ಚೆಟ್ಟಳ್ಳಿ, ಅ. ೨೬: ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿAದ, ಡಯಾಲಿಸೀಸ್ ಕೇಂದ್ರ ಹಾಗೂ ರಸ್ತೆ ಬದಿಯಲ್ಲಿ ಅರ್ಧ ಎಕರೆ ಜಾಗ ದೊರೆತರೆ ಪೆಟ್ರೋಲ್ ಬಂಕ್ ಅನ್ನು ಆರಂಭಿಸುವ ಯೋಜನೆಯನ್ನು ಕೈಗೊಳ್ಳಲಾಗಿದೆ ಎಂದು ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಹೇಳಿದರು.
ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಹಾಗೂ ಮಣ್ಣು ಪರೀಕ್ಷಾ ಯಂತ್ರದ ಉದ್ಘಾಟನಾ ಕಾರ್ಯಕ್ರಮ ಅಧ್ಯಕ್ಷತೆ ಯನ್ನು ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸೇರಿರುವ ಜಾಗದ ಪ್ರಕರಣ ಹೈಕೋರ್ಟ್ನಲ್ಲಿದೆ. ಹೈಕೋರ್ಟ್ ತೀರ್ಪು ನಮ್ಮ ಪರವಾಗಲಿದೆ. ಆ ಜಾಗದಲ್ಲಿ ಎಲ್ಲರಿಗೂ ಉಪಯೋಗ ಆಗುವಂತೆ ಡಯಾಲಿಸೀಸ್ ಕೇಂದ್ರವನ್ನು ಆರಂಭಿಸ ಲಾಗುವುದೆಂದು ಅಭಿಪ್ರಾಯಪಟ್ಟರು.
೨೧ ಲಕ್ಷ ನಷ್ಟದಲ್ಲಿದ್ದ ಸಹಕಾರ ಸಂಘ ,ಎಲ್ಲಾ ಸದಸ್ಯರ ಹಾಗೂ ಚೆಟ್ಟಳ್ಳಿಯ ರೈತರ ಸಹಕಾರದಿಂದ ಇದೀಗ ೩೬ ಲಕ್ಷದ ೫೦ ಸಾವಿರ ರೂ ನಿವ್ವಳ ಲಾಭಗಳಿಸಿದೆ. ಸಹಕಾರ ಸಂಘಕ್ಕೆ ಸರ್ಕಾರದಿಂದ ೨೧ ಲಕ್ಷ ರೂ. ಬರಬೇಕಿದೆ. ಇದೀಗ ಇಡೀ ಭಾರತದಲ್ಲಿ ಪ್ರಪ್ರಥಮವಾಗಿ ಸಹಕಾರ ಸಂಘದಲ್ಲಿ ಮಣ್ಣು ಪರೀಕ್ಷಾ ಯಂತ್ರವನ್ನು ಸ್ಥಾಪಿಸಿರುವ ಹೆಗ್ಗಳಿಕೆ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಲ್ಲುತ್ತದೆ ಎಂದು ಮಣಿ ಉತ್ತಪ್ಪ ಹೇಳಿದರು.
ಆಧುನಿಕ ಸುಸಜ್ಜಿತವಾದ ಅತಿಥಿ ಗೃಹವನ್ನು ಸಹಕಾರ ಸಂಘದ ಪುಣ್ಯಕೋಟಿ ಭವನದಲ್ಲಿ ನಿರ್ಮಿಸಿದ್ದೇವೆ. ಆದರೆ ಅತಿಥಿ ಗೃಹಕ್ಕೆ ಪರವಾನಗಿ ನೀಡದೆ, ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ಸತಾಯಿಸುತ್ತಿದೆ, ಸಂಘದ ಸದಸ್ಯರಾದ ಕೆಲವು ಗ್ರಾಮ ಪಂಚಾಯಿತಿ ಸದಸ್ಯರು ಅತಿಥಿ ಪರವಾನಗಿ ನೀಡಲು ಸುಖಾಸುಮ್ಮನೆ ವಿರೋಧ ಪಡಿಸುತ್ತಿದ್ದಾರೆ. ಅತಿಥಿ ಗೃಹಕ್ಕೆ ಪರವಾನಗಿ ನೀಡುವ ವಿಷಯದಲ್ಲಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕರೆಯುವ ಸಾಮಾನ್ಯ ಸಭೆಗೆ ಗೈರು ಹಾಜರಾಗುತ್ತಿದ್ದಾರೆ. ಕಳೆದ ಹತ್ತು ತಿಂಗಳ ಹಿಂದೆ ಗ್ರಾಮ ಪಂಚಾಯಿತಿಗೆ ಅತಿಥಿ ಗೃಹಕ್ಕೆ ಪರವಾನಗಿ ನೀಡಬೇಕೆಂದು ಅರ್ಜಿ ಹಾಗೂ ಹಣವನ್ನು ಕೂಡ ಪಾವತಿಸಿದ್ದೇವೆ. ಆದರೆ ಇದುವರೆಗೆ ಪರವಾನಗಿ ನೀಡಿಲ್ಲ. ಈ ವಿಷಯದಲ್ಲಿ ಎಲ್ಲಾ ರೀತಿಯ ಕಾನೂನು ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಬಲ್ಲಾರಂಡ ಮಣಿ ಉತ್ತಪ್ಪ ಎಚ್ಚರಿಸಿದರು.
