ಮಡಿಕೇರಿ, ಅ. ೨೫: ಸುಮಾರು ಒಂದೂವರೆ ವರ್ಷದಿಂದ ಶಾಲೆಯತ್ತ ಮುಖಮಾಡದೇ ಇದ್ದ ಮಕ್ಕಳು ಇಂದು ಸಂಭ್ರಮ-ಸಡಗರದಿAದ ಸಮವಸ್ತçಧಾರಿಗಳಾಗಿ ವಿದ್ಯಾ ದೇಗುಲಕ್ಕೆ ತೆರಳಿದರು. ಶಾಲಾ-ಶಿಕ್ಷಕರು, ಸಿಬ್ಬಂದಿ ವರ್ಗದವರು ಮಕ್ಕಳನ್ನು ವಿಶೇಷ ರೀತಿಯಲ್ಲಿ ಬರಮಾಡಿಕೊಂಡರು. ಕೆಲವೆಡೆ ಮಕ್ಕಳಿಗೆ ಗುಲಾಬಿ ಹೂ ನೀಡಿದರೆ, ಮತ್ತೆ ಕೆಲವು ಕಡೆಗಳಲ್ಲಿ ಸಿಹಿ ನೀಡಿ ವಿದ್ಯಾರ್ಥಿಗಳನ್ನು ಸ್ವಾಗತಿಸಲಾಯಿತು. ಶಿಕ್ಷಣದಲ್ಲಿ ಯಶಸ್ಸು ದೊರೆಯಲಿ ಎಂದು ಹಲವು ಮಕ್ಕಳು ದೇವಾಲಯಕ್ಕೆ ತೆರಳಿ ಪ್ರಾರ್ಥಿಸಿದರೆ, ಕುಶಾಲನಗರದ ಬಾಲಕನೋರ್ವ ತಾನು ಶಾಲೆಗೆ ತೆರಳುವ ಬೈಸಿಕಲ್‌ಗೆ ಪೂಜೆ ಸಲ್ಲಿಸಿ ಶಾಲೆಗೆ ತೆರಳಿದ್ದು ವಿಶೇಷವಾಗಿತ್ತು. ಸರಕಾರದ ಆದೇಶದನ್ವಯ
(ಮೊದಲ ಪುಟದಿಂದ) ಪಿ.ಯು, ಪ್ರೌಢ ಶಾಲೆ ಸೇರಿದಂತೆ ೬,೭ ನೇ ತರಗತಿಗಳೂ ಈ ಹಿಂದೆಯೇ ಪ್ರಾರಂಭಗೊAಡಿದ್ದು, ೧ ರಿಂದ ೫ನೇ ತರಗತಿಯ ಮಕ್ಕಳು ಇಂದಿನಿAದ ಶಾಲೆಗೆ ಹಾಜರಾಗಲು ಆದೇಶಿಸಿದ್ದು, ಕೊಡಗು ಜಿಲ್ಲೆಯಲ್ಲಿ ಒಟ್ಟು ಶೇ. ೫೩.೨ ಹಾಜರಾತಿ ದಾಖಲಾಗಿದೆ. ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ಕೊಠಡಿಗಳನ್ನೆಲ್ಲ ಸ್ಯಾನಿಟೈಸ್ ಮಾಡಲಾಗಿತ್ತು. ಮೊದಲನೆಯ ವಾರ ಅರ್ಧ ದಿನದವರೆಗೆ ಮಾತ್ರ ತರಗತಿಗಳು ನಡೆಯಲಿದ್ದು, ನ. ೨ ರಿಂದ ಪೂರ್ಣದಿನ ತರಗತಿಗಳು ನಡೆಯಲಿವೆ.
ಮಡಿಕೇರಿಯ ಜೂನಿಯರ್ ಕಾಲೇಜಿನಲ್ಲಿ ಚಿಣ್ಣರು ಮಾಸ್ಕ್ ಧರಿಸಿ ಶಿಸ್ತಿನಿಂದ ತಮ್ಮ ಪೋಷಕರೊಂದಿಗೆ ಶಾಲೆಗೆ ಆಗಮಿಸಿದರು. ಶಾಲಾ ಶಿಕ್ಷಕರು ಖುಷಿಯಿಂದ ವಿದ್ಯಾರ್ಥಿಗಳನ್ನು ತಮ್ಮ-ತಮ್ಮ ತರಗತಿಗಳಿಗೆ ಬರಮಾಡಿಕೊಂಡರು.ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಗೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಭೇಟಿ ನೀಡಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಶೈಕ್ಷಣಿಕ ಪಠ್ಯ ಕ್ರಮಗಳನ್ನು ಅನುಸರಿಸುವ ಬಗ್ಗೆ ಶಿಕ್ಷಕರಿಗೆ ತಿಳಿಸಿದರು.
ಮಕ್ಕಳನ್ನು ದಂಡಿಸದೇ ಪ್ರೀತಿಯಿಂದ ಮಾತನಾಡಿಸಿ. ನೇರವಾಗಿ ಪಾಠ ಮಾಡುವ ಬದಲು ಮಕ್ಕಳು ಶಾಲೆಯ ಪಠ್ಯ ಚಟುವಟಿಕೆಗಳ ವಾತಾವರಣಕ್ಕೆ ಹೊಂದಿಕೊಳ್ಳುವ ತನಕ ಕಾಯುವಂತೆ ತಿಳಿಸಿದರು.
ಒಂದೂವರೆ ವರ್ಷಗಳಿಂದ ಶಾಲೆಯ ಶಿಸ್ತು ಬದ್ದ ದಿನಚರಿಯಿಂದ ಹಳಿತಪ್ಪಿದ ಮಕ್ಕಳನ್ನು ಶಾಲೆಯ ಕಲಿಕಾ ಕ್ರಮಕ್ಕೆ ನಿಧಾನವಾಗಿ ಮಕ್ಕಳ ಮನಸ್ಸನ್ನು ಸೆಳೆಯುವ ಪ್ರಯತ್ನಕ್ಕೆ ಶಿಕ್ಷಕರು ಮುಂದಾಗಬೇಕು. ಮಕ್ಕಳ ಮೇಲೆ ಒತ್ತಡಗಳನ್ನು ಹೇರದೆ ಮೃದುತ್ವದಿಂದ ವರ್ತಿಸಿ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳುವAತೆ ಕ್ರಮ ಕೈಗೊಳ್ಳಿ ಎಂದು ಶಿಕ್ಷಕರಿಗೆ ಸಲಹೆ ನೀಡಿದರು.
ನಂತರ ವಿದ್ಯಾರ್ಥಿಗಳಿಗೆ ಹೂಗುಚ್ಚವನ್ನು ನೀಡಿ ಮಕ್ಕಳು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಮತ್ತು ಶಿಕ್ಷಕರು ಹೇಳುವ ಪಠ್ಯಪ್ರವಚನಗಳಿಗೆ ಮನಸ್ಸನ್ನು ಕೇಂದ್ರಿಕರಿಸಬೇಕೆAದು ತಿಳಿಸಿಕೊಟ್ಟರು.
ಮುಖ್ಯ ಶಿಕ್ಷಕ ಬಿ.ಆರ್. ಸತೀಶ್, ಸಹಶಿಕ್ಷಕರಾದ ಹೆಚ್.ಈ ಅನಿತಾಕುಮಾರಿ, ಬಿ. ಮಾಲಿನಿ, ಎನ್.ಕೆ. ಜಯಶ್ರೀ, ಎಂ.ಎನ್. ದಮಯಂತಿ, ಕೆ. ಶಾರದ, ಎಂ.ಸಿ. ಇಂದಿರಾ, ಕೆ.ಎಂ. ತ್ರಿವೇಣಿ, ಎಂ.ಟಿ. ಜೋಸ್ಲಿಯ, ಬಿ.ಎಂ. ನಿರ್ಮಲ, ಕೆ.ಎಂ. ಸರಸ್ವತಿ ಹಾಜರಿದ್ದರು.
ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಗೆ ಬಿ.ಇ.ಓ. ಶ್ರೀಶೈಲಾ ಬೀಳಗಿ ಅವರು ಭೇಟಿ ನೀಡಿದರು. ಅಕ್ಷರದಾಸೋಹ ಸಹಾಯಕ ನಿರ್ದೇಶಕ ರಾಜೇಶ್ ಹಾಗೂ ಮುಖ್ಯ ಶಿಕ್ಷಕ ವಿಜಯ್, ಸಿ.ಆರ್.ಪಿ ಜೀವನ್, ಬಿಸಿಯೂಟದ ಬಗ್ಗೆ ಪರಿಶೀಲನೆ ನಡೆಸಿದರು. ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಅತ್ತೂರು ಗ್ರಾಮದಲ್ಲಿ ಅನೇಕ ವರ್ಷಗಳಿಂದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನಡೆಯುತ್ತಿತ್ತು. ಆದರೆ ಶಾಲೆಗೆ ಮಕ್ಕಳ ಕೊರತೆಯಿಂದಾಗಿ ೨ ವರ್ಷಗಳಿಂದ ಮುಚ್ಚಲ್ಪಟ್ಟಿತ್ತು. ಇದೀಗ ಮಕ್ಕಳ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಶಾಲೆಯನ್ನು ಮತ್ತೆ ಪ್ರಾರಂಭಿಸಲಾಗಿದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಹಕಾರದೊಂದಿಗೆ ಅಲ್ಲಿನ ಅಂಗನವಾಡಿ ಶಿಕ್ಷಕಿ ಜ್ಯೋತಿ ಅವರ ಸತತ ಹೋರಾಟದೊಂದಿಗೆ ಇಂದು ಮತ್ತೆ ಶಾಲೆ ಪ್ರಾರಂಭಗೊAಡಿದೆ. ಶಾಲಾಪ್ರಾರಂಭೋತ್ಸವ ಸಂದÀರ್ಭ ಸಿ.ಆರ್.ಪಿ. ಸತ್ಯನಾರಾಯಣ, ಗ್ರಾ.ಪಂ. ಉಪಾಧ್ಯಕ್ಷೆ ಯಶೋಧ, ಸದಸ್ಯರಾದ ಕೆ.ಕೆ. ಚಿದಾನಂದ, ಲಕ್ಷö್ಮಣ, ರಮೇಶ್, ಸ್ಥಳೀಯರಾದ ದೇವಪ್ಪ, ವಸಂತಿ, ಶೈಲಾ ಮತ್ತು ಶಿಕ್ಷಕಿ ಶಾಂತಲಾ ಮಂತಾದವರು ಹಾಜರಿದ್ದರು.ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆ ಪ್ರಾಥಮಿಕ ವಿಭಾಗದಲ್ಲಿ ೧ ರಿಂದ ೫ ನೇ ತರಗತಿಗೆ ಶಾಲೆಯ ಆರಂಭದ ಮೊದಲ ದಿನ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳಿಗೆ ಹೂವು ಹಾಗೂ ಸಿಹಿ ನೀಡಿ ಶಾಲೆಗೆ ಬರಮಾಡಿಕೊಂಡರು. ಈ ಸಂದÀರ್ಭ ಮುಖ್ಯ ಶಿಕ್ಷಕ ವಿಜಯ್, ಸಮೂಹ ಸಂಪನ್ಮೂಲ ವ್ಯಕ್ತಿ ತಿರುನೆಲ್ಲಿಮಾಡ ಜೀವನ್ ಹಾಗೂ ಶಿಕ್ಷಕರು ಹಾಗೂ ಪೋಷಕರು ಹಾಜರಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಜೇಶ್ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು.ಕಡಂಗ ವಿಜಯ ಆಂಗ್ಲ ಮಾಧ್ಯಮ ಶಾಲೆಗೆ ಅತೀ ಉತ್ಸಾಹದಿಂದ ಪುಟಾಣಿಗಳು ಅತ್ಯಧಿಕ ಸಂಖ್ಯೆಯಲ್ಲಿ ತರಗತಿಗೆ ಹಾಜರಾದರು.
ವಿದ್ಯಾರ್ಥಿಗಳನ್ನು ಸಂಸ್ಥೆಯ ಮುಖ್ಯ ಉಪಾಧ್ಯಾಯಿನಿ ಬೋಜಮ್ಮ ಮತ್ತು ಶಿಕ್ಷಕ ವೃಂದದವರು ಸಿಹಿ ಹಂಚುವುದರ ಮೂಲಕ ಸ್ವಾಗತಿಸಿದರು.ಕೊರೊನಾ ಹಿನ್ನೆಲೆ ಸುದೀರ್ಘ ರಜೆಯ ನಂತರ ಮಕ್ಕಳು ಶಾಲೆ ಕಡೆಗೆ ಮುಖ ಮಾಡಿದ್ದು, ಈ ಸಂದರ್ಭ ಕುಶಾಲನಗರ ವ್ಯಾಪ್ತಿಯ ಹೆಚ್ಚಿನ ಪುಟಾಣಿಗಳು ದೇವಾಲಯದಲ್ಲಿ ತಮ್ಮ ಪೋಷಕರೊಂದಿಗೆ ಪೂಜೆ ಸಲ್ಲಿಸಿ ಶಾಲೆಗೆ ತೆರಳುತ್ತಿದ್ದ ದೃಶ್ಯ ಗೋಚರಿಸಿತು. ಇನ್ನೊಂದೆಡೆ ಬಾಲಕನೋರ್ವ ಸೈಕಲ್‌ಗೆ ದೇವಾಲಯದ ಮುಂದೆ ವಿಶೇಷ ಪೂಜೆ ಮಾಡಿಸಿ ನಂತರ ಶಾಲೆಯತ್ತ ತೆರಳುತ್ತಿದ್ದ ದೃಶ್ಯ ಕೂಡ ಕಂಡುಬAತು.ಪೊನ್ನAಪೇಟೆ ತಾಲೂಕಿನ ನಡಿಕೇರಿ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳನ್ನು ಗ್ರಾಮ ಪಂಚಾಯಿತಿ ಸದಸ್ಯ ಆಲೆಮಾಡ ನವೀನ್ ದೇವಯ್ಯ ನೋಟ್ ಪುಸ್ತಕ ಹಾಗೂ ಸಿಹಿ ಹಂಚಿ ಶಾಲೆಗೆ ಬರಮಾಡಿಕೊಂಡು, ಶುಭಕೋರಿದರು. ಈ ಸಂದÀರ್ಭ ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷೆ ಚೀರಂಡ ಯಶೋಧ, ಸದಸ್ಯ ಚೀರಂಡ ಕಂದ ಸುಬ್ಬಯ್ಯ, ಶಿಕ್ಷಕಿಯರು, ಪೋಷಕರು ಹಾಜರಿದ್ದರು.ಕಡಂಗ ಸರಕಾರಿ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಶಿಕ್ಷಕ ವೃಂದದವರು ಬಾಳೆಹಣ್ಣು ಮತ್ತು ಸಿಹಿ ಹಂಚುವುದರ ಮೂಲಕ ಸ್ವಾಗತಿಸಿದರು.
ಈ ಸಂದರ್ಭ ಪ್ರಭಾರ ಮುಖ್ಯ ಶಿಕ್ಷಕರಾದ ವಿಮಲಾ ಕೆ.ಎಂ., ಬಿ.ಎ. ಉತ್ತಪ್ಪ, ಬಬಿತಾ ಎ.ಟಿ., ವತ್ಸಲ ಮತ್ತು ಶಾಲಾ ಸಿಬ್ಬಂದಿ ಹಾಜರಿದ್ದರು.ಸಿದ್ದಾಪುರ, ನೆಲ್ಲಿಹುದಿಕೇರಿ ಹಾಗೂ ಅಮ್ಮತ್ತಿ ಭಾಗದ ಬೈರಂಬಾಡ, ಹಚ್ಚಿನಾಡು, ಮಗ್ಗುಲ ಭಾಗದಲ್ಲಿ ಮಕ್ಕಳನ್ನು ಶಾಲೆಯ ಗೇಟ್ ಬಳಿ ಶಿಕ್ಷಕರು ಸ್ವಾಗತಿಸಿ ಬರಮಾಡಿಕೊಂಡರು. ಅಲ್ಲದೆ ಮಕ್ಕಳಿಗೆ ಸಿಹಿ ಹಂಚಿದರು. ಹೂಗಳನ್ನು ನೀಡಿದರು. ಮಕ್ಕಳು ಸಂತಸದಲ್ಲಿ ತರಗತಿಗಳಿಗೆ ತೆರಳಿದರು.ಸೋಮವಾರಪೇಟೆ: ಕೊರೊನಾ ಹಿನ್ನೆಲೆ ಮುಚ್ಚಲ್ಪಟ್ಟಿದ್ದ ಪ್ರಾಥಮಿಕ ಶಾಲೆಗಳು ಇಂದಿನಿAದ ಪುನರಾರಂಭಗೊAಡಿದ್ದರಿAದ ಮಕ್ಕಳು ಸಂಭ್ರಮದಿAದ ಶಾಲೆಗಳಿಗೆ ಆಗಮಿಸಿದರು.
ಮುಂಜಾಗ್ರತಾ ಕ್ರಮವಾಗಿ ಶಾಲಾ ಕೊಠಡಿಗಳನ್ನು ಸ್ಯಾನಿಟೈಸ್ ಮಾಡಿ ಶುಚಿಗೊಳಿಸಲಾಗಿದ್ದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆ ಒಂದು ಬೆಂಚ್‌ನಲ್ಲಿ ಈರ್ವರು ವಿದ್ಯಾರ್ಥಿಗಳಿಗೆ ಮಾತ್ರ ಕುಳಿತುಕೊಳ್ಳಲು ಅವಕಾಶ ನೀಡಲಾಗಿದೆ.
ಹಲವಷ್ಟು ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕರೆತಂದು ವ್ಯವಸ್ಥೆಗಳನ್ನು ಪರಿಶೀಲಿಸಿದರು. ಕೆಲವೊಂದು ಶಾಲೆಗಳಲ್ಲಿ ಶಿಕ್ಷಕರು ಹಾಗೂ ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳು ಮಕ್ಕಳಿಗೆ ಹೂಗಳನ್ನು ನೀಡಿ ಸ್ವಾಗತಿಸಿದರು.