ಮಡಿಕೇರಿ, ಅ. ೨೫: ರಾಜ್ಯಾದ್ಯಂತ ಅಕ್ಟೋಬರ್ ತಿಂಗಳಿನಲ್ಲಿ ಸಾಲ ಸಂಪರ್ಕ ಕಾರ್ಯಕ್ರಮ ಹಮ್ಮಿಕೊಂಡಿದ್ದು,ಕೊಡಗು ಜಿಲ್ಲೆಯಲ್ಲಿ ದಿನಾಂಕ ೨೨-೧೦-೨೦೨೧ ರಂದು ನಡೆದಿದೆ. ಆದರೆ ಕಾರ್ಯಕ್ರಮದ ನಂತರ ಹಲವಾರು ಗ್ರಾಹಕರಿಗೆ ಫೋನ್ ಮೂಲಕ ಸಂಪರ್ಕಿಸಿ ಸಾಲ ಕೊಡಿಸುವ ವಿಚಾರ ಪ್ರಸ್ತಾಪ ಮಾಡುತ್ತ ಪಾನ್ ಕಾರ್ಡ್,ಆಧಾರ ಕಾರ್ಡ್, ವೋಟರ್ ಐಡಿ, ರೇಷನ್ ಕಾರ್ಡ್, ವಿದ್ಯುತ್ ಬಿಲ್, ಬ್ಯಾಂಕ್ ಪಾಸ್‌ಬುಕ್, ಗ್ಯಾಸ್ ಬುಕ್ ಗಳ ಪ್ರತಿ ಹಾಗೂ ಎರಡು ಪಾಸ್‌ಪೋರ್ಟ್ ಸೈಜ್ ಫೋಟೋಗಳನ್ನು ವಾಟ್ಸಾö್ಯಪ್ ಮೂಲಕ ಕಳಿಸಲು ಹೇಳುತ್ತಿದ್ದಾರೆ.

ನವದೆಹಲಿಯಲ್ಲಿ ಸಾಲ ಮಂಜೂರಾತಿ ಮಾಡಿದ ನಂತರ ಸಂಸ್ಕರಣಾ ಶುಲ್ಕವನ್ನು, ತೆಗೆದುಕೊಳ್ಳುವ ಸಾಲದ ಮೇಲೆ ೩,೫೦೦/-ದಿಂದ ೧೦,೦೦೦/-ರೂಗಳ ವರೆಗೆ ಗ್ರಾಹಕರಿಗೆ ಹಣ ಕಳಿಸಲು ತಿಳಿಸುತ್ತಾರೆ. ಇಂತಹ ಹಲವಾರು ಘಟನೆಗಳು ಕಳೆದ ಎರಡು ದಿನಗಳಿಂದ ಕೊಡಗಿನಲ್ಲಿ ನಡೆಯುತ್ತಿದ್ದು, ಸಾರ್ವಜನಿಕರು ಈ ಬಗ್ಗೆ ಎಚ್ಚರ ವಹಿಸಬೇಕಿದೆ. ನಕಲಿ ಕರೆಗಳ ಮೂಲಕ ವಂಚಿಸುವ ಪ್ರಕರಣದ ಬಗ್ಗೆ ಎಚ್ಚರಿಕೆ ವಹಿಸಬೇಕು.ನಕಲಿ ಫೋನ್ ಕರೆಗಳ ಮೂಲಕ ಬ್ಯಾಂಕ್ ಅಧಿಕಾರಿಗಳೆಂದು ನಂಬಿಸಿ ವಂಚಿಸುವ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಲೇ ಇವೆ.

ಫೇಸ್‌ಬುಕ್, ವಾಟ್ಸಾö್ಯಪ್, ನಕಲಿ ಕರೆಗಳ ಮೂಲಕ ವಂಚಿಸುವ ಪ್ರಕರಣದ ಬಗ್ಗೆ ಎಚ್ಚರಿಕೆ ವಹಿಸದಿದ್ದಲ್ಲಿ ವಂಚನೆಗೊಳಗಾಗುವುದು ಖಚಿತ. ಕೇಂದ್ರ ಸರ್ಕಾರ ಘೋಷಿಸಿರುವ ಸಾಲ ಸಂಪರ್ಕ ಯೋಜನೆಯ ನಿರ್ಧಾರದ ದುರುಪಯೋಗ ಪಡೆದುಕೊಂಡು ಗ್ರಾಹಕರನ್ನು ವಂಚಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಬಗ್ಗೆ ಎಚ್ಚರಿಕೆ ಯಿಂದ ಇರುವಂತೆ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ನ ಮುಖ್ಯಸ್ಥರಾದ ಆರ್. ಕೆ ಬಾಲಚಂದ್ರ ಮನವಿ ಮಾಡಿದ್ದಾರೆ.

ಸಾಲ ಸಂಪರ್ಕ ಯೋಜನೆಯ ಹೆಸರಿನಲ್ಲಿ ಬ್ಯಾಂಕ್ ಅಧಿಕಾರಿ ಎಂದು ಹೇಳಿಕೊಂಡು ಯಾರಾದರೂ ಕರೆ ಮಾಡಿ ತಮ್ಮ ಮೊಬೈಲ್ ಸಂಖ್ಯೆಗೆ ಬಂದಿರುವ ಒಂದು ಬಾರಿಯ ರಹಸ್ಯ ಸಂಖ್ಯೆ (ಒ.ಟಿ.ಪಿ) ಹಂಚಿಕೊಳ್ಳುವAತೆ ಕೇಳಿದರೆ ಅದಕ್ಕೆ ಪ್ರತಿಕ್ರಿಯೆ ನೀಡಬೇಡಿ. ಯಾವುದೇ ಕಾರಣಕ್ಕೂ ಬ್ಯಾಂಕಿAಗ್ ವಹಿವಾಟಿಗೆ ಸಂಬAಧಿಸಿದ ಒ.ಟಿ.ಪಿ., ಡೆಬಿಟ್ ಕಾರ್ಡ್ ಹಿಂಭಾಗದಲ್ಲಿರುವ ಸಿ.ವಿ.ವಿ., ಪಿನ್, ಆನ್‌ಲೈನ್ ಬ್ಯಾಂಕಿAಗ್ ಪಾಸ್‌ವರ್ಡ್ ಅಥವಾ ಪಿನ್‌ಅನ್ನು ಯಾರೊಂದಿಗೂ ಹಂಚಿಕೊಳ್ಳದಿರಿ ಎಂದು ಸ್ಪಷ್ಟ ಸೂಚನೆ ನೀಡಿದೆ.

ಅನಿರೀಕ್ಷಿತವಾಗಿ ಒಂದು ಕಾಲ್ ಬರುತ್ತದೆ. ಅದರಲ್ಲಿ ಹೀಗೆ ಹೇಳುತ್ತಾರೆ, ‘ಸರ್ಕಾರದ ಕಡೆಯಿಂದ ಸಾಲ ಸಂಪರ್ಕ ದ ಯೋಜನೆ ಯಲ್ಲಿ ಹಣ ನೀಡುತ್ತಿದ್ದೇವೆ, ಇಲ್ಲವೇ ಪ್ರಧಾನಮಂತ್ರಿಗಳ ಜನ್‌ಧನ್ ಖಾತೆಗೆ ಹಣ ಬರುತ್ತದೆ. ನಿಮಗೆ ಒಂದು ಓ.ಟಿ.ಪಿ. ಬರುತ್ತದೆ. ಆ ಒ.ಟಿ.ಪಿ. ನಮಗೆ ಹೇಳಿದ ತಕ್ಷಣ ನಿಮ್ಮ ಖಾತೆಗೆ ಹಣ ಜಮೆ ಆಗುತ್ತೆ’ ಇದು ವಂಚನೆಯ ಜಾಲವಾಗಿದೆ. ಒ.ಟಿ.ಪಿ.ಯನ್ನು ಕಾಲ್ ಮಾಡಿದವರಿಗೆ ನೀಡಿದರೆ, ಆಗ ನಿಮ್ಮ ಖಾತೆಯಲ್ಲಿರುವ ಹಣವೆಲ್ಲಾ ಅವರ ಖಾತೆಗಳಿಗೆ ವರ್ಗಾಯಿಸಲ್ಪಡುತ್ತದೆ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕಿನ ಮುಖ್ಯಸ್ಥ ಆರ್. ಕೆ. ಬಾಲಚಂದ್ರ ತಿಳಿಸಿದ್ದಾರೆ.