ಮಣ್ಣು ಪರೀಕ್ಷಾ ಯಂತ್ರವನ್ನು ಉದ್ಘಾಟಿಸಿ ಮಾತನಾಡಿದ ಮಾದೇಟಿರ ತಿಮ್ಮಯ್ಯ, ಇಡೀ ಭಾರತದಲ್ಲಿ ಸಹಕಾರ ಸಂಘದಲ್ಲಿ ಮಣ್ಣು ಪರೀಕ್ಷಾ ಯಂತ್ರವನ್ನು ಸ್ಥಾಪಿಸಿರುವ ಹೆಗ್ಗಳಿಕೆ ಬಲ್ಲಾರಂಡ ಮಣಿ ಉತ್ತಪ್ಪ ಅವರ ನೇತೃತ್ವದ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಲ್ಲುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಸನ್ಮಾನ: ಮಣ್ಣು ಪರೀಕ್ಷಾ ಯಂತ್ರ ಸ್ಥಾಪಿಸಲು ಸಹಕಾರ ಹಾಗೂ ಮಣ್ಣು ಪರೀಕ್ಷೆಯಿಂದ ರೈತರಿಗೆ ಆಗುವ ಉಪಯೋಗದ ಕುರಿತು ಮಾಹಿತಿ ನೀಡಿದ ಮಾದೇಟಿರ ತಿಮ್ಮಯ್ಯ ಅವರಿಗೆ ಸಹಕಾರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದಿAದ ಸಾಲ ಪಡೆದು ತನ್ನ ಚೊಚ್ಚಲ ಕೃತಿಯನ್ನು ಮುದ್ರಿಸಿ ಬಿಡುಗಡೆ ಮಾಡಿದ ಜಿಲ್ಲೆಯ ಯುವ ಪತ್ರಕರ್ತ ಇಸ್ಮಾಯಿಲ್ ಕಂಡಕರೆಯವರನ್ನು ಸಹಕಾರ ಸಂಘದಿAದ ಸನ್ಮಾನಿಸಿ ಗೌರವಿಸಲಾಯಿತು.
ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅತೀ ಹೆಚ್ಚು ಸಿಮೆಂಟ್ ಪಡೆದ ಸದಸ್ಯರಾದ ಯೋಗೇಶ್ ಭಟ್, ಬೋಪಯ್ಯ, ಅರುಣ್ ಸಿದ್ದಿಕಲ್, ಗುತ್ತಿಗೆದಾರರಾದ ಅಂಬುದಾಸ್ ಹಾಗೂ ನಂಜೇಗೌಡರ ಅವರಿಗೆ ಪ್ರೋತ್ಸಾಹ ಬಹುಮಾನ ನೀಡಲಾಯಿತು. ೭ ನೇ ಹಾಗೂ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಹಕಾರ ಸಂಘದ ಸದಸ್ಯರ ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಂದಿನಿ ಪ್ರಾರ್ಥನೆ ಮಾಡಿದರು. ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ
ಸ್ವಾಗತಿಸಿ, ಕಣಜಾಲು ಪೂವಯ್ಯ ವಂದಿಸಿದರು.
ವೇದಿಕೆಯಲ್ಲಿ ಸಹಕಾರ ಸಂಘದ ನಿರ್ದೇಶಕರಾದ, ಮರದಾಳು ಉಲ್ಲಾಸ್, ಪುತ್ತರೀರ ಸೀತಮ್ಮ, ಜಯ ಮುತ್ತಪ್ಪ, ಧನಂಜಯ, ಶಿವು ನಂಜಪ್ಪ, ಕಾಶಿ, ಶಾಂತಪ್ಪ ಹಾಗೂ ರಮೇಶ್ ಅಜಿತ್ ಇನ್ನಿತರರು ಹಾಜರಿದ್ದರು.
- ಕೆ.ಎಂ ಇಸ್ಮಾಯಿಲ್ ಕಂಡಕರೆ