ಮಡಿಕೇರಿ,ಅ.೨೫: ಹಾಕಿ ಇಂಡಿಯಾ ವತಿಯಿಂದ ಜಾರ್ಖಂಡ್‌ನಲ್ಲಿ ನಡೆಯುತ್ತಿರುವ ರಾಷ್ಟಿçÃಯ ಬಾಲಕಿಯರ ಜೂನಿಯರ್ ಹಾಕಿ ಪಂದ್ಯಾವಳಿಯಲ್ಲಿ ಕೊಡಗಿನ ಆಟಗಾರ್ತಿಯರನ್ನೊಳಗೊಂಡ ಹಾಕಿ ಕರ್ನಾಟಕ ತಂಡ ಪಾಂಡಿಚೇರಿ ತಂಡದ ವಿರುದ್ಧ ಜಯಗಳಿಸಿದೆ.

ತಾ.೨೪ರಂದು ನಡೆದ ಪಂದ್ಯಾಟದಲ್ಲಿ ಪಾಂಡಿಚೇರಿ ವಿರುದ್ಧ ೧೨-೧ ಗೋಲುಗಳ ಅಂತರದಲ್ಲಿ ಭರ್ಜರಿ ಜಯಗಳಿಸಿದೆ. ತಂಡದ ಪರವಾಗಿ ಜಾಹ್ನವಿ ಹಾಗೂ ದೇಚಮ್ಮ ತಲಾ ೩, ಆದಿರ ೨, ಶಯ, ಕಾವ್ಯ ಹಾಗೂ ಚಂದನ ತಲಾ ೧ ಗೋಲು ಗಳಿಸಿದರು. ತಂಡ ಉತ್ತಮವಾಗಿ ಆಡಿ ಗೆಲುವು ಸಾಧಿಸಿದರೂ ಸರಣಿಯಲ್ಲಿ ಮೂರು ಪಂದ್ಯದಲ್ಲಿ ಗೆಲುವು ಸಾದಿಸಿದರೆ ಮಾತ್ರ ಮುಂದಿನ ºಂತಕ್ಕೆ ಪ್ರವೇಶಾವಕಾಶ ವಿತ್ತು. ಪಂಜಾಬ್ ವಿರುದ್ಧ ಒಂದು ಗೋಲಿನ ಅಂತರದಲ್ಲಿ ಸೋಲಪ್ಪಿದ್ದರಿಂದ ಮುಂದಿನ ಹಂತಕ್ಕೆ ಪ್ರವೇಶ ಪಡೆಯಲು ಸಾಧ್ಯವಾಗದೆ ವಾಪಸ್ ಮರಳುವಂತಾಗಿದೆ. ಮೊದಲ ಪಂದ್ಯದಲ್ಲಿ ತಂಡವು ಹಾಕಿ ಬೆಂಗಾಲ್ ವಿರುದ್ಧ ೧೬-೦ ಅಂತರದ ಭಾರೀ ಜಯ ಸಾಧಿಸಿತ್ತು. ?ಸಂತೋಷ್