ಶಸ್ತç ಚಿಕಿತ್ಸೆ ಮೂಲಕ ಹೊರತೆಗೆದ ವೈದ್ಯರು
ಮಡಿಕೇರಿ, ಅ. ೨೫: ಅಪರೂಪದಲ್ಲಿ ಬಲು ಅಪರೂಪದ ಪ್ರಕರಣದಲ್ಲಿ ಯುವತಿಯ ಹೊಟ್ಟೆಯಲ್ಲಿದ್ದ ಒಂದೂವರೆ ಕೆಜಿ ತೂಕದ ಕೂದಲಿನ ಗೆಡ್ಡೆಯನ್ನು ಹೊರತೆಗೆಯುವಲ್ಲಿ ಜಿಲ್ಲಾಸ್ಪತ್ರೆಯ ವೈದ್ಯರು ಯಶಸ್ವಿಯಾಗಿದ್ದಾರೆ.
ಹೊಟ್ಟೆ ನೋವು ಎಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ೨೦ರ ಹರಯದ
(ಮೊದಲ ಪುಟದಿಂದ) ಯುವತಿಯನ್ನು ಪರೀಕ್ಷೆಗೊಳ ಪಡಿಸಿದಾಗ ಆಕೆಯ ಹೊಟ್ಟೆಯಲ್ಲಿ ಕೂದಲಿನ ಕಪ್ಪಾದ ಗೆಡ್ಡೆ ಗೋಚರಿಸಿದೆ. ಹೊಟ್ಟೆ ನೋವಿನಿಂದಾಗಿ ಏನೂ ತಿಂದರೂ ವಾಂತಿ ಮಾಡಿಕೊಳ್ಳುತ್ತಿದ್ದ ಆಕೆ ನಿಕೃಷವಾಗಿ, ಆಕೆಯಲ್ಲಿ ರಕ್ತದ ಪ್ರಮಾಣವೂ ಕಡಿಮೆಯಾಗಿತ್ತು. ಆಕೆಗೆ ರಕ್ತ ಕೊಡಿಸಿ ಉಪಚರಿಸಿದ ಬಳಿಕ ಶಸ್ತç ಚಿಕಿತ್ಸೆ ಮಾಡಿ ಗೆಡ್ಡೆಯನ್ನು ಹೊರತೆಗೆಯಲಾಗಿದೆ. ಗೆಡ್ಡೆ ಒಂದೂವರೆ ಕೆಜಿ ತೂಕವಿದ್ದು, ಇದೀಗ ಯುವತಿ ಆರೋಗ್ಯದಿಂದಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದೊಂದು ಅಪರೂಪದ ಪ್ರಕರಣವಾಗಿದೆ. ‘ಟ್ರೆöÊಕೊಬಸಾರ್’ ಎಂದು ಕರೆಯಲ್ಪಡುವ ಈ ಪ್ರಕರಣ ಜಿಲ್ಲೆಯಲ್ಲಿ ಪ್ರಥಮವಾಗಿದೆ. ಕೂದಲು ತಿನ್ನುವದರಿಂದ ಅದು ಜೀರ್ಣವಾಗದೆ ಗೆಡ್ಡೆಯ ರೂಪ ತಾಳುತ್ತದೆ. ಇದೂ ಜೀವಕ್ಕೂ ಅಪಾಯಕಾರಿ. ಈ ಪ್ರಕರಣದಲ್ಲಿ ಶಸ್ತçಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೆಡಿಕಲ್ ಸೈನ್ಸ್ನ ಸಹಾಯಕ ಪ್ರಾಧ್ಯಾಪಕ ಡಾ.ಹೆಚ್.ಅಜಿತ್‌ಕುಮಾರ್, ಡಾ.ಅಭಿನಂದನ್, ಡಾ.ಪೊನ್ನಪ್ಪ, ಡಾ.ಪ್ರವೀಣ್‌ಕುಮಾರ್, ಡಾ.ತಾರಾನಂದನ್, ಡಾ.ಪ್ರದೀಪ್ ಶಸ್ತç ಚಿಕಿತ್ಸೆ ನಡೆಸಿ ಗೆಡ್ಡೆ ಹೊರತೆಗೆದಿದ್ದಾರೆ. ?ಸಂತೋಷ್