ಚೆಟ್ಟಳ್ಳಿ, ಅ. ೨೫: ಬೆಳ್ಳÀಂಬೆಳಗ್ಗೆ ಜೆಸಿಬಿ ಮೂಲಕ ಚೆಟ್ಟಳ್ಳಿ ಸಮೀಪದ ಅಬ್ಯಾಲದ ಅಪಾಯಕಾರಿ ಬರೆ ಯನ್ನು ಏಕಾಏಕಿ ಎಳೆದು ಮಣ್ಣನ್ನೆಲ್ಲಾ ಲಾರಿಗೆ ತುಂಬಿ ತಡೆಗೋಡೆ ಕಾಮಗಾರಿಗೆ ಹಾಕಲಾಗುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರಾದ ವಕೀಲ ಕಡೇಮಾಡ ವಿನ್ಸಿ ಅಪ್ಪಯ್ಯ ಜೆಸಿಬಿಯನ್ನು ತಡೆದರು. ಮಣ್ಣನ್ನು ಎಳೆದರೆ ಭಾರೀ ಅಪಾಯವಿದೆ ಎಂದು ತಿಳಿಸಿದರೂ ಜೆಸಿಬಿಯಿಂದ ಬರೆಯನ್ನು ಎಳೆಯತೊಡಗಿದ ಪರಿಣಾಮ ೧೧೨ ಪೊಲೀಸ್ ಕಂಟ್ರೋಲ್ ರೂಂಗೆ ದೂರು ನೀಡಿದ್ದರಿಂದ ಪೊಲೀಸರು ಸ್ಥಳಕ್ಕೆ ಆಗಮಿಸಿದರು.

ಕಳೆದೆರಡು ವರ್ಷಗಳ ಹಿಂದೆ ಮಳೆಯಿಂದ ಚೆಟ್ಟಳ್ಳಿ- ಕತ್ತಲೆಕಾಡು ರಸ್ತೆಯ ಅಪಾಯಕಾರಿ ಬರೆಗಳು ಭಾರೀ ಪ್ರಮಾಣದಲ್ಲಿ ಕುಸಿದವು. ವಾರಗಟ್ಟಲೆ ರಸ್ತೆ ಸಂಪರ್ಕ ಕಡಿತ ಗೊಂಡ ಪರಿಣಾಮ ಬರೆಯನ್ನೆಲ್ಲ್ಲಾ ತೆರವುಗೊಳಿಸಿ ರಸ್ತೆ ಸಂಪರ್ಕಕ್ಕೆ ಅನುವು ಮಾಡಿಕೊಡಲಾಯಿತು. ಅಪಾಯದಂಚಿನ ಹಲವು ಬರೆಗಳಿಗೆ ಅತಿವೃಷ್ಟಿ ಪರಿಹಾರ ನಿಧಿಯಿಂದ ತಡೆಗೋಡೆ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮೂಲಕ ಹಣ ಬಿಡುಗಡೆಗೊಂಡು ಕಳೆದ ಬಾರಿಯಿಂದ ತಡೆಗೋಡೆ ಕಾಮಗಾರಿ ಹಂತಹAತವಾಗಿ ನಡೆಯುತ್ತಿದೆ.

ಅವೈಜ್ಞಾನಿಕ ಕಾಮಗಾರಿ ಆರೋಪ

ಕತ್ತಲೆಕಾಡಿನಿಂದ- ಅಬ್ಯಾಲ ದವರೆಗೆ ಬರೆ ಜರಿದು ಪ್ರಪಾತ ಕಾಣುತ್ತಿದೆ. ತಡೆಗೋಡೆ ಕಾಮಗಾರಿ ಅವೈಜ್ಞಾನಿಕವಾಗಿ ನಿರ್ಮಾಣ ವಾಗುತ್ತಿದೆ. ಅಧಿಕಾರಿಗಳಾಗಲಿ, ಇಂಜಿನಿಯರ್‌ಗಳಾಗಲಿ, ಗುತ್ತಿಗೆದಾರ ರಾಗಲಿ ಇತ್ತ ಸುಳಿಯುತ್ತಿಲ್ಲ. ಸುತ್ತಲಿನ ಅಪಾಯಕಾರಿ ಬರೆಯನ್ನೇ ಕೊರೆದು ತಡೆಗೋಡೆಗೆ ಮಣ್ಣನ್ನು ತುಂಬಿಸ ಲಾಗುತ್ತಿದೆ ಎಂದು ವಕೀಲ ಕಡೇಮಾಡ ವಿನ್ಸಿ ಅಪ್ಪಯ್ಯ ಆರೋಪಿಸಿದರು. ಸ್ಥಳೀಯರು ಎಚ್ಚೆತ್ತುಕೊಳ್ಳದಿದ್ದರೆ ಚೆಟ್ಟಳ್ಳಿ - ಮಡಿಕೇರಿ ರಸ್ತೆ ಸಂಪರ್ಕ ಶಾಶ್ವತವಾಗಿ ಕಡಿತಗೊಳ್ಳುವ ಸಾಧ್ಯತೆ ಇದೆ ಎಂದು ಐಚೆಟ್ಟಿರ ಪ್ರಮೋದ್ ಹೇಳಿದರು.

ಬೆಟ್ಟಗುಡ್ಡಗಳನ್ನು ಕೊರೆದು ಕಾವiಗಾರಿ ನಡೆಸಲು ಜಿಲ್ಲಾಧಿಕಾರಿ ಆದೇಶದ ಜೊತೆಗೆ ಸಂಬAಧಪಟ್ಟ ಇಲಾಖೆಯ ಅನುಮತಿ ಬೇಕಿದೆ. ಆದರೆ ಇಲ್ಲಿ ಯಾವುದೇ ಅನುಮತಿ ಇಲ್ಲದೆ ಅಬ್ಯಾಲದ ಅಪಾಯಕಾರಿ ಬರೆಗಳನ್ನು ಕೊರೆಯಲಾಗುತ್ತಿದೆ ಎಂಬ ಆರೋಪ ವ್ಯಕ್ತವಾಯಿತು.

ಮಳೆಗೆ ೬ ಎಕರೆ ಮಣ್ಣುಪಾಲು

ಕಳೆದೆರಡು ವರ್ಷದ ಭಾರೀ ಮಳೆಗೆ ಹಾಗೂ ಖಾಸಗಿ ನೆಟ್‌ವರ್ಕ್ ಕಂಪೆÀನಿಯೊAದು ಕೇಬಲ್ ಅಳವಡಿಸಲು ಚರಂಡಿ ತೆಗೆದ ಪರಿಣಾಮ ಸ್ಥಳೀಯರಾದ ವಕೀಲ ಕಡೇಮಾಡ ವಿನ್ಸಿ ಅಪ್ಪಯ್ಯ ಅವರ ೬ ಎಕರೆ ಕಾಫಿ ತೋಟದ ಜಾಗ ಜರಿದು ಮಣ್ಣುಪಾಲಾಗಿದೆ. ಮುಂದೆ ಅಪಾಯವಿದೆ ಎಂದು ಹಲವು ಅಧಿಕಾರಿಗಳಿಗೆ ತಿಳಿಸಿದರೂ ಅವೈಜ್ಞಾನಿಕ ಕಾಮಗಾರಿ ಮಾಡುತ್ತಿದ್ದಾರೆ ಎಂದು ಕಡೇಮಾಡ ವಿನ್ಸಿ ಅಪ್ಪಯ್ಯ ದೂರಿದರು.

ಅಪಾಯ ಕಾದಿದೆ

ಚೆಟ್ಟಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಈರಳೆವಳಮುಡಿ ಗ್ರಾಮದಲ್ಲಿ ಹಲವು ಕುಟುಂಬಗಳು ವಾಸವಿದ್ದು ಪ್ರತೀ ವರ್ಷದ ಮಳೆಗೆ ಸುತ್ತಲ ಬೆಟ್ಟಗುಡ್ಡಗಳು ಜರಿದು ನಷ್ಟ ಸಂಭವಿಸುತ್ತಿದೆ. ಅಬ್ಯಾಲದ ಮುಖ್ಯ ರಸ್ತೆಯ ಅವೈಜ್ಞಾನಿಕ ತಡೆಗೋಡೆ ನಿರ್ಮಾಣ ಹಾಗೂ ಬೆಟ್ಟವನ್ನು ಕೊರೆದು ಮಣ್ಣನ್ನು ತೆಗೆಯುವುದರ ಪರಿಣಾಮ ಮುಂದಿನ ದಿನಗಳಲ್ಲಿ ಈರಳೆ ಗ್ರಾಮಕ್ಕೆ ಭಾರೀ ಅಪಾಯ ಕಾದಿದೆ ಎಂದು ಈರಳೆ ಭಗವತಿ ದೇವಾಲಯ ಸಮಿತಿಯ ಮುಖ್ಯಸ್ಥ ಪೊರಿಮಂಡ ದಿನಮಣಿ ಪೂವಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಜಿಲ್ಲಾಧಿಕಾರಿ - ಪೋಲೀಸ್ ಇಲಾಖೆಗೆ ದೂರು

ಅಬ್ಯಾಲದ ಅಪಾಯಕಾರಿ ಬರೆಯ ಮಣ್ಣನ್ನು ಜೆಸಿಬಿಯಲ್ಲಿ ತೆಗೆಯಲಾಗುತ್ತಿದೆ ಎಂಬ ಬಗ್ಗೆ ೧೧೨ ಕಂಟ್ರೋಲ್ ರೂಂಗೆ ದೂರು ನೀಡಿದ ಹಿನ್ನೆಲೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ಸ್ಥಳೀಯರಾದ ಬಿದ್ದಂಡ ಮಾದಯ್ಯ, ಮುಳ್ಳಂಡ ಪ್ರಭ ತಿಮ್ಮಯ್ಯ ಹಾಗೂ ಐಚೆಟ್ಟಿರ ಮಾಚಯ್ಯ ಚೆಟ್ಟಳ್ಳಿ ಠಾಣಾಧಿಕಾರಿ ಗೆ ದೂರು ನೀಡಿದರೆ, ಬಿದ್ದಂಡ ಮಾದಯ್ಯ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ ಪರಿಣಾಮ ಮುಂದಿನ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ. ಸಂಜೆ ಸಹಾಯಕ ಕಾರ್ಯಪಾಲಕ ಅಭಿಯಂತರ ಮೋಹನ್ ಕುಮಾರ್ ಹಾಗೂ ಅಭಿಯಂತರ ಪೀಟರ್ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು.

ಸಂಬAಧಪಟ್ಟ ಅಧಿಕಾರಿ ಗಳಿಗೆ ಹಲವು ಬಾರಿ ದೂರು ಸಲ್ಲಿಸಿದರೂ, ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎರಡು ದಿನಗಳಲ್ಲಿ ಬೆಂಗಳೂರಿನ ಲೋಕಾಯುಕ್ತ ಕಚೇರಿಗೆ ಖುದ್ದಾಗಿ ತೆರಳಿ ಕತ್ತಲೆಕಾಡಿನಿಂದ ಅಬ್ಯಾಲದವರೆಗೆ ಆದ ಅವೈಜ್ಞಾನಿಕ ಕಾಮಗಾರಿ ಬಗ್ಗೆ ದೂರು ಸಲ್ಲಿಸುತ್ತೇನೆಂದು ವಕೀಲ ವಿನ್ಸಿ ಅಪ್ಪಯ್ಯ ತಿಳಿಸಿದ್ದಾರೆ.

-ಪುತ್ತರಿರ ಕರುಣ್ ಕಾಳಯ್ಯ