ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
ಮುAಬೈ, ಅ. ೨೭: ಮುಂಬೈ ತೀರದಲ್ಲಿ ಕ್ರೂಸ್ ಹಡಗಿನಲ್ಲಿ ನಿಷೇಧಿತ ಡ್ರಗ್ಸ್ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬAಧಿಸಿದAತೆ ಬಂಧಿತನಾಗಿರುವ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಜಾಮೀನು ಅರ್ಜಿ ವಿಚಾರಣೆ ಬುಧವಾರ ಬಾಂಬೆ ಹೈಕೋರ್ಟ್ನಲ್ಲಿ ನಡೆದಿದ್ದು, ದೀರ್ಘ ವಿಚಾರಣೆ ಬಳಿಕ ತಾ. ೨೮ಕ್ಕೆ ಮುಂದೂಡಲಾಗಿದೆ. ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಆರ್ಯನ್ ಖಾನ್ ಚಿಕ್ಕ ವಯಸ್ಸಿನ ಹುಡುಗನಾಗಿದ್ದಾನೆ. ಹಾಗಾಗಿ ಅವನನ್ನು ಜೈಲಿಗೆ ಕಳುಹಿಸುವ ಬದಲು ಪುನರ್ವಸತಿ ನಿಲಯಕ್ಕೆ ಕಳುಹಿಸಬೇಕು ಎಂದು ವಾದ ಮಾಡಿದರು. ಅಲ್ಲದೇ ಆರ್ಯನ್ ಖಾನ್ ಬಂಧನಕ್ಕೆ ಸೂಕ್ತ ಕಾರಣ ನೀಡಿಲ್ಲ. ಬಂಧನಕ್ಕೂ ಮುನ್ನ ಸೂಕ್ತ ಕಾರಣ ತಿಳಿಸಬೇಕಿತ್ತು. ಬಂಧನಕ್ಕೆ ಸೂಕ್ತ ಕಾರಣ ನೀಡದೆ ಎನ್‌ಸಿಬಿ ದಾರಿ ತಪ್ಪಿಸಿದೆ ಎಂದು ಮುಕುಲ್ ರೋಹ್ಟಗಿ ವಾದಿಸಿದರು. ಆರೋಪಿಗಳ ಪರವಾಗಿ ಮುಕುಲ್ ರೋಹಟಗಿ, ಅಮಿತ್ ದೇಸಾಯಿ ಮತ್ತು ಅಲಿ ಕಾಶಿಫ್ ಖಾನ್ ದೇಶಮುಖ್ ಅವರು ಮಾಡಿದ ವಾದಗಳಿಗೆ ಗುರುವಾರ ಉತ್ತರಿಸುವುದಾಗಿ ಎನ್‌ಸಿಬಿ ಪರವಾಗಿ ಹಾಜರಾದ ಎಎಸ್‌ಜಿ ಅನಿಲ್ ಸಿಂಗ್ ನ್ಯಾಯಾಲಯಕ್ಕೆ ತಿಳಿಸಿದರು. ನಾನು ನನ್ನ ವಾದಗಳನ್ನು ಒಂದು ಗಂಟೆಯೊಳಗೆ ಮುಗಿಸಲು ಪ್ರಯತ್ನಿಸುತ್ತೇನೆ ಎಂದು ಎಎಸ್‌ಜಿ ಸಿಂಗ್ ಹೇಳಿದರು. ಹೀಗಾಗಿ ಗುರುವಾರ ಮಧ್ಯಾಹ್ನ ೨.೩೦ರ ನಂತರ ವಿಚಾರಣೆ ನಡೆಸಲಾಗುವುದು ಎಂದು ನ್ಯಾಯಮೂರ್ತಿ ನಿತಿನ್ ಸಾಂಬ್ರೆ ಅವರಿದ್ದ ಏಕಸದಸ್ಯ ಪೀಠ ತಿಳಿಸಿದೆ.
ಬಾಬಾ ರಾಮ್‌ದೇವ್‌ಗೆ ದೆಹಲಿ ಹೈಕೋರ್ಟ್ನಿಂದ ಸಮನ್ಸ್
ನವದೆಹಲಿ, ಅ. ೨೭: ಅಲೋಪಥಿ ಬಗ್ಗೆ ಸುಳ್ಳು ಮತ್ತು ಆಧಾರರಹಿತ ಮಾಹಿತಿಯನ್ನು ಹರಡಿದ ಆರೋಪದಡಿ ಯೋಗ ಗುರು ರಾಮ್‌ದೇವ್ ವಿರುದ್ಧ ಭಾರತೀಯ ವೈದ್ಯಕೀಯ ಸಂಘವು ಮೊಕದ್ದಮೆ ಹೂಡಿತ್ತು. ಇದಕ್ಕೆ ಸಂಬAಧಿಸಿದAತೆ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ ಬುಧವಾರ ಸಮನ್ಸ್ ಜಾರಿ ಮಾಡಿದೆ. ಸಂಘದ ಈ ಮನವಿಯೂ ಕ್ಷುಲ್ಲಕವಲ್ಲ, ಇದು ಖಂಡಿತವಾಗಿಯೂ ಪ್ರಕರಣ ದಾಖಲಿಸುವಂತ ವಿಷಯ ಎಂದು ಕೋರ್ಟ್ ಹೇಳಿದೆ. ಈ ಸಮನ್ಸ್ಗೆ ರಾಮ್‌ದೇವ್ ಪ್ರತಿಕ್ರಿಯೆ ನೀಡಲು ನ್ಯಾಯಮೂರ್ತಿ ಸಿ. ಹರಿ ಶಂಕರ್ ಅವರು ನಾಲ್ಕು ವಾರಗಳ ಕಾಲಾವಕಾಶ ನೀಡಿದ್ದಾರೆ. ಅಲ್ಲದೇ ಈ ಪ್ರಕರಣಕ್ಕೆ ಸಂಬAಧಿಸಿದAತೆ ಯಾವುದೇ ಅಭಿಪ್ರಾಯವನ್ನು ವ್ಯಕ್ತಪಡಿಸುವುದಿಲ್ಲ ಮತ್ತು ಯಾವುದೇ ಪರಿಹಾರ, ಮಧ್ಯಂತರ ಅಥವಾ ಇತರವುಗಳನ್ನು ನೀಡುವ ವಿಷಯವನ್ನು ನಂತರ ಪರಿಶೀಲಿಸಲಾಗುವುದು ಎಂದು ನ್ಯಾಯಾಧೀಶರು ಹೇಳಿದ್ದಾರೆ. ನಾನು ರಾಮ್‌ದೇವ್ ವೀಡಿಯೋ ತುಣುಕುಗಳನ್ನು ನೋಡಿದ್ದೇನೆ. ವೀಡಿಯೋ ಕ್ಲಿಪ್‌ಗಳ ಪರಿಶೀಲನೆಯಿಂದ, ನಿಮ್ಮ ಕ್ಲೈಂಟ್ ಅಲೋಪತಿ ಚಿಕಿತ್ಸಾ ಪ್ರೋಟೋಕಾಲ್ ಅನ್ನು ತಿರಸ್ಕರಿಸುತ್ತಿದ್ದಾರೆ. ಅವರಿಗೆ ತಡೆಯಾಜ್ಞೆ ನೀಡಲು ಏನೂ ಇಲ್ಲದಿರಬಹುದು. ಆದರೆ ಪ್ರಕರಣವು ಕ್ಷುಲ್ಲಕವಲ್ಲ ಎಂದು ನ್ಯಾಯಾಧೀಶರು ರಾಮ್‌ದೇವ್ ಪರ ಹಾಜರಾದ ಹಿರಿಯ ವಕೀಲ ರಾಜೀವ್ ನಾಯರ್ ಅವರಿಗೆ ತಿಳಿಸಿದರು.