ಮಡಿಕೇರಿ, ಅ. ೨೬: ಅಮ್ಮತ್ತಿ ಮುಂಡೋಣಿ ಗ್ರಾಮದಲ್ಲಿ ಕಾಡಾನೆಗಳ ದಾಳಿಗೆ ಕೃಷಿ ಫಸಲು ಹಾಗೂ ಕಾಫಿ ತೋಟ ಹಾನಿಯಾಗಿವೆ. ಅಲ್ಲಿನ ನಿವಾಸಿಗಳಾದ ಮಂಡೇಪAಡ ಲಾಲಾ ಮಂದಣ್ಣ ಹಾಗೂ ಲವ ಚಂಗಪ್ಪ ಅವರುಗಳ ಭತ್ತದ ಗದ್ದೆಗೆ ಇಳಿದಿರುವ ಆನೆಗಳು ಕೃಷಿ ಫಸಲನ್ನು ತುಳಿದು ನಾಶಪಡಿಸಿವೆ. ಇದರೊಂದಿಗೆ ಕಾಫಿ ಗಿಡಗಳು, ಅಡಿಕೆ ಮತ್ತಿತರ ಹಣ್ಣುಹಂಪಲು ಗಿಡಗಳೂ ಆನೆ ದಾಳಿಗೆ ನಾಶವಾಗಿವೆ. ಅಲ್ಲದೆ ಬೃಹತ್ ಕೆರೆಯೊಂದಕ್ಕೂ ಹಾನಿಯಾಗಿದೆ. ಮರಿ ಸಹಿತವಾಗಿ ಐದು ಆನೆಗಳ ಹಿಂಡು ಈ ವ್ಯಾಪ್ತಿಯಲ್ಲಿ ತಿರುಗಾಡುತ್ತಿದ್ದು, ಸ್ಥಳೀಯರು ಆತಂಕದಲ್ಲಿದ್ದಾರೆ. ಅರಣ್ಯ ಇಲಾಖೆಯವರು ನಷ್ಟಪರಿಹಾರದೊಂದಿಗೆ ಆನೆಗಳನ್ನು ಕಾಡಿಗಟ್ಟಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.