ಕಣಿವೆ, ಅ. ೨೬: ಗಿರಿಜನರು ಮತಾಂತರವಾಗದAತೆ ಎಚ್ಚರ ವಹಿಸಬೇಕೆಂದು ಸದಸ್ಯರಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಕರೆ ನೀಡಿದರು.
ಸೋಮವಾರ ಬಸವನಹಳ್ಳಿಯ ಗಿರಿಜನ ಸಹಕಾರ ಸಂಘದ ಆವರಣದಲ್ಲಿ ರೂ. ೩೧ ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ೪೦೦ ಟನ್ ಸಂಗ್ರಹಣಾ ಸಾಮರ್ಥ್ಯದ ಗೋದಾಮು ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಸಹಕಾರ ಸಂಘ ಗಿರಿಜನರ ಕಲ್ಯಾಣಕ್ಕೆ ಮುಂದಾಗಬೇಕು. ಸಂಘವನ್ನು ಅಭಿವೃದ್ಧಿಪಡಿಸಿ ಸಂಘದ ಮೂಲಕ ಗಿರಿಜನರನ್ನು ಪ್ರಗತಿಯತ್ತ ಕೊಂಡೊಯ್ಯುವ ಕೆಲಸವಾಗಬೇಕು. ಸಂಕಷ್ಟದಲ್ಲಿರುವ ಗಿರಿಜನರನ್ನು ಮತಾಂತರಕ್ಕೊಳಪಡಿಸುವ ಅಪಾಯವಿದ್ದು, ಈ ಬಗ್ಗೆ ಸಂಘದ ಆಡಳಿತ ಮಂಡಳಿ ಎಚ್ಚರಿಕೆ ವಹಿಸಬೇಕೆಂದು ಕರೆಕೊಟ್ಟ ಶಾಸಕ ರಂಜನ್, ಸಂಘದ ಆವರಣದಲ್ಲಿ ಆಗಿಂದಾಗ್ಯೆ ಗಿರಿಜನರಿಗಾಗಿ ಜಾಗೃತಿ ಕಾರ್ಯಾಗಾರಗಳನ್ನು ನಡೆಸಬೇಕು ಎಂದರು.
(ಮೊದಲ ಪುಟದಿಂದ) ಈ ಸಂದರ್ಭ ಸಂಘದ ಅಧ್ಯಕ್ಷ ಆರ್.ಕೆ. ಚಂದ್ರು ಅಧ್ಯಕ್ಷತೆ ವಹಿಸಿದ್ದರು. ನಿರ್ಮಿತಿ ಕೇಂದ್ರದ ಸಹಾಯಕ ನಿರ್ದೇಶಕ ಸಚಿನ್, ಅಭಿಯಂತರ ರವಿಕುಮಾರ್, ಗಿರಿಜನ ಸಹಕಾರ ಸಂಘದ ಕಾರ್ಯನಿರ್ವಹಣಾಧಿಕಾರಿ ಅನಿಲ್, ವಲಯ ಅರಣ್ಯಾಧಿಕಾರಿ ಅನನ್ಯಕುಮಾರ್ ಹಾಗೂ ಸಂಘದ ನಿರ್ದೇಶಕರಿದ್ದರು.
ಆರ್.ಕೆ.ಚಂದ್ರು ಅಧ್ಯಕ್ಷರಾದ ಬಳಿಕ ಗಿರಿಜನರ ಸಹಕಾರ ಸಂಘ ಬೆಳವಣಿಗೆಯತ್ತ ಸಾಗುತ್ತಿದೆ. ಸಂಘದ ಲಕ್ಷಾಂತರ ರೂಗಳನ್ನು ಗುಳುಂ ಮಾಡಿರುವ ಹಿಂದಿನ ಅಧ್ಯಕ್ಷರಿಂದ ಸಹಕಾರ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿ ಹಣ ವಸೂಲಿ ಮಾಡಬೇಕೆಂದು ಸಭೆಯಲ್ಲಿದ್ದ ಸಹಕಾರ ಸಂಘಗಳ ಉಪ ನಿಬಂಧಕ ಸಲೀಂ ಹಾಗೂ ಸಹಕಾರ ಇಲಾಖೆಯ ಅಧಿಕಾರಿ ಮೋಹನ್ ಅವರಿಗೆ ನಿರ್ದೇಶನ ನೀಡಿದರು.