿಸಿದರು. ಈ ಸಂದರ್ಭ ಕೂಡಿಗೆ ಗ್ರಾಮ ಪಂಚಾಯಿತಿ ಸದಸ್ಯ ಅನಂತ್ಕುಮಾರ್, ಹೆಬ್ಬಾಲೆ ಉಪ ಅರಣ್ಯ ವಲಯಾಧಿಕಾರಿ ಭರತ್, ಸಹಾಯಕ ಅಧಿಕಾರಿ ಲೋಕೇಶ್, ರಾಜಣ್ಣ ಸೇರಿದಂತೆ ಗ್ರಾಮಸ್ಥರು ಇದ್ದರು. ಹೆಬ್ಬಾವನ್ನು ಸಮೀಪದ ಜೇನುಕಲ್ಲು ಬೆಟ್ಟಕ್ಕೆ ಬಿಡಲಾಯಿತು.