ಮಡಿಕೇರಿ, ಅ. ೨೭: ಕುಂದಚೇರಿ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ಕಟ್ಟಲು ಏಕಪಕ್ಷೀಯವಾಗಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಕುಂದಚೇರಿ ಗ್ರಾಮದ ಹಲವು ಗ್ರಾಮಸ್ಥರು ಆಕ್ರೋಶವ್ಯಕ್ತಪಡಿಸಿದ್ದಾರೆ. ೨೦೧೯-೨೦ರ ಗ್ರಾಮ ಸಭೆಯಲ್ಲಿ ಕಟ್ಟಡ ಕಟ್ಟಲು ಸರಿಯಾದ ದಾಖಲಾತಿಯನ್ನು ಮಾಡದೆ ಕಟ್ಟಡವನ್ನು ಕಟ್ಟಬಾರದೆಂದು ತೀರ್ಮಾನಿಸಲಾಗಿತ್ತು. ಆದರೂ ಅಧ್ಯಕ್ಷರು ಹಾಗೂ ಸದಸ್ಯರುಗಳು ಕಟ್ಟಡವನ್ನು ಕಟ್ಟಲು ತೀರ್ಮಾನವನ್ನು ತೆಗೆದುಕೊಂಡಿರುವುದು ಸರಿಯಲ್ಲ ಎಂದು ಗ್ರಾಮಸ್ಥರ ಪರವಾಗಿ ಕೆದಂಬಾಡಿ ಕೀರ್ತಿಕುಮಾರ್, ಕೆದಂಬಾಡಿ ಎಸ್. ರಘು, ತಾ.ಪಂ. ಸದಸ್ಯ ದಬ್ಬಡ್ಕ ಶ್ರೀಧರ್, ಎಂ.ಎಸ್. ಅಣ್ಣಯ್ಯ, ಕೆ.ಜಿ. ರಘುನಾಥ್ ಹಾಗೂ ಇತರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕಟ್ಟಡಕ್ಕೆ ಸಂಬAಧಪಟ್ಟ ಸರಿಯಾದ ಯಾವುದೇ ದಾಖಲಾತಿಗಳನ್ನು ಮಾಡದೆ ಕಟ್ಟಡ ಕಾಮಗಾರಿಯನ್ನು ಮುಂದುವರೆಸಬಾರದೆAದು ಅವರುಗಳು ಆಗ್ರಹಿಸಿದ್ದಾರೆ